ಶಿಗ್ಗಾವಿ: ಸನಾತನ ಕಾಲದಿಂದ ದೇವಾಲಯಗಳ ನಿರ್ಮಾಣ ಮಾಡುವ ಸಂದರ್ಭದಲ್ಲಿ ಹರಕೆಗಾಗಿ ಬಂಗಾರದ ಆಭರಣ, ಬೆಲೆಬಾಳುವ ವಸ್ತುಗಳನ್ನು ಹಾಕುವ ಮೂಲಕ ದೇವಸ್ಥಾನ ಕಟ್ಟುವುದನ್ನು ಕಾಣುತ್ತೇವೆ. ಆದರೆ ತಾಲ್ಲೂಕಿನ ಬಂಕಾಪುರ ಕ್ರಾಸ್ ಬಳಿಯಲ್ಲಿ ನಿರ್ಮಾಣಗೊಂಡ ರೇವಣಸಿದ್ದೇಶ್ವರ ದೇವಾಲಯ ನಿರ್ಮಾಣ ಸಂಪೂರ್ಣ ಕುರಿ ಹಾಲಿನಿಂದ ಕಟ್ಟುವ ಮೂಲಕ ಜಗದ ಖ್ಯಾತಿಗೆ ಸೇರಿಕೊಂಡಿದೆ.

ಕೆಲವು ಹಿರಿಯರು ಹೇಳುವಂತೆ ಆದಿಗೌಡ ಹಾಗೂ ಚೊಂಚಲದೇವಿಗೆ ೫ ನೇ ಮಾಸದಲ್ಲಿ ೫ ನೇ ಮಗನಾಗಿ ಪದ್ಮಗೌಡರು ಜನಿಸಿದರು. ಸೋಮಾರಿಯಾದ ಪದ್ಮಗೌಡರು ಒಂದು ಸಲ ಬುತ್ತಿ(ಊಟದಗಂಟು) ತನ್ನ ಅಣ್ಣಂದಿರರಿಗೆ ಕೊಡಲು ಹೊಲಕ್ಕೆ ಬಂದಾಗ ಬೇಡ ಎಂದರು ಕೇಳದೆ ಹೋಲವನ್ನು ಎತ್ತಿನಿಂದ ಉಳುಮೆ ಮಾಡಲು ಹೋದಾಗ ಹೋಲದಲ್ಲಿದ್ದ ಹುತ್ತಿನ ಮೇಲೆ ರೆಂಟಿ ಹೊಡೆದು ಬಿಡುತ್ತಾರೆ. ಆಗ ಆ ಹುತ್ತಿನಿಂದ ಕುರಿಗಳು ಉಗಮವಾಗುತ್ತವೆ ಅವುಗಳನ್ನು ಕಂಡ ಪದಾ್ಮಗೌಡ ಎಲ್ಲವನ್ನು ಬಿಟ್ಟು ಕುರಿಕಾಯಲು ಆಸಕ್ತಿ ತೊರಿ ಭಕ್ತಿ, ಶೃದ್ಧೆಯಿಂದ ಹಗಲು ಕುರಿಕಾಯುವುದು ರಾತ್ರಿ ಸಮಯದಲ್ಲಿ ಗುರುವಿನ ಸೇವೆ ಕಾಯಕದಲ್ಲಿ ನಿರತರಾಗುತ್ತಾರೆ.

ಒಂದು ದಿನ ತನ್ನ ಗುರುವಿಗೆ ಅಡುಗೆ ಮಾಡಲು ಬೆಂಕಿ ಬೇಕಾಗುತ್ತದೆ ಆಗ ಬೆಂಕಿ ಹುಡುಕುವಾಗ ಬಂಕಾಪುರ ಸಮೀಪ ಚೆನ್ನಾಪುರ ಹಳ್ಳಿ ಪಕ್ಕದಲ್ಲಿನ ಗುಡ್ಡದಲ್ಲಿ ಬೆಂಕಿ ಕಾಣುವದು ಅಲ್ಲಿ ಹೋದಾಗ ಅಲ್ಲಿ ಒಬ್ಬ ಚಲುವೆಯನ್ನು ನೋಡುತ್ತಾರೆ.

ರಾಕ್ಷಸಿಯನ್ನು ಸಂಹರಿಸಿ ಆ ಚಲುವೆ(ಚಿಮಲಾದೇವಿ)ಯನ್ನು ಪದ್ಮಗೌಡರು ಕರೆದುಕೊಂಡು ಬರುತ್ತಾರೆ. ಇದನ್ನು ಅರಿತ ರೇವಣ ಸಿದ್ದರು ಇವರಿಬ್ಬರ ಮದುವೆ ಮಾಡಿಸುತ್ತಾರೆ. ಆಗ ದಂಪತಿಗಳು ಸೇರಿಕೊಂಡು ೨೧ ಎಡಿನ (ನೂಲಿನ) ಕಂಬಳಿಯನ್ನು ಗುರುವುಗೆ ಅರ್ಪಿಸುತ್ತಾರೆ. ಅಂದಿನಿಂದ ರೇವಣ ಸಿದ್ದರು ಕುರುಬ ಸಮುದಾಯದ ಗುರುಗಳಾಗುತ್ತಾರೆ. ಅಂದು ನಡೆದ ಆ ಶುಭ ಮಂಗಳ ಕಾರ್ಯದ ಸ್ಥಳವೇ ಇಂದಿನ ಕುರಿ ಹಾಲಿನಿಂದ ನಿರ್ಮಾಣವಾದ ದೇವಾಲಯದ ತಾಣವಾಗಿದೆ ಎಂದು ಹಿರಿಯರಾದ ಗೌಡಪ್ಪಣ್ಣ ತಮ್ಮ ಆಭಿಮತ ವ್ಯಕ್ತಪಡಿಸುತ್ತಾರೆ.

ಕೆಂಡದಮಠದ ಹಾಗೂ ರಂಭಾಪುರಿ ಶ್ರೀಗಳು ಬೇಧ ಭಾವಅರಿಯದ ಮುಗ್ಧರಾದ ಹಾಗೂ ಕಾಲಜ್ಞಾನಿ ಯಾದ ಸಂಚಾರಿ ಕುರುಬರು ತಮ್ಮ ಕುರಿಗಳ ಹಾಲಿನಿಂದ ಈ ದೇವಾಲಯ ಕಟ್ಟಿದರೆ ಜಗತ್ತ ಪ್ರಸಿದ್ದಿ ಪಡೆಯುವುದು ಎಂದು ಹೇಳಿದಾಗ ಎಲ್ಲ ಕುರುಬ ಸಮುದಾಯದವರು ಕುರಿ ಹಾಲನ್ನು ಸಂಗ್ರಹಿಸುವ ಜೊತೆಗೆ (2009)ರಲ್ಲಿ ದೇವಾಲಯ ಕಟ್ಟಲು ಪ್ರಾರಂಭಿಸುತ್ತಾರೆ.

ಹಾವೇರಿ, ಗದಗ, ಮುಂಡಗೋಡ, ಹುಬ್ಬಳ್ಳಿ, ದಾವಣಗೇರಿ, ಕೊಪ್ಪಳ, ಬಳ್ಳಾರಿ, ಶಿವಮೋಗ್ಗ ಸೇರಿದಂತೆ ಸುತ್ತಲಿನ ಸಂಚಾರಿ ಕುರುಬರಿಂದ ಹಾಲು ಸಂಗ್ರಹಿಸುತ್ತಾರೆ. ದೇವಾಲಯ ನಿರ್ಮಾಣದ ಉಸ್ತುವಾರಿ ವಹಿದ ಕೆಲ ಸದಸ್ಯರು ಮದ್ಯಪಾನ, ಧೂಮಪಾನ, ಮಾಂಸದ ಸೇವನೆ ಅಷ್ಟೇ ಅಲ್ಲದೆ ಕೆಲವರು ಸಂಸಾರವನ್ನು ತ್ಯಜಿಸಿ ದೇವಾಲಯ ನಿರ್ಮಿಸುವಲ್ಲಿ ಸಾರ್ಥಕ್ಯ ಕಂಡಿದ್ದಾರೆ.

ದೇವಾಲಯದ ಭೂಮಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಮಣ್ಣೂರು ಗ್ರಾಮದ ಮಹಮ್ಮದ್ಹುಸೇನ್ ಮನಿಯಾರ ಎಂಬುವರಿಗೆ ಸೇರಿದೆ, ಆದರೆ ಮನಿಯಾರ ಅವರು ಇಲ್ಲಿ ದೇವಾಲಯ ಕಟ್ಟಲು ಉಚಿತವಾಗಿ ಜಾಗವನ್ನು ನೀಡಿರುವುದು ಭಾವೈಕ್ಯತೆಗೆ ಹಿಡಿದ ಕನ್ನಡಿಯಾಗಿದೆ. ಹಾಗೆ ಮಣ್ಣೂರು, ಬಂಕಾಪುರ, ಹುಲಿಕಟ್ಟಿ, ಚೆನ್ನಾಪುರ, ಶಿಗ್ಗಾವಿ, ಸವಣೂರ ಮತ್ತು ಸುತ್ತ-ಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತ ಸಮೂಹದ ನಡುವೆ ಇದೇ.14ರಂದು ರೇವಣಸಿದ್ದೇಶ್ವರರ ಜಾತ್ರಾ ಮಹೋತ್ಸವ ಸಂಚಾರಿ ಕುರುಬರ ನೇತೃತ್ವದಲ್ಲಿ ಶೃದ್ಧಾ ಶಕ್ತಿಯಿಂದ ನೆರೆವೇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.