ಶ್ರೀನಿವಾಸಪುರ: `ಮೊನ್ನೆ' ಮೋಡ ಮುಸುಕಿದ ವಾತಾವರಣದ ಮಧ್ಯೆ ಚುಮು ಚುಮು ಬಿಸಿಲು ಕಾಣಿಸಿಕೊಂಡಿತು. ಶ್ರೀನಿವಾಸಪುರ ತಾಲ್ಲೂಕಿನ ಕಶೆಟ್ಟಿಪಲ್ಲಿ ಸರ್ಕಾರಿ ಉನ್ನತೀಕೃತ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಹಾಗೂ ಸಾಹಿತಿ ಸ.ರಘುನಾಥ ಶಾಲೆಯ ಆವರಣದಲ್ಲಿ ಮಕ್ಕಳ ಪ್ರಾರ್ಥನೆ ಮುಗಿಸಿ ಶಾಲೆ ಪ್ರವೇಶಿಸುತ್ತಿದಂತೆ, ಹಳ್ಳಿ ಹುಡುಗನೊಬ್ಬ ಓಡಿಬಂದು `ಅಲ್ಲಿ ಹಾವಿದೆ, ಬನ್ನಿ ಸಾರ್' ಎಂದು ಕೂಗಿದ.

ಗ್ರಾಮದ ಪರಿಸರದಲ್ಲಿ ಏನೇ ವಿಶೇಷ ಕಾಣಿಸಿದರೂ ರಘುನಾಥ ಅವರಿಗೆ ಕರೆ ಬರುವುದು ಸಾಮಾನ್ಯ. ಮೇಷ್ಟ್ರು ಹಿಂತಿರುಗಿ ನೋಡಿದರು. ಹುಡುಗ ಅರೆ ಗೊಮ್ಮಟನಾಗಿ ನಿಂತಿದ್ದಾನೆ! `ನಿಕ್ಕರ್ ಎಲ್ಲೋ' ಎಂದರು. `ಆ ಬೇಲಿ ಹತ್ರಾನೆ ಬಿಟ್ ಬಂದಿದ್ದೀನಿ ಸಾರ್' ಎಂದು ಗಾಬರಿಯಾಗಿ ಹೇಳಿದ. ಮೇಷ್ಟ್ರು ಗ್ರಾಮದ ಅಂಚಿನ ಬೇಲಿಯತ್ತ ಹೆಜ್ಜೆ ಹಾಕಿದರು.

ಅಷ್ಟು ಹೊತ್ತಿಗೆ ಊರಿನ ಜನ ಜಮಾಯಿಸಿದ್ದರು. ಬೇಲಿ ಪಕ್ಕದಲ್ಲಿ ಎರಡು ಜೇರೋತನಗಳ ರುದ್ರ ರಮಣೀಯ ಪ್ರಣಯ ಲೀಲೆ ನಡೆಯುತ್ತಿತ್ತು.

ಇತ್ತೀಚಿನ ದಿನಗಳಲ್ಲಿ ಅಂಥ ಬಲಿತ ಜೇರೋತನಗಳು ಕಾಣಿಸುವುದೇ ವಿರಳ. ಸಾಮಾನ್ಯವಾಗಿ ಸರ್ಪ ಪ್ರಣಯ ದೃಶ್ಯಗಳು ಕಾಡು- ಮೇಡುಗಳಲ್ಲಿ ಅಪರೂಪಕ್ಕೆ ಕಂಡುಬರುತ್ತವೆ. ಗ್ರಾಮದ ಮನೆಗಳ ಪಕ್ಕದಲ್ಲೇ ಕಂಡು ಬಂದ ಈ ಸರ್ಪ ಸಲ್ಲಾಪ, ಪ್ರಣಯದಾಟಕ್ಕೆ ಹಳ್ಳಿಯ ಜನರು ಸಾಕ್ಷಿಯಾದರು.

ರಘುನಾಥ ಅವರು ಅಲ್ಲಿಗೆ ಹೋಗದೆ ಇದ್ದಿದ್ದರೆ ಆ ಹಾವುಗಳು ಹಳ್ಳಿಗರ ಕೋಲಿಗೆ ಬಲಿಯಾಗುತ್ತಿದ್ದವು. ಆದರೆ ಅವುಗಳನ್ನು ಕೊಲ್ಲದಂತೆ ತಡೆದು ಸರ್ಪನೃತ್ಯ ದರ್ಶನ ಮಾಡಿಸಿದರು. ವಾಹ್! ಅದೇನು ಉರುಗೋತ್ಸಾಹ. ಸುಮಾರು ಹೊತ್ತು ಅಪ್ಪಿ ಮುದ್ದಾಡಿದವು, ಪರಸ್ಪರ ಹೆಣೆದುಕೊಂಡು ಉರುಳಾಡಿದವು. ಎತ್ತರಕ್ಕೆ ಮೈಯೇರಿಸಿ ಮುಖ ದರ್ಶನ ಮಾಡಿಕೊಂಡವು. ಕೆಲವು ಸಲ ಪ್ರೀತಿಯಿಂದ ಕಚ್ಚಿಕೊಂಡವು. ಒಟ್ಟಾರೆ ಜನರಿದ್ದಾರೆ ಎಂಬ ಪರಿವಿಲ್ಲದೆ ಪ್ರಣಯದಾಟ ನಡೆಸಿದವು. ಬಿಸಿ ಇಳಿದ ಮೇಲೆ ತಮ್ಮನ್ನು ಕೊಲ್ಲಲು ಬಿಡದ ಮೇಷ್ಟ್ರಿಗೆ ಥ್ಯಾಂಕ್ಸ್ ಹೇಳುವ ಭಂಗಿಯಲ್ಲಿ ಪಕ್ಕದಲ್ಲಿಯೇ ಇದ್ದ ಬೇಲಿಗೆ ಹರಿದು ಕಣ್ಮರೆಯಾದವು.

ಜೇರೋತನ ತುಂಬಾ ಪುಕ್ಕಲು ಸ್ವಭಾವದ ಹಾವು. ಜನರನ್ನು ಕಂಡರೆ ವೇಗವಾಗಿ ಓಡಿ ಪೊದೆ ಸೇರುತ್ತದೆ. ಬಿಲ ಸಿಕ್ಕಿದರೆ ಹೊಕ್ಕು ತಲೆಯನ್ನು ಬಿಲದ ಪ್ರವೇಶ ಸ್ಥಳದಲ್ಲಿ ಇಟ್ಟುಕೊಂಡು ಉದ್ದನೆಯ ದೇಹವನ್ನು ಹಿಂದಕ್ಕೆ ಎಳೆದುಕೊಳ್ಳುತ್ತದೆ.ಮುಂಗಾರಿನಲ್ಲಿ ಸರ್ಪಗಳು ಬೆದೆಗೆ ಬರುತ್ತವೆ ಎಂದು ಕಾಣುತ್ತದೆ. ಅದೇ ಗ್ರಾಮದ ಸಮೀಪ ಈಚೆಗಷ್ಟೇ ಬೇರೆ ಪ್ರಭೇದದ ಹಾವುಗಳೆರಡು ಹೆಣೆದುಕೊಂಡು ಜನರಿಗೆ ಮನರಂಜನೆ ಒದಗಿಸಿದ್ದವು. ಇದು ಅಂಥದ್ದೇ ಇನೊಂದು ಘಟನೆ. ಹಾವುಗಳು ಹೆಣೆದುಕೊಂಡಿರುವುದನ್ನು ನೋಡಬಾರದು ಎಂಬುದು ಗ್ರಾಮೀಣ ಪ್ರದೇಶದಲ್ಲಿ ಹಿಂದಿನಿಂದಲೂ ಬಂದಿರುವ ಒಂದು ನಂಬಿಕೆ. ಇಲಿಗಳು ಕೃಷಿ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಕೃಷಿ ಉತ್ಪನ್ನ ತಿಂದು ನಷ್ಟ ಂಟುಮಾಡುತ್ತವೆ. ಹಾವುಗಳು ಅವುಗಳನ್ನು ತಿಂದು ನಿಯಂತ್ರಿಸುತ್ತವೆ. ಜೇರೋತನ ಅಳಿವಿನ ಅಂಚಿನಲ್ಲಿರುವ ಹಾವು. ಇದು ದಪ್ಪ ಹಾಗೂ ಉದ್ದವಾಗಿ ಇರುವುದರಿಂದ, ಚರ್ಮಕ್ಕಾಗಿ ಹಿಡಿದು ಕೊಲ್ಲಲಾಗುತ್ತಿದೆ. ಈ ಹಾವಿನ ಕೊಬ್ಬನ್ನು ನಾಟಿ ಔಷಧಿ ತಯಾರಿಕೆಯಲ್ಲಿ ಬಳಸುತ್ತಾರೆ. ಇದರ ಮಾಂಸ ಸೇವನೆಯಿಂದ ಗೂರಲು ವಾಸಿಯಾಗುತ್ತದೆ ಎಂಬ ನಂಬಿಕೆ ಇರುವುದರಿಂದ ಅಂಥ ಕೆಲವು ರೋಗಿಗಳು ಈ ಹಾವಿನ ಮಾಂಸ ಸೇವಿಸುತ್ತಾರೆ. ಚೀನಾ ದೇಶದ ಸರ್ಪಾಹಾರದ ಪ್ರಭಾವಕ್ಕೆ ಒಳಗಾಗಿರುವ ಕೆಲವರು, ಜೇರೋತನಗಳನ್ನು ಹುಡುಕಿ ಕೊಂದು ಹುರಿದು ತಿನ್ನತೊಡಗಿದ್ದು, ಅಳಿವಿನಂಚಿನಲ್ಲಿದೆ.

ಉರುಗ ತಜ್ಞರು ಹೇಳುವಂತೆ ಕೇವಲ ಬೆರಳೆಣಿಕೆಯಷ್ಟು ಹಾವುಗಳು ಮಾತ್ರ ವಿಷ ಹೊಂದಿವೆ. ಉಳಿದ ಹಾವುಗಳಿಂದ ಪ್ರಾಣ ಭಯ ಇಲ್ಲ. ಆದರೆ ಹಾವನ್ನು ಕಂಡರೆ ಸಾವನ್ನು ಕಂಡಂತೆ ಭಾವಿಸಿ, ಹೊಡೆದು ಕೊಲ್ಲುತ್ತಾರೆ. ಇದರಿಂದ ಜೀವ ವೈವಿಧ್ಯತೆಗೆ ಧಕ್ಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.