ರಾಜತಾಂತ್ರಿಕನ ಬಿಡುಗಡೆಗೆ ಅಮೆರಿಕ ಒತ್ತಡ

7

ರಾಜತಾಂತ್ರಿಕನ ಬಿಡುಗಡೆಗೆ ಅಮೆರಿಕ ಒತ್ತಡ

Published:
Updated:

ವಾಷಿಂಗ್ಟನ್ (ಪಿಟಿಐ): ಕಳೆದ ವಾರ ಇಬ್ಬರು ಪಾಕ್ ಪ್ರಜೆಗಳನ್ನು ಗುಂಡಿಕ್ಕಿ ಕೊಂದ ಆರೋಪದ ಮೇಲೆ ಬಂಧಿತರಾಗಿರುವ ತನ್ನ ರಾಜತಾಂತ್ರಿಕ ರೇಮಂಡ್ ಡೇವಿಸ್ ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಅಮೆರಿಕ, ಪಾಕಿಸ್ತಾನ ಸರ್ಕಾರದ ಮೇಲೆ ಒತ್ತಡ ಹೇರಿದೆ.ಅಂತರರಾಷ್ಟ್ರೀಯ ಕಾನೂನು ಮತ್ತು ಒಪ್ಪಂದಗಳ ಪ್ರಕಾರ ‘ರಾಜತಾಂತ್ರಿಕರ ವಿಶೇಷ ರಕ್ಷಣಾ ಸೌಲಭ್ಯ’ ಡೇವಿಸ್ ಅವರಿಗೆ ಅನ್ವಯವಾಗುವ ಕಾರಣ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಪಾಕ್ ಸರ್ಕಾರವನ್ನು ಕೋರಿರುವುದಾಗಿ ಅಮೆರಿಕದ ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ಪಿ.ಜೆ. ಕ್ರೌಲಿ ಸುದ್ದಿಗಾರರಿಗೆ ತಿಳಿಸಿದರು. ಪಾಕಿಸ್ತಾನ ನ್ಯಾಯಾಲಯ ಡೇವಿಸ್ ಬಂಧನವನ್ನು ಎಂಟು ದಿನ ವಿಸ್ತರಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry