ಭಾನುವಾರ, ಜೂನ್ 20, 2021
25 °C

ರಾಜಕೀಯ ಪಕ್ಷಗಳು ಹೇಳಿದ್ದಿಷ್ಟು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಭರವಸೆಗಳ ಪಟ್ಟಿ

ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಮಂಡಿಸಿರುವ ಬಜೆಟ್ ಕೇವಲ ಭರವಸೆಗಳ ಪಟ್ಟಿ. ದೂರದೃಷ್ಟಿಯ ಯಾವುದೇ ಯೋಜನೆಗಳೂ ಅದರಲ್ಲಿಲ್ಲ. ಅಭಿವೃದ್ಧಿಗೆ ಪೂರಕವಾದ ಯಾವುದೇ ಅಂಶಗಳೂ ಬಜೆಟ್‌ನಲ್ಲಿ ಇಲ್ಲ.ಬಜೆಟ್‌ನಲ್ಲಿ ಹೊಸ ಕಾರ್ಯಕ್ರಮಗಳ ಘೋಷಣೆ, ಹೊಸ ಪ್ರಯೋಗಕ್ಕೆ ಆದ್ಯತೆ ನೀಡುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಗೊಂದಲ ಮತ್ತು ಅನುಮಾನಗಳ ನಡುವೆ ಬಜೆಟ್ ಮಂಡಿಸಿರುವ ಅವರು, ಎಲ್ಲರ ನಿರೀಕ್ಷೆಯನ್ನೂ ಹುಸಿ ಮಾಡಿದ್ದಾರೆ. ಎಲ್ಲರಿಗೂ ಈ ಬಜೆಟ್‌ನಿಂದ ನಿರಾಸೆಯಾಗಿದೆ.

-ಡಾ.ಜಿ.ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷರುಪಾರದರ್ಶಕತೆ ಎಲ್ಲಿ?

ಆಡಳಿತದಲ್ಲಿ ಪಾರದರ್ಶಕತೆ ತರುವ ಕುರಿತು ಇಲ್ಲಿ ಪ್ರಸ್ತಾಪ ಇಲ್ಲ. ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾಗ ರಾಜ್ಯದ ಸಾಲ ರೂ 71 ಸಾವಿರ ಕೋಟಿ ಇತ್ತು. ಈಗ ಅದು ರೂ 1,14,744 ಕೋಟಿಗೆ ಏರಿಕೆಯಾಗಿದೆ. ಯೋಜನೇತರ ವೆಚ್ಚಗಳೂ ಅಧಿಕವಾಗಿವೆ.

-ಎಂ.ಸಿ. ನಾಣಯ್ಯ, ಜೆಡಿಎಸ್, ವಿಧಾನ ಪರಿಷತ್ ಸದಸ್ಯನೀರಾವರಿಗೆ ಹಣ ಕಡಿಮೆ

ರಾಜ್ಯದ ನೂರಕ್ಕೂ ಹೆಚ್ಚಿನ ತಾಲ್ಲೂಕುಗಳು ಬರಪೀಡಿತವಾಗಿವೆ. ಆದರೆ ಈ ಬಾರಿಯ ಬಜೆಟ್‌ನಲ್ಲಿ ನೀರಾವರಿಗೆ ಕಡಿಮೆ ಹಣ ನಿಗದಿ ಮಾಡಿದ್ದಾರೆ. ಇದು ದೂರದೃಷ್ಟಿಯಿಲ್ಲದೆ ಮಾಡಿದಂತಿದೆ. ವಿದ್ಯುತ್ ಉತ್ಪಾದನೆ ಹೆಚ್ಚಿಸುವ ಕುರಿತು ಪ್ರಸ್ತಾಪ ಇಲ್ಲ. ರಾಜ್ಯದ ಸಾಲದ ಹೊರೆಯೂ ಹೆಚ್ಚಾಗಿದೆ.

-ಎಸ್.ಆರ್. ಪಾಟೀಲ, ಕಾಂಗ್ರೆಸ್, ವಿಧಾನ ಪರಿಷತ್ ಸದಸ್ಯಜನಪರವಲ್ಲದ ಬಜೆಟ್

ಇದು ಜನಪ್ರಿಯತೆಯನ್ನು ಗಮನದಲ್ಲಿರಿಸಿಕೊಂಡ ಜನಪರವಲ್ಲದ ಬಜೆಟ್. ಕೃಷಿ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಉತ್ಪಾದಕತೆ ಹೆಚ್ಚಿಸಲು ಇದು ಸಹಾಯಕವಲ್ಲ. ಬೆಲೆ ಏರಿಕೆಯನ್ನು ಗಮನಿಸಿ ವಲಯವಾರು ಆದ್ಯತೆ ನೀಡಲುಆಗಿಲ್ಲ.

- ಡಾ. ಸಿದ್ಧನಗೌಡ ಪಾಟೀಲ, ಸಿಪಿಐ, ರಾಷ್ಟ್ರೀಯ ಮಂಡಳಿ ಸದಸ್ಯ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.