ರಾಜೀವ್: ತೆರಿಗೆ ಬಾಕಿ 88 ಲಕ್ಷ
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಾಜ್ಯಸಭೆಯ ಹಾಲಿ ಸದಸ್ಯ ರಾಜೀವ್ ಚಂದ್ರಶೇಖರ್ ಸರ್ಕಾರಕ್ಕೆ 88.71 ಲಕ್ಷ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ರೂ 78 ಲಕ್ಷ ಆದಾಯ ತೆರಿಗೆ ಮತ್ತು ರೂ 10.71 ಲಕ್ಷ ರೂಪಾಯಿ ಸಂಪತ್ತು ತೆರಿಗೆಯನ್ನು ಅವರು ಪಾವತಿಸಬೇಕಿದೆ.

ತಮ್ಮ ಬಳಿ 24.29 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಮತ್ತು ಚರ ಆಸ್ತಿ ಇರುವುದಾಗಿ ಅವರು ಸೋಮವಾರ ನಾಮಪತ್ರದ ಜೊತೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ವಿವರ ನೀಡಿದ್ದಾರೆ. ಪತ್ನಿ ಅಂಜು ಮತ್ತು ಮಕ್ಕಳಾದ ವೇದ್, ದೇವಿಕಾ ಸೇರಿದಂತೆ ಅವರ ಕುಟುಂಬದ ಎಲ್ಲ ಸದಸ್ಯರ ಹೆಸರಿನಲ್ಲಿರುವ ಸ್ಥಿರಾಸ್ತಿಗಳ ಒಟ್ಟು ಮೌಲ್ಯ ರೂ 35.93 ಕೋಟಿ.

ತಾವು 2006ರಲ್ಲಿ ಕೋರಮಂಗಲದಲ್ಲಿ ರೂ 5.26 ಕೋಟಿ ಪಾವತಿಸಿ 9,600 ಚದರ ಅಡಿ ಭೂಮಿ ಖರೀದಿಸಿದ್ದು, ಈಗ ಅದರ ಮಾರುಕಟ್ಟೆ ಮೌಲ್ಯ ರೂ 9.12 ಕೋಟಿ ರೂಪಾಯಿ ಎಂದು ರಾಜೀವ್ ತಿಳಿಸಿದ್ದಾರೆ. ಪಾಷ್ ಕಾರು, ಇಂಡಿಯನ್ ಸ್ಕೌಟ್ ಬೈಕ್ ಸೇರಿದಂತೆ ದುಬಾರಿ ಬೆಲೆಯ ವಾಹನಗಳಿವೆ. 200 ಗ್ರಾಂ ಚಿನ್ನವೂ ಇದೆ. ಪತ್ನಿಯ ಬಳಿ 6.02 ಕೆಜಿ ಚಿನ್ನ ಮತ್ತು ವಜ್ರದ ಆಭರಣಗಳನ್ನು ಹೊಂದಿದ್ದಾರೆ.

ಖಾನ್ ವಿರುದ್ಧ ಮೊಕದ್ದಮೆ
ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕೆ.ರೆಹಮಾನ್ ಖಾನ್ ಕ್ರಿಮಿನಲ್ ಮೊಕದ್ದಮೆಯೊಂದನ್ನು ಎದುರಿಸುತ್ತಿದ್ದು, ಈ ಸಂಬಂಧ ನಾಲ್ಕನೇ ಎಸಿಎಂಎಂ ನ್ಯಾಯಾಲಯಕ್ಕೆ ಈಗಾಗಲೇ ಆರೋಪಪಟ್ಟಿ ಸಲ್ಲಿಕೆಯಾಗಿದೆ. ಪ್ರಕರಣ ವಿಚಾರಣೆಗೆ ಬಾಕಿ ಇದೆ. ರೆಹಮಾನ್ ಖಾನ್ ಬಳಿ 5.57 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ. ಅವರ ಪತ್ನಿ ರೂ 6.40 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ರೂ 50.28 ಲಕ್ಷ ಸಾಲವೂ ಇದೆ.

ಖಾನ್ ಬಳಿ ರೂ 35,000 ನಗದು ಇದ್ದರೆ, ಅವರ ಪತ್ನಿ ಬಳಿ ರೂ 42,500 ನಗದು ಹೊಂದಿದ್ದಾರೆ. ಇಬ್ಬರ ಬ್ಯಾಂಕ್ ಖಾತೆಗಳಲ್ಲಿ ಅನುಕ್ರಮವಾಗಿ ರೂ 45.01 ಲಕ್ಷ ಮತ್ತು ರೂ 44.94 ಲಕ್ಷ ಇದೆ. ರೆಹಮಾನ್ ಖಾನ್ ಅವರು ಮಂಡ್ಯದಲ್ಲಿ ರೂ 18 ಲಕ್ಷ ಮೌಲ್ಯದ 1.5 ಎಕರೆ ಕೃಷಿ ಭೂಮಿ ಹೊಂದಿದ್ದಾರೆ.

ಹಾರೋಹಳ್ಳಿ, ಯಲಹಂಕ ಮತ್ತು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ 8.5 ಎಕರೆ ಕೃಷಿಯೇತರ ಭೂಮಿ ಹೊಂದಿದ್ದಾರೆ. ಅವರ ಪತ್ನಿ ಹೆಸರಿನಲ್ಲಿ ಕೋಣನಕುಂಟೆಯಲ್ಲಿ 21 ಗುಂಟೆ ಕೃಷಿ ಭೂಮಿ ಇದೆ. ಈ ಸ್ವತ್ತುಗಳ ಮಾರುಕಟ್ಟೆ ಮೌಲ್ಯ ಕ್ರಮವಾಗಿ ರೂ 1.75 ಕೋಟಿ ಮತ್ತು ರೂ 2.75 ಕೋಟಿ ಎಂದು ರೆಹಮಾನ್ ಖಾನ್ ಅವರು ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.

ಸ್ವಂತ ಹೆಸರಿನಲ್ಲಿ ಜಯನಗರ ಮೂರನೇ ಹಂತದಲ್ಲಿ ರೂ 1.5 ಕೋಟಿ ಮೌಲ್ಯದ ಮನೆ, ದೆಹಲಿಯಲ್ಲಿ ಪತ್ನಿ ಹೆಸರಿನಲ್ಲಿ ರೂ 90 ಲಕ್ಷ ಮೌಲ್ಯದ ಫ್ಲ್ಯಾಟ್, ಎಚ್ಎಸ್ಆರ್ ಬಡಾವಣೆಯಲ್ಲಿ ರೂ 1.5 ಕೋಟಿ ಮೌಲ್ಯದ ಮನೆ, ಪತ್ನಿ ಹೆಸರಿನಲ್ಲಿ ಜಕ್ಕೂರಿನಲ್ಲಿ ರೂ 12 ಲಕ್ಷ ಮೌಲ್ಯದ ನಿವೇಶನ ಮತ್ತು ವಸಂತಪುರದಲ್ಲಿ ರೂ 25 ಲಕ್ಷ ಮೌಲ್ಯದ ನಿವೇಶನ ಇದೆ ಎಂದು ವಿವರ ನೀಡಿದ್ದಾರೆ.

ಪುಟ್ಟಸ್ವಾಮಿ ರೂ 5.15 ಕೋಟಿ ಆಸ್ತಿ ಒಡೆಯ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಬಿ.ಜೆ.ಪುಟ್ಟಸ್ವಾಮಿ ಒಟ್ಟು 5.15 ಕೋಟಿ ರೂಪಾಯಿ ಆಸ್ತಿಯ ಒಡೆಯ. ನಾಮಪತ್ರದ ಜೊತೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಪುಟ್ಟಸ್ವಾಮಿ ಬಳಿ ರೂ 2.75 ಲಕ್ಷ ನಗದು, ಅವರ ಪತ್ನಿ ಬಳಿ ರೂ 25 ಸಾವಿರ ನಗದು ಇದೆ. ಪುಟ್ಟಸ್ವಾಮಿ ಅವರ ಖಾತೆಯಲ್ಲಿ ರೂ 6.31 ಲಕ್ಷ ಇದೆ. ಎರಡು ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಿದ್ದಾರೆ. ಅವರ ಕುಟುಂಬ ಹೊಂದಿರುವ ಎಲ್ಲ ಚರಾಸ್ತಿಗಳ ಒಟ್ಟು ಮೊತ್ತ ರೂ 76 ಲಕ್ಷ. ಉಳಿದಂತೆ ಶ್ರೀಗಂಧದ ಕಾವಲಿನಲ್ಲಿ ರೂ 1.89 ಕೋಟಿ ಮೊತ್ತದ ವಾಣಿಜ್ಯ ನಿವೇಶನ ಹೊಂದಿದ್ದರೆ, ವೈಯಾಲಿಕಾವಲ್ನಲ್ಲಿ ರೂ 2.50 ಕೋಟಿ ಮೌಲ್ಯದ ಮನೆ ಹೊಂದಿದ್ದಾರೆ.

ಸೇಡಂ ಅತ್ಯಂತ ಕಡಿಮೆ
ಆಡಳಿತಾರೂಢ ಬಿಜೆಪಿ ಅಭ್ಯರ್ಥಿಯಾಗಿ ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಬಸವರಾಜ ಪಾಟೀಲ್ ಸೇಡಂ ಅವರ ಕುಟುಂಬದ ಒಟ್ಟು ಆಸ್ತಿಯ ಮೌಲ್ಯ 2.02 ಕೋಟಿ ರೂಪಾಯಿ.

ಸೇಡಂ ಅವರ ಬಳಿ ರೂ 18 ಸಾವಿರ ನಗದು ಇದೆ. ಅವರ ಪತ್ನಿ ರೂ 9,000 ನಗದು ಹೊಂದಿದ್ದಾರೆ. ಬ್ಯಾಂಕ್ ಖಾತೆಗಳಲ್ಲಿ ಕ್ರಮವಾಗಿ ರೂ 5,996 ಮತ್ತು ರೂ 20,972 ಇದೆ. ಬೆಂಗಳೂರಿನ ಲೊಟ್ಟೆಗೊಲ್ಲಹಳ್ಳಿಯಲ್ಲಿ ರೂ 1.45 ಕೋಟಿ ಮೌಲ್ಯದ ನಿವೇಶನ, ಸೇಡಂನಲ್ಲಿ 6.04 ಎಕರೆ ಭೂಮಿ, ಮನೆ ಸೇರಿದಂತೆ ತಮ್ಮ ಬಳಿ ರೂ 1.87 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ ಎಂದು ಅವರು ಸೋಮವಾರ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.

ಚರಾಸ್ತಿಯೇ ಹೆಚ್ಚು
ಬಿಜೆಪಿ ಅಭ್ಯರ್ಥಿಯಾಗಿರುವ ರಾಜಸ್ತಾನ ವೃಂದದ ನಿವೃತ್ತ ಐಎಎಸ್ ಅಧಿಕಾರಿ ರಾಮಕೃಷ್ಣ ಅವರ ಕುಟುಂಬದ ಒಟ್ಟು ಆಸ್ತಿಯ ಮೌಲ್ಯ ರೂ 2.70 ಕೋಟಿಗೂ ಹೆಚ್ಚು. ಆದರೆ, ಅವರ ಬಳಿ ಚರಾಸ್ತಿಯೇ ಹೆಚ್ಚಿದೆ.

ರಾಮಕೃಷ್ಣ ಅವರ ಬಳಿ ರೂ 1.35 ಕೋಟಿ ಮೊತ್ತದ ಚರಾಸ್ತಿ ಇದೆ. ಅವರ ಪತ್ನಿಯ ಬಳಿ ಇರುವ ಚರಾಸ್ತಿಗಳ ಮೌಲ್ಯ ರೂ 59.50 ಲಕ್ಷ. ಅನುಕ್ರಮವಾಗಿ ರೂ 5.5 ಲಕ್ಷ ಮತ್ತು ರೂ 65 ಸಾವಿರ ಮೌಲ್ಯದ ಸ್ಥಿರಾಸ್ತಿಗಳನ್ನು ಹೊಂದಿದ್ದಾರೆ. ಅಲ್ಲದೇ ರೂ 25 ಲಕ್ಷ ಮತ್ತು ರೂ 45 ಲಕ್ಷ ಮೌಲ್ಯದ ಭೂಮಿ ಇಬ್ಬರ ಬಳಿ ಇದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.