ಭಾನುವಾರ, ಏಪ್ರಿಲ್ 18, 2021
33 °C

ರಾಮದೇವ್ ಜೊತೆ ವೇದಿಕೆ ಹಂಚಿಕೊಂಡ ಕಿರಣ್ ಬೇಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕಪ್ಪು ಹಣ ವಾಪಸ್ ತರುವುದು ಮತ್ತು ಪ್ರಬಲ ಲೋಕಪಾಲ ಜಾರಿಗೆ ಒತ್ತಾಯಿಸಿ ಯೋಗ ಗುರು ನಡೆಸುತ್ತಿರುವ ಹೋರಾಟದಿಂದ ಅಣ್ಣಾ ತಂಡದ ಇತರ ಸದಸ್ಯರು ದೂರ ಉಳಿದಿದ್ದರೂ, ತಂಡದ ಸಕ್ರಿಯ ಸದಸ್ಯರಾಗಿದ್ದ ಕಿರಣ್ ಬೇಡಿ ಅವರು ಭಾನುವಾರ ರಾಮದೇವ್ ಅವರ ಜೊತೆಗೆ ವೇದಿಕೆ ಹಂಚಿಕೊಂಡು ಭ್ರಷ್ಟಾಚಾರದ ವಿರುದ್ಧ ಸಮ್ಮಿಶ್ರ ಕೂಟ ರಚನೆಯ ಅಗತ್ಯವನ್ನು ಪ್ರತಿಪಾದಿಸಿದರು.ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಕಿರಣ್ ಬೇಡಿ ~ಭ್ರಷ್ಟಾಚಾರದ ವಿರುದ್ಧ ಸಂಯುಕ್ತ ವೇದಿಕೆ ಹಾಗೂ ಭ್ರಷ್ಟರ ವಿರುದ್ಧ ಸಮ್ಮಿಶ್ರ ಕೂಟವನ್ನು ನಾವೀಗ ರಚಿಸಬೇಕು ಎಂದು ಕರೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.