ನವದೆಹಲಿ(ಪಿಟಿಐ): ಉತ್ಪ್ರೇಕ್ಷಿತ ಜಾಹೀರಾತು ಮೂಲಕ ವಸತಿ ನಿರ್ಮಾಣ ಯೋಜನೆಗಳ ಬಗ್ಗೆ ಜನರನ್ನು ದಾರಿ ತಪ್ಪಿಸುವ ಕಟ್ಟಡ ನಿರ್ಮಾಣಗಾರರು ಮತ್ತು ನಿವೇಶನ ಅಭಿವೃದ್ಧಿಪಡಿಸುವವರನ್ನು ಜೈಲಿಗೆ ಕಳುಹಿಸುವುದೂ ಸೇರಿದಂತೆ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ನಿಯಂತ್ರಣ ಸಾಧಿಸಲು ಅವಕಾಶ ನೀಡುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಒಪ್ಪಿಗೆ ನೀಡಿದೆ.

ದೇಶದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಏಕರೂಪ ವ್ಯವಸ್ಥೆ ರೂಢಿಸಿಕೊಳ್ಳಲು ಅವಕಾಶ ನೀಡುವಂತಹ `ರಿಯಲ್ ಎಸ್ಟೇಟ್(ನಿಯಂತ್ರಣ ಮತ್ತು ಅಭಿವೃದ್ಧಿ) ಮಸೂದೆ'ಯನ್ನು ಸಂಪುಟ ಅನುಮೋದಿಸಿದೆ. ಆ ಮೂಲಕ ತಿಂಗಳುಗಳ ಕಾಲ ಪರ-ವಿರೋಧ ಚರ್ಚೆಗೊಳಗಾಗಿದ್ದ, ನಿವೇಶನ ಮತ್ತು ಮನೆ ಖರೀದಿಸುವವರ ಹಿತಕಾಯುವ ನಿರೀಕ್ಷೆ ಹುಟ್ಟುಹಾಕಿದ್ದ ಮಸೂದೆ ಕೊನೆಗೂ ಜಾರಿಗೊಳ್ಳುತ್ತಿದೆ.

ರಿಯಲ್ ಎಸ್ಟೇಟ್ ಡೆವಲಪರ್ಗಳು (ಕಟ್ಟಡ ನಿರ್ಮಾಣ ಮತ್ತು ನಿವೇಶನಗಳ ಬಡಾವಣೆ ಅಭಿವೃದ್ಧಿಪಡಿಸುವವರು) ತಾವು ಕೈಗೊಳ್ಳಲಿರುವ ಯೋಜನೆಗಳಿಗೆ ಸಂಬಂಧಿಸಿದಂತೆ ಎಲ್ಲ ಇಲಾಖೆಗಳಿಂದ ಅತ್ಯಗತ್ಯವಾದ ಹಾಗೂ ಶಾಸನಬದ್ಧವಾದ ಅನುಮತಿ ಪತ್ರ ಪಡೆದ ನಂತರವಷ್ಟೇ ಉದ್ದೇಶಿತ ಯೋಜನೆಗಳಿಗೆ ಚಾಲನೆ ನೀಡಬೇಕು ಎಂಬುದನ್ನು ನೂತನ ಮಸೂದೆ ಕಡ್ಡಾಯಗೊಳಿಸಿದೆ.

ವಸತಿ ನಿರ್ಮಾಣ ಅಥವಾ ನಿವೇಶನ ಅಭಿವೃದ್ಧಿ ಯೋಜನೆಗೆ ಅತ್ಯಗತ್ಯವಾದ ಅನುಮತಿ ಪತ್ರಗಳನ್ನು ಪಡೆದ ನಂತರ ಅವುಗಳ ಪ್ರತಿಗಳನ್ನು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಸಂಬಂಧಿಸಿದ ನಿಯಂತ್ರಣ ಪ್ರಾಧಿಕಾರದ ಪರಾಮರ್ಶೆಗಾಗಿ ಸಲ್ಲಿಸಬೇಕು. ನಂತರ ಉದ್ದೇಶಿತ ಯೋಜನೆ ಕುರಿತ ಸಮಗ್ರ ಮಾಹಿತಿಯನ್ನು ಸಂಸ್ಥೆಯ ವೆಬ್ಸೈಟ್ನಲ್ಲಿ ಪ್ರಕಟಿಸಬೇಕು. ಆ ಮೂಲಕ ಯೋಜನೆಯ ಆರಂಭಕ್ಕೂ ಮುನ್ನವೇ ಎಲ್ಲ ಮಾಹಿತಿಯೂ ಆಸಕ್ತ ಹೂಡಿಕೆದಾರರಿಗೆ ಲಭ್ಯವಾಗುವಂತೆ ಮಾಡಬೇಕು ಎಂಬ ಸ್ಪಷ್ಟ ನಿರ್ದೇಶನವೂ ಮಸೂದೆಯಲ್ಲಿರುವ ಮುಖ್ಯ ಅಂಶವಾಗಿದೆ.

ಯೋಜನೆ ಕಾರ್ಯಗತಗೊಳ್ಳಲಿರುವ ನಿವೇಶನ ಸ್ಥಳದ ವಾಸ್ತವ ಚಿತ್ರಗಳನ್ನು ಜಾಹೀರಾತಿನಲ್ಲಿ ಪ್ರಕಟಿಸುವಾಗ ಜನರನ್ನು ದಾರಿ ತಪ್ಪಿಸುವಂತಹ ಉತ್ಪ್ರೇಕ್ಷಿತ ಅಂಶಗಳನ್ನೇನಾದರೂ ಅದರಲ್ಲಿ ಲಗತ್ತಿಸಿದ್ದರೆ ಸಂಸ್ಥೆಯ ಮಾಲೀಕರು ಕಠಿಣ ಕಾನೂನು ಕ್ರಮಕ್ಕೊಳಗಾಗುವರು ಎಂಬಎಚ್ಚರಿಕೆಯನ್ನೂ ಹೊಸ ಮಸೂದೆ ಒಳಗೊಂಡಿದೆ.

ಜಾಹೀರಾತು ನಿಯಮವನ್ನು ಮೊದಲ ಬಾರಿಗೆ ಉಲ್ಲಂಘಿಸಿದವರಿಗೆ ರಿಯಲ್ ಎಸ್ಟೇಟ್ ಯೋಜನೆಯ ಒಟ್ಟು ವೆಚ್ಚದಲ್ಲಿ ಶೇ 10ರಷ್ಟು ದಂಡ ವಿಧಿಸಲಾಗುತ್ತದೆ. ಇದೇ ಪ್ರಮಾದ ಮರುಕಳಿಸಿದರೆ ಕಂಪೆನಿಯ ಮುಖ್ಯಸ್ಥರನ್ನು ಜೈಲಿಗೆ ತಳ್ಳುವಂತಹ ಕಠಿಣ ಕ್ರಮಕ್ಕೂ ಮಸೂದೆ ಅವಕಾಶ ನೀಡಲಿದೆ.

ಜಿಎಂಆರ್ ಎಂಜಿಎಫ್ಗೆ ಭಾರಿ ದಂಡದ ನೋಟಿಸ್
ನವದೆಹಲಿ(ಪಿಟಿಐ): ದೇಶದ ರಿಯಲ್ ಎಸ್ಟೇಟ್ ವಲಯದ ಪ್ರಮುಖ ಸಂಸ್ಥೆಗಳಲ್ಲೊಂದಾದ `ಎಮ್ಮಾರ್ ಎಂಜಿಎಫ್ ಲ್ಯಾಂಡ್ ಲಿ.' ಮತ್ತು ಅದರ ಅಂಗಸಂಸ್ಥೆಗಳು ವಿದೇಶಿ ವಿನಿಮಯ ನಿಯಮ ಉಲ್ಲಂಘಿಸಿವೆ ಎಂದು ಆರೋಪಿಸಿರುವ ಜಾರಿ ನಿರ್ದೇಶನಾಲಯ, ್ಙ 8,600 ಕೋಟಿ ದಂಡ ವಿಧಿಸುವುದಾಗಿ ಎಚ್ಚರಿಸಿದೆ. ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.

ಒಂದೊಮ್ಮೆ ಜಾರಿ ನಿರ್ದೇಶನಾಲಯ ಕ್ರಮ ಜರುಗಿಸಿದರೆ ದೇಶದ ರಿಯಲ್ ಎಸ್ಟೇಟ್ ಉದ್ಯಮದ ಇತಿಹಾಸದಲ್ಲೇ ಇದು ಅತ್ಯಧಿಕ ಪ್ರಮಾಣದ ದಂಡ ಶಿಕ್ಷೆ ಯ ಪ್ರಕರಣವಾಗಿ ದಾಖಲಾಗಲಿದೆ.

ಈ ಮಧ್ಯೆ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿರುವ `ಎಮ್ಮಾರ್ ಎಂಜಿಎಫ್' ವಕ್ತಾರ, `ಸರ್ಕಾರದ ಯಾವುದೇ ಇಲಾಖೆಯಿಂದ ಈವರೆಗೆ ಯಾವುದೇ ನೋಟಿಸ್ ಬಂದಿಲ್ಲ. ಅಲ್ಲದೆ, ಕಂಪೆನಿ ದೇಶದ ಕಾನೂನುಗಳ ಪ್ರಕಾರವೇ ಚಟುವಟಿಕೆ ನಡೆಸುತ್ತಿದೆ' ಎಂದು ಪ್ರತಿಕ್ರಿಯಿಸಿದ್ದಾರೆ.

`ಎಮ್ಮಾರ್ ಎಂಜಿಎಫ್ ಲ್ಯಾಂಡ್ ಲಿ.' ಸಮೂಹ ದುಬೈ, ಸೈಪ್ರಸ್, ಮಾರಿಷಸ್ ಮತ್ತಿತರ ದೇಶಗಳಲ್ಲಿನ ತನ್ನ ಅಂಗಸಂಸ್ಥೆಗಳಿಂದ 2005ರ ಏಪ್ರಿಲ್ನಿಂದ ಒಟ್ಟು ್ಙ8600 ಕೋಟಿ ನೇರ ವಿದೇಶಿ ಹೂಡಿಕೆ (ಎಫ್ಡಿಐ) ಸ್ವೀಕರಿಸಿದೆ. ಈ ಪ್ರಕ್ರಿಯೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ(ಫೆಮಾ)ಯ ಹಲವು ನಿಯಮಗಳನ್ನು ಉಲ್ಲಂಘಿಸಿದೆ ಎಂದು ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡಿತ್ತು. 2010ರಲ್ಲಿ ತನಿಖೆಯನ್ನೂ ಆರಂಭಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.