ಗಂಗಾವತಿ: ಮೂರನೇ ವ್ಯಕ್ತಿ (ಥರ್ಡ್ ಪಾರ್ಟಿ) ಪರಿಶೀಲನೆ ಇಲ್ಲ,ಅಧಿಕಾರಿಗಳ ಭೇಟಿಯಿಲ್ಲ.ಗುಣಮಟ್ಟದ ಭರವಸೆ ಇಲ್ಲ.ನಿಗದಿತ ಕಾಲಾವಧಿ ಮುಗಿದು ತಿಂಗಳುಗಳು ಉರಳಿದರೂ ಕಾಮಗಾರಿ ಪೂರ್ಣವಿಲ್ಲ. ಅಸಲಿಗೆ ಅಲ್ಲಿ ಡಾಂಬರ್ ರಸ್ತೆಯೇ ಇಲ್ಲದಿದ್ದರೂ, ರಸ್ತೆ ನಿರ್ಮಿಸಲಾಗಿದೆ ಎಂದು ಬಿಲ್ ಎತ್ತಲಾಗುತ್ತಿದೆ.ಇದು ತಾಲ್ಲೂಕಿನ ಶ್ರೀರಾಮನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ 6ನೇ ವಾರ್ಡ್ ಬಂಜಾರ ಕಾಲನಿಯಲ್ಲಿ ಡಾಂಬರ್ ರಸ್ತೆ ನಿರ್ಮಿಸದಿದ್ದರೂ ಬಿಜೆಪಿ ಮುಖಂಡ ಕಮ್ ಗುತ್ತಿಗೆದಾರರೊಬ್ಬರು ಬಿಲ್ ಎತ್ತುವ ಹವಣಿಕೆಯಲ್ಲಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಅಂಜೂರಿ ಕ್ಯಾಂಪ್ ರಸ್ತೆ (ಅಶ್ವಿನಿ ಆಸ್ಪತ್ರೆ ಪಕ್ಕದಿಂದ)ಯಿಂದ ರಾಮಯ್ಯ ತಾತ ಕೆರೆವರೆಗೆ ಒಟ್ಟು ಅರ್ಧ ಕಿಲೋಮೀಟರ್ ಪೈಕಿ ಜಿಲ್ಲಾ ಪಂಚಾಯಿತಿಯ 50;54 ಯೋಜನೆಯಡಿ 420 ಮೀಟರ್ ರಸ್ತೆ ನಿರ್ಮಾಣಕ್ಕೆ ರೂ. 6.5 ಲಕ್ಷ ಮಂಜೂರಾಗಿದೆ ಎಂದು ಅಧಿಕಾರಿ ಮೂಲ ತಿಳಿಸಿವೆ.‘ಕಳೆದ ನಾಲ್ಕು ತಿಂಗಳ ಹಿಂದೆಯೆ ರಸ್ತೆ ಕಾಮಗಾರಿ ಆರಂಭಿಸಲಾಗಿದೆಯಾದರೂ ಇದುವರೆಗೂ ಪೂರ್ಣಗೊಳಿಸಿಲ್ಲ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟದ ಪರೀಕ್ಷೆ ಮಾಡಿಲ್ಲ’ ಎಂದು ವಾರ್ಡ್ ನಿವಾಸಿ ಮಲ್ಲೇಶ ಜಾಧವ, ಶಂಕರ ರಾಠೋಡಆರೋಪಿಸಿದ್ದಾರೆ.
‘ಗುತ್ತಿಗೆದಾರರು ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಮುಗಿಸದ್ದರಿಂದ ರಸ್ತೆಯೂದ್ಧಕ್ಕೂ ದೊಡ್ಡಗಾತ್ರದ ಜಲ್ಲಿಕಲ್ಲುಗಳು ಕಿತ್ತು ಬಂದು ಮಹಿಳೆ ಮತ್ತು ವೃದ್ಧರ ಓಡಾಟಕ್ಕೆ ತೊಂದರೆಯಾಗಿದೆ’ ಎಂದು ಸುರೇಶ ರಾಠೋಡ, ಗೋಪಿ ರಾಠೋಡ ತಿಳಿಸಿದ್ದಾರೆ.

‘ಹದಗೆಟ್ಟ ರಸ್ತೆಯಿಂದಾಗಿ ವಾಹನ ಮತ್ತು ಓಣಿಯಲ್ಲಿ ಮಕ್ಕಳು ಓಡಾಡುವ ಹಾಗಿಲ್ಲ. ಅಪ್ಪಿತಪ್ಪಿ ಆಟವಾಡಿದರೆ ಕೈ-ಕಾಲು ಗಾಯ ಮಾಡಿಕೊಂಡು ಆಸ್ಪತ್ರೆಗೆ ದಂಡ ಕಟ್ಟಬೇಕಾದ ಸ್ಥಿತಿಯಿದೆ’ ಎಂದು ಪಾರ್ವತಿಬಾಯಿ, ನಿರ್ಮಲ ಆರೋಪಿಸಿದ್ದಾರೆಸಂಬಂಧಿತ ಜಿಲ್ಲಾ ಪಂಚಾಯಿತಿ ಇಲಾಖೆಯ ಅಧಿಕಾರಿಗಳು ತಕ್ಷಣ ಸೂಕ್ತ ಕ್ರಮ ಕೈಗೊಂಡು ಗುಣಮಟ್ಟದ ರಸ್ತೆ ನಿರ್ಮಿಸಿಕೊಡದಿದ್ದಲ್ಲಿ ಇಲಾಖೆಯ ಕಚೇರಿ ಮುಂದೆ ಧರಣಿ ನಡೆಸುವುದಾಗಿ ವಾರ್ಡಿನ ನಿವಾಸಿಗಳು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.