ನವದೆಹಲಿ: ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಸೋಮವಾರ ಸಂಸತ್ತಿನ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಿದ ವೇಳೆ ತೆಲಂಗಾಣ, ಶ್ರೀಲಂಕಾ ತಮಿಳರ ಮೇಲೆ ದೌರ್ಜನ್ಯ, ಅಲ್ಪಸಂಖ್ಯಾತರಿಗೆ ಒಳಮೀಸಲಾತಿ ಮತ್ತು ರಸಗೊಬ್ಬರ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಸದಸ್ಯರು ಅಡ್ಡಿಪಡಿಸಿದರು.

ಜುಲೈನಲ್ಲಿ ಕಾರ್ಯಾವಧಿ ಪೂರೈಸುತ್ತಿರುವ ಪ್ರತಿಭಾ ಅವರು ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಕಡೆಯ ಭಾಷಣದ ವೇಳೆ ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಂಸದರು ಘೋಷಣೆಗಳನ್ನು ಮೊಳಗಿಸಿದರು.
ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಒತ್ತಾಯಿಸುತ್ತಿರುವ ಆಂಧ್ರಪ್ರದೇಶದ ಕಾಂಗ್ರೆಸ್ ಸಂಸದರು ಕೂಡ `ಜೈ ತೆಲಂಗಾಣ~ ಘೋಷಣೆಗಳನ್ನು ಮೊಳಗಿಸಿ ರಾಷ್ಟ್ರಪತಿ ಭಾಷಣಕ್ಕೆ ಅಡ್ಡಿಪಡಿಸಿದರು.

ವಿಪರ್ಯಾಸವೆಂದರೆ, ರಚನಾತ್ಮಕ ಸಹಕಾರದ ಸ್ಫೂರ್ತಿಯೊಂದಿಗೆ ಸಂಘಟಿತವಾಗಿ ಕರ್ತವ್ಯ ನಿರ್ವಹಿಸಲು ಸಂಸದರಿಗೆ ಮನವಿ ಮಾಡುತ್ತಿರುವಾಗಲೇ ಅವರ ಭಾಷಣಕ್ಕೆ ಐದು ಸಲ ಅಡ್ಡಿ ಎದುರಾಯಿತು.

ಪಾಟೀಲ್ ತಮ್ಮ ಭಾಷಣ ಆರಂಭಿಸುವ ಮುನ್ನವೇ ಡಿಎಂಕೆ ಸದಸ್ಯರು, ಶ್ರೀಲಂಕಾದಲ್ಲಿರುವ ತಮಿಳರ ವಿಷಯದಲ್ಲಿ ಸರ್ಕಾರದ ನಿಲುವಿನ ಬಗ್ಗೆ ಸ್ಪಷ್ಟ ಉತ್ತರ ಪಡೆಯಲು ತುದಿಗಾಲಲ್ಲಿ ನಿಂತಿದ್ದರು.

ಶ್ರೀಲಂಕಾದಲ್ಲಿರುವ ತಮಿಳರ ವಿರುದ್ಧ ನಡೆಯುತ್ತಿರುವ ದೌರ್ಜನ್ಯದ ಹಿನ್ನೆಲೆಯಲ್ಲಿ ಆ ರಾಷ್ಟ್ರದ ಸರ್ಕಾರದ ವಿರುದ್ಧ ಅಮೆರಿಕವು ವಿಶ್ವಸಂಸ್ಥೆಯಲ್ಲಿ ಮಂಡಿಸಲಿರುವ ನಿರ್ಣಯವನ್ನು ಯುಪಿಎ ಸರ್ಕಾರ ಬೆಂಬಲಿಸಲಿದೆಯೇ ಎಂದು ಕೇಳಿದರು.

ಪ್ರತಿಭಾ ಅವರ ಭಾಷಣದ ಕಡೆಯಲ್ಲಿ ಕೂಡ ಎಐಎಡಿಎಂಕೆ ವಿ.ಮೈತ್ರೇಯನ್ ಈ ಕುರಿತು ಪ್ರಸ್ತಾಪಿಸಲು ಯತ್ನಿಸಿದರು. ಆದರೆ ರಾಷ್ಟ್ರಪತಿಯವರು ಅವರೆಡೆಗೆ ಕೈಸನ್ನೆ ಮಾಡಿ ಆಸನದ ಮೇಲೆ ಕೂರಲು ಮನವಿ ಮಾಡಿದರು.

ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಕೋಟಾದಲ್ಲಿ ಅಲ್ಪಸಂಖ್ಯಾತರಿಗೆ ಶೇ 4.5ರಷ್ಟು ಒಳಮೀಸಲು ಕಲ್ಪಿಸಲು ಸರ್ಕಾರ ಇತ್ತೀಚೆಗೆ ಕೈಗೊಂಡ ನಿರ್ಧಾರದ ಬಗ್ಗೆ ರಾಷ್ಟ್ರಪತಿಯವರು ಪ್ರಸ್ತಾಪಿಸಿದಾಗ ಕೂಡ ಹಲವು ಸಂಸದರು ಪ್ರತಿಭಟಿಸಿದರು.ಈ ಸಂದರ್ಭದಲ್ಲಿ ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ಬಿಜೆಪಿಯ ಎಚ್.ನಾರಾಯಣ್ ಯಾದವ್, ಇದರಿಂದ ಒಬಿಸಿಗೆ ಸೇರಿದವರ ಹಕ್ಕಿಗೆ ಧಕ್ಕೆಯಾಗುತ್ತದೆ ಎಂದರು.

ರಸಗೊಬ್ಬರ ಉತ್ಪಾದನೆ ಹೆಚ್ಚಿಸಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ರಾಷ್ಟ್ರಪತಿಯವರು ಪ್ರಸ್ತಾಪ ಮಾಡಿದಾಗ, ಜೆಹಾನಾಬಾದ್ ಜೆಡಿಯು ಸದಸ್ಯ ಜಗದೀಶ್ ಶರ್ಮ ಅವರು ಎದ್ದುನಿಂತು ರೈತರಿಗೆ ರಸಗೊಬ್ಬರವೇ ಲಭ್ಯವಾಗುತ್ತಿಲ್ಲ ಎಂದು ಆಕ್ಷೇಪಿಸಿದರು.

ರಾಷ್ಟ್ರಪತಿಯವರು ತಮ್ಮ ಭಾಷಣದಲ್ಲಿ, ಸರ್ಕಾರವು ಆಂತರಿಕ- ಭಾಹ್ಯ ಭದ್ರತೆ- ಆರ್ಥಿಕ ಹಾಗೂ ಜೀವನೋಪಾಯ ಭದ್ರತೆ ಖಾತ್ರಿಗೊಳಿಸುವ ಜತೆಗೆ ಶೇ 8ರಿಂದ 9ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸುತ್ತದೆಂಬ ವಿಶ್ವಾಸ ವ್ಯಕ್ತಪಡಿಸಿದರು.

ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಅವುಗಳ ಜಾಲವನ್ನು ನಿರ್ಮೂಲನೆಗೊಳಿಸುವ ನಿಟ್ಟಿನಲ್ಲಿ ವಿಶ್ವಾಸಾರ್ಹವಾಗಿ ನಡೆದುಕೊಳ್ಳಲು ನೆರೆ ರಾಷ್ಟ್ರ ಪಾಕಿಸ್ತಾನವನ್ನು ಒತ್ತಾಯಿಸಿದರು.

ರಾಷ್ಟ್ರೀಯ ಬೇಹುಗಾರಿಕಾ ಗ್ರಿಡ್ ಮತ್ತು ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರಗಳ (ಎನ್ಸಿಟಿಸಿ) ಸ್ಥಾಪನೆಯಿಂದ ಆಗುವ ಅನುಕೂಲಗಳ ಬಗ್ಗೆ ಪ್ರತಿಭಾ ಪ್ರಸ್ತಾಪಿಸಿದರು.

ಕಪ್ಪುಹಣದ ಪಿಡುಗು ತೊಡೆದುಹಾಕಲು ಕೇಂದ್ರ ನೇರ ತೆರಿಗೆ ಮಂಡಲಿ ಅಧ್ಯಕ್ಷರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿರುವುದು ಸೇರಿದಂತೆ ಸರ್ಕಾರ ಕೈಗೊಂಡಿರುವ ಹಲವು ಕ್ರಮಗಳ ಬಗ್ಗೆಯೂ ಅವರು ವಿವರಿಸಿದರು.
ಈಶಾನ್ಯ ರಾಜ್ಯಗಳು ಹಾಗೂ ಜಮ್ಮು ಕಾಶ್ಮೀರದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಪರಿಸ್ಥಿತಿ ಸುಧಾರಿಸಿದೆ. ಹಿಂಸಾತ್ಮಕ ಹೋರಾಟವನ್ನು ದೃಢ ಸಂಕಲ್ಪದ ಬಲದೊಂದಿಗೆ ಮಾನವೀಯ ನೆಲೆಯಲ್ಲಿಯೇ ಹೇಗೆ ಎದುರಿಸಬಹುದು ಎಂಬುದನ್ನು ಈ ರಾಜ್ಯಗಳಲ್ಲಿ ಸರ್ಕಾರ ತೋರಿಸಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.