ದಕ್ಷಿಣ ಆಫ್ರಿಕಾ ಹಾಗೂ ಭಾರತ ತಂಡಗಳ ನಡುವೆ ನಡೆಯುತ್ತಿರುವ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ದ.ಆಫ್ರಿಕಾ ತಂಡ ಗೆದ್ದು ಸರಣಿಯಲ್ಲಿ 1–0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ. ಸದ್ಯ, ಟೀಂ ಇಂಡಿಯಾಗೆ ಎರಡನೇ ಪಂದ್ಯ ಗೆದ್ದು ಸರಣಿ ಸೋಲಿನಿಂದ ತಪ್ಪಿಸಿಕೊಳ್ಳುವ ಸವಾಲು ಎದುರಾಗಿದೆ.

ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ದೃಷ್ಟಿಯಿಂದ ನೋಡುವುದಾದರೆ ಭಾರತ ತಂಡಕ್ಕೆ ಪ್ರತಿಯೊಂದು ಪಂದ್ಯವೂ ನಿರ್ಣಾಯಕವಾಗಿದೆ. ಆದರೆ, ತವರಿನಲ್ಲಿ ಗೆಲ್ಲಬಹುದಾದ ಪಂದ್ಯವನ್ನು ಕೈಚೆಲ್ಲಿದ ಬಳಿಕ ಭಾರತ ತಂಡ WTC ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಅತ್ತ ಹಾಲಿ ಚಾಂಪಿಯನ್ ದಕ್ಷಿಣ ಆಫ್ರಿಕಾ ಎರಡನೇ ಸ್ಥಾನಕ್ಕೆ ಜಿಗಿತ ಕಂಡಿದೆ.

ಭಾರತ ಪ್ರಸ್ತುತ ಶೇ 54ರಷ್ಟು ಪಿಸಿಟಿ ಅಂಕಗಳನ್ನು ಹೊಂದಿದೆ. ಟೆಸ್ಟ್ ಚಾಂಪಿಯನ್ಶಿಪ್ನ ಈ ಹಿಂದಿನ ಇತಿಹಾಸ ನೋಡಿದರೆ, ಫೈನಲ್ ತಲುಪುವ ತಂಡ ಶೇ 64 ರಿಂದ 68 ರಷ್ಟು ಗೆಲುವಿನ ಶೇಕಡಾವಾರು ಅಂಕಗಳ ಅಗತ್ಯವಿದೆ.

ಆಡಿರುವ 3 ಪಂದ್ಯಗಳಲ್ಲಿ ಮೂರನ್ನೂ ಗೆದ್ದಿರುವ ಆಸ್ಟ್ರೇಲಿಯಾ ಶೇ 100ರ ಪಿಸಿಟಿ ಅಂಕದೊಂದಿಗೆ ಅಗ್ರಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ 66.67 ಅಂಕ ಹೊಂದಿದೆ. ಇನ್ನು ಇಷ್ಟೇ ಪ್ರಮಾಣದ ಶೇಖಡವಾರು ಅಂಕ ಹೊಂದಿರುವ ಶ್ರೀಲಂಕಾ ತಂಡ ಮೂರನೇ ಸ್ಥಾನದಲ್ಲಿದೆ.

ಭಾರತ, ಪಾಕಿಸ್ತಾನ, ಇಂಗ್ಲೆಂಡ್, ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್ ತಂಡಗಳು ನಂತರದ ಸ್ಥಾನದಲ್ಲಿವೆ.
.Ind vs SA| 15 ವರ್ಷಗಳ ನಂತರ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಸೋತ ಭಾರತ.IND vs SA| ಪಿಚ್ ಆಡಲಾಗದಂತಿರಲಿಲ್ಲ, ನಾವು ಕೇಳಿದ್ದು ಇದನ್ನೇ: ಗೌತಮ್ ಗಂಭೀರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.