ಚಿಕ್ಕಬಳ್ಳಾಪುರ: ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆಯು ಜಿಲ್ಲೆಯಲ್ಲಿ ಎರಡು ಬಣಗಳಾಗಿ ವಿಂಗಡಣೆಗೊಂಡಿದ್ದು, ಒಬ್ಬರ ಮೇಲೊಬ್ಬರು ಪೈಪೋಟಿಗೆ ಎಂಬಂತೆ ಪತ್ರಿಕಾಗೋಷ್ಠಿಗಳು, ಪ್ರತಿಭಟನೆ ಮತ್ತು ಜಾಥಾ ಕಾರ್ಯಕ್ರಮಗಳು ಹಮ್ಮಿಕೊಳ್ಳುತ್ತಿದ್ದಾರೆ.

ಸಂಘಟನೆಯ ಒಂದು ಬಣವು ಪತ್ರಿಕಾಗೋಷ್ಠಿ ನಡೆಸಿ ಮುಂದಿನ ಕಾರ್ಯಕ್ರಮದ ರೂಪುರೇಷೆ ನೀಡಿದ ಮರುದಿನವೇ ಮತ್ತೊಂದು ಬಣವು ಸಹ ಪತ್ರಿಕಾಗೋಷ್ಠಿಯನ್ನು ಕರೆದು ತಮ್ಮ ಮುಂದಿನ ಹೋರಾಟದ ರೂಪುರೇಷೆ ತಿಳಿಸುತ್ತದೆ.

ಧಾರವಾಡದಲ್ಲಿ ಜುಲೈ 21ರಂದು ನಡೆಯಲಿರುವ ರೈತರ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಎರಡೂ ಬಣಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಪಿ.ಎಂ.ಮುನಿರಾಜು ನೇತೃತ್ವದ ಬಣವು ಬುಧವಾರ ಪತ್ರಿಕಾಗೋಷ್ಠಿಯನ್ನು ನಡೆಸಿ ಗುರುವಾರ ರೈಲು ಮೂಲಕ ಧಾರವಾಡದತ್ತ ಪ್ರಯಾಣಿಸಿದರೆ, ಬಿ.ಎನ್.ನರಸಿಂಹಪ್ಪ ನೇತೃತ್ವದ ಮತ್ತೊಂದು ಬಣವು ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಶುಕ್ರವಾರ ಪ್ರತಿಭಟನೆ ಕೈಗೊಂಡ ನಂತರ ಧಾರವಾಡತ್ತ ರೈಲಿನಲ್ಲಿ ಪ್ರಯಾಣಿಸಲಿದೆ.

ತಮ್ಮ ಬಣವೇ ಅಧಿಕೃತ ಮತ್ತು ರೈತಪರ ಕಾಳಜಿಯುಳ್ಳದ್ದು ಎಂದು ಹೇಳಿಕೊಳ್ಳುವ ಎರಡೂ ಬಣಗಳ ಮುಖಂಡರು ತಮ್ಮ ಬಳಿ ಎಷ್ಟು ರೈತರು ಇದ್ದಾರೆಂದು ಪತ್ರಿಕಾಗೋಷ್ಠಿಯ ಮೂಲಕ ಪ್ರದರ್ಶಿಸುತ್ತಿದ್ದಾರೆ.

ಎರಡೂ ಬಣಗಳ ಬೇಡಿಕೆಗಳು ಒಂದೇ ರೀತಿಯದ್ದಾಗಿದ್ದರೂ ಪ್ರತ್ಯೇಕವಾಗಿ ಹೋರಾಟ ನಡೆಸುವ ಕಡೆಗೆ ಹೆಚ್ಚಿನ ಒಲವನ್ನು ತೋರುತ್ತಿದ್ದಾರೆ. ಸಂಘಟನೆಯು ಇಬ್ಬಾಗವಾಗಲು ಕಾರಣವೇನು ಮತ್ತು ಕಾರಣವೇನು ಎಂದು ಪ್ರಶ್ನಿಸಿದರೆ, ಮುಖಂಡರಿಂದ ಒಂದೊಂದು ರೀತಿಯ ವಿವರಣೆ ಮತ್ತು ಉತ್ತರ ಬರುತ್ತದೆ.

`ರಾಜ್ಯಮಟ್ಟದಲ್ಲಿ ನಮ್ಮ ಬಣವೇ ನಿಜವಾದದ್ದು. ಇದರ ಬಗ್ಗೆ ಯಾವುದೇ ರೀತಿಯ ಅನುಮಾನ ಪಡಬೇಕಿಲ್ಲ. ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದ ಬಣವೇ ಅಧಿಕೃತ~ ಎಂದು ಒಂದು ಬಣದ ಮುಖಂಡರು ವಾದಿಸಿದರೆ, ಇದಕ್ಕೆ ಪ್ರತ್ಯುತ್ತರವಾಗಿ ಮತ್ತೊಂದು ಬಣದವರು, `ಚಾಮರಸ ಮಾಲೀ ಪಾಟೀಲ್ ನೇತೃತ್ವದ ಬಣವೇ ಅಧಿಕೃತವಾದದ್ದು. ಇದರ ಬಗ್ಗೆ ಯಾವುದೇ ರೀತಿಯ ಸಂಶಯ ಬೇಡ~ ಎನ್ನುತ್ತಾರೆ.
ರೈತ ಸಂಘಟನೆ ಈ ಬೆಳವಣಿಗಳನ್ನು ಸೂಕ್ಷ್ಮವಾಗಿ ನೋಡುತ್ತಿರುವ ರೈತರು ಬೇಸರ ವ್ಯಕ್ತಪಡಿಸುತ್ತಾರೆ.

ರೈತಪರ ಕಾಳಜಿ ತೋರುವ ಮತ್ತು ಹೋರಾಟ ನಡೆಸುವ ಸಂಘಟನೆಯೇ ಹೀಗೆ ಬಣಗಳಾದರೆ ರೈತರ ಪರ ಹೋರಾಟಕ್ಕೆ ಇಳಿಯುವರು ಯಾರು ಎಂಬ ಆತಂಕ ರೈತರಲ್ಲಿ ಈಗ ಮೂಡಿದೆ.

ರಾಜ್ಯಮಟ್ಟದಲ್ಲಿ ಆಗುವ ಬದಲಾವಣೆಯನ್ನೇ ಮುಖ್ಯವಾಗಿಸಿಕೊಂಡು ಜಿಲ್ಲೆಯಲ್ಲಿ ಈ ರೀತಿಯ ಬೆಳವಣಿಗೆಗಳಾಗುವುದು ಎಷ್ಟು ಸರಿ ಎಂದು ರೈತರು ಪ್ರಶ್ನಿಸುತ್ತಿದ್ದಾರೆ.

`ರೈತರ ಪರ ಹೋರಾಟ ಮಾಡುವಂತಹ ಸಂಘಟನೆಯು ಸಣ್ಣಪುಟ್ಟ ರಾಜಕೀಯ, ಸ್ವಾರ್ಥ-ವೈಷಮ್ಯದ ಪ್ರಭಾವಕ್ಕೆ ಒಳಪಡದೇ ಉತ್ತಮ ರೀತಿಯಲ್ಲಿ ಮುನ್ನಡೆದಲ್ಲಿ ರೈತ ಸಮುದಾಯಕ್ಕೆ ಒಳ್ಳೆಯದಾಗುತ್ತದೆ.

ರೈತರ ಸಂಘಟನೆ ಇಬ್ಬಾಗಗೊಂಡು ಇದೇ ರೀತಿಯಲ್ಲ ಮುನ್ನಡೆದಲ್ಲಿ, ತಲೆದೋರುವ ಸಮಸ್ಯೆಗಳು ಒಂದೆರಡಲ್ಲ. ಸಮಸ್ಯೆಗಳನ್ನು ಸರ್ಕಾರದ ಮೂಲಕ ತರಲೆತ್ನಿಸುತ್ತಾರೆ. ಆದರೆ ಸಂಘಟನೆಯೇ ಇಬ್ಬಾಗವಾಗುವಾಗ ಸರ್ಕಾರವು ರೈತರ ಸಮಸ್ಯೆ ಅರ್ಥ ಮಾಡಿಕೊಳ್ಳುವುದಾದರೂ ಹೇಗೆ. ಸೂಕ್ತ ಚಿಂತನೆ ಮಾಡುವುದ ಒಳಿತು~ ಎಂದು ಹಿರಿಯ ರೈತ ಮುನಿಶಾಮಿ `ಪ್ರಜಾವಾಣಿ~ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.