ಬುಧವಾರ, ಏಪ್ರಿಲ್ 21, 2021
29 °C

ರಾಮನಗರ: ಕೆರೆಯಲ್ಲಿ ಮುಳುಗಿ ನಾಲ್ವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು, (ಪಿಟಿಐ): ರಾಮನಗರ ಜಿಲ್ಲೆಯ ಬಿಡದಿ ಸಮೀಪದ ನೆಲ್ಲಿಗುಡ್ಡೆ ಕೆರೆಯಲ್ಲಿ ಈಜಲು ಹೋದ ನಾಲ್ವರು ಹದಿಹರೆಯದವರು ಮುಳುಗಿ ಮೃತರಾದ ದಾರುಣ ಘಟನೆ ಬುಧವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.   

ಮೃತ ಯುವಕರನ್ನು ಪುನೀತ್ (17), ಜಗನ್ (16) ಮನೋಜ್  ಮತ್ತು ಯುವತಿಯನ್ನು ಯಶಸ್ವಿನಿ (17) ಎಂದು ಗುರುತಿಸಲಾಗಿದೆ. ಮೃತರು ಬೆಂಗಳೂರಿನ ನಿವಾಸಿಗಳು ಎನ್ನಲಾಗಿದೆ.

ನಲ್ಲಗುಡ್ಡೆ ಕೆರೆಯಿಂದ ಮನೋಜ್ ಮತ್ತು ಯಶಸ್ವಿನಿ ಅವರ ಮೃತದೇಹಗಳನ್ನು ಕರೆಯಿಂದ ಹೊರತೆಗೆಯಲಾಗಿದೆ. ಉಳಿದ ಇಬ್ಬರ ಶವಗಳಿಗಾಗಿ ಮುಳುಗುಗಾರರು ಶೋಧಕಾರ್ಯ ಕೈಗೊಂಡಿದ್ದಾರೆ.ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.