ಬೆಂಗಳೂರು (ಪಿಟಿಐ): ಯುಪಿಎ ಸರ್ಕಾರವು ರಾಷ್ಟ್ರಪತಿ ಸ್ಥಾನಕ್ಕೆ `ಸೂಕ್ತ ವ್ಯಕ್ತಿ~ಯಾದ ಪ್ರಣವ್ ಅವರನ್ನು ಆಯ್ಕೆ ಮಾಡಿದೆ ಎಂದು ಬುಧವಾರ ಹೇಳಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ನಮ್ಮ ವರಿಷ್ಠರು ಕೂಡ ಅಭ್ಯರ್ಥಿಯ ಆಯ್ಕೆಯಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು.

`ಬಿಜೆಪಿಯ ಒಬ್ಬ ನಾಯಕರಾಗಿ ಹೇಗೆ ನೀವು ಪ್ರಣವ್ ಅವರನ್ನು ಬೆಂಬಲಿಸುತ್ತಿರಿ?~ ಎಂಬ ವರದಿಗಾರರ ಪ್ರಶ್ನೆಯೊಂದಕ್ಕೆ `ಪ್ರಣವ್ ಅವರು ಗೌರವಾನ್ವಿತ ಹುದ್ದೆಗೆ ಸೂಕ್ತ ವ್ಯಕ್ತಿಯಾಗಿದ್ದಾರೆ. ಆದರೆ ನನಗೂ ನನ್ನದೇ ಆದ ಮಿತಿಗಳಿವೆ~ ಎಂದು ಹೇಳಿದರಲ್ಲದೇ `ಸ್ವತಂತ್ರ್ಯ ವ್ಯಕ್ತಿಯಾಗಿ ಪ್ರಣವ್ ಅವರನ್ನು ನಾನು ಬೆಂಬಲಿಸುತ್ತೇನೆ. ಆದರೆ ಒಂದು ಪಕ್ಷದ ಒಬ್ಬ ಕಾರ್ಯಕರ್ತನಾಗಿ ಹೇಗೆ ನಾನು ಅವರನ್ನು ಬೆಂಬಲಿಸಲಿ~ ಎಂದು ಮರು ಪ್ರಶ್ನಿಸಿದರು.

ಇದೇ ವೇಳೆ `ಒಂದು ವೇಳೆ ಪ್ರಣವ್ ಅವರು ನಿಮ್ಮನ್ನು ಸಂಪರ್ಕಿಸಿ ಬೆಂಬಲ ಕೋರಿದರೆ ಏನು ಮಾಡುತ್ತಿರಿ ?~ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಯಡಿಯೂರಪ್ಪ ಅವರು `ನಾನದನ್ನು ಚರ್ಚಿಸಲು ಇಷ್ಟಪಡುವುದಿಲ್ಲ~ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.