ನವದೆಹಲಿ: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಸಿಂಗಲ್ಸ್ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಪಿ.ವಿ. ಸಿಂಧು ಬುಧವಾರ ಇಲ್ಲಿ ಆರಂಭವಾಗಲಿರುವ 78ನೇ ರಾಷ್ಟ್ರೀಯ ಸೀನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಪ್ರಮುಖ ಆಕರ್ಷಣೆ ಎನಿಸಿದ್ದಾರೆ.

ಎರಡು ದಿನ ಅರ್ಹತಾ ಸುತ್ತಿನ ಪಂದ್ಯಗಳು ನಡೆದವು. ಬುಧವಾರ ಪ್ರಧಾನ ಸುತ್ತು ಆರಂಭವಾಗಲಿದೆ. 14 ವರ್ಷಗಳ ಬಳಿಕ ರಾಷ್ಟ್ರದ ರಾಜಧಾನಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲಿ ಸೈನಾ ನೆಹ್ವಾಲ್ ಪಾಲ್ಗೊಳ್ಳುತ್ತಿಲ್ಲ. 2011ರಲ್ಲಿ ಸಿಂಧು ಪ್ರಶಸ್ತಿ ಜಯಿಸಿದ್ದರು.

ಡೇನಿಯಲ್ ಎಸ್. ಫರೀದ್, ಸಿದ್ಧಾರ್ಥ್ ಠಾಕೂರ್, ಆರ್. ಸಚಿನ್, ಬಿ. ಚೇತನ್ ಆನಂದ್ ಮತ್ತು ಕರ್ನಾಟಕದ ಆದಿತ್ಯ ಪ್ರಕಾಶ್ ಪ್ರಧಾನ ಘಟ್ಟ ಪ್ರವೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.