ಸೋಮವಾರ, ಜೂನ್ 14, 2021
23 °C

ರೈತರಿಗಾಗಿ ಸಮೃದ್ಧ ಕಿಸಾನ್ ಯೋಜನೆ ಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಸಮೃದ್ಧ ಕಿಸಾನ್ ಯೋಜನೆ ಯ ಅಡಿಯಲ್ಲಿ ಈಗಾಗಲೇ ರೈತರಿಗೆ 5 ಸಾವಿರ ಎಮ್ಮೆಗಳನ್ನು ಉಚಿತವಾಗಿ ವಿತರಿಸಲಾಗಿದ್ದು, ಈ ವರ್ಷಾಂತ್ಯಕ್ಕೆ ದೇಶದಾದ್ಯಂತ 1 ಲಕ್ಷ ಎಮ್ಮೆಗಳನ್ನು ಉಚಿತವಾಗಿ ವಿತರಿಸಲು ಯೋಜನೆ ರೂಪಿಸಲಾಗಿದೆ~ ಎಂದು ಪುಣೆ ಮೂಲದ ಸಮೃದ್ಧ ಜೀವನ್ ಫುಡ್ಸ್ ಇಂಡಿಯಾ ಲಿಮಿಟೆಡ್‌ನ ಚೇರ್‌ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮಹೇಶ ಮೋತೆವಾರ ತಿಳಿಸಿದರು.ನಗರದ ಗೋಕುಲ್ ಗಾರ್ಡನ್‌ನಲ್ಲಿ ಶನಿವಾರ ಭಾರತೀಯ ಕೃಷಿಕ ಸಮಾಜ ಹಾಗೂ ವಿವಿಧ ಸಂಘಟನೆಗಳ ಸಹ ಯೋಗದಲ್ಲಿ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ `ಕಾಯಕಶ್ರೀ~ ಪ್ರಶಸ್ತಿ ಸ್ವೀಕರಿಸಿ ಅವರು ಪತ್ರಕರ್ತರೊಟ್ಟಿಗೆ ಮಾತನಾಡಿದರು. ಈ ಸಮೃದ್ಧ ಕಿಸಾನ್ ಯೋಜನೆಯು ರೈತರನ್ನು ಆರ್ಥಿಕ ಸ್ವಾವಲಂಬಿಯಾಗಿಸುವ ಉದ್ದೇಶ ಹೊಂದಿದೆ.ಈ ಯೋಜನೆಯ ಅಡಿ ರೈತರಿಗೆ ತರಬೇತಿ ಹಾಗೂ ಎಮ್ಮೆಗಳಿಗೆ ವೈದ್ಯಕೀಯ ಚಿಕಿತ್ಸೆ ಸಹ ನೀಡಲಾಗು ವುದು. ಸರ್ಕಾರಿ ದರದಲ್ಲಿ ರೈತರಿಂದ ಹಾಲನ್ನು ಖರೀದಿಸಲಾಗು ವುದು ಎಂದು ತಿಳಿಸಿದರು.`10 ವರ್ಷಗಳ ಪರಿಶ್ರಮದ ತರುವಾಯ ಕಳೆದ 2011ರ ಡಿಸೆಂಬ ರ್‌ನಲ್ಲಿ ಈ ಯೋಜನೆಯನ್ನು ಮಹಾ ರಾಷ್ಟ್ರದಲ್ಲಿ ಜಾರಿಗೆ ತರಲಾಯಿತು.

ಕೆಲವು ತಿಂಗಳ ಹಿಂದೆ ವಿಜಾಪುರ ಜಿಲ್ಲೆಯ ಝಳಕಿಯಲ್ಲಿ ಇದೇ ತರಹದ ಯೋಜನೆಯನ್ನು ಜಾರಿಗೊಳಿಸಲಾ ಗಿದೆ.

 

ಕರ್ನಾಟಕದಲ್ಲಿ ಭಾರತೀಯ ಕೃಷಿಕ ಸಮಾಜದ ಸಹಯೋಗದಲ್ಲಿ ಈ ಯೋಜನೆ ವಿಸ್ತರಿಸಲಾಗುತ್ತಿದ್ದು, ಬೆಂಗ ಳೂರು, ಬೆಳಗಾವಿ ಹಾಗೂ ಶಿಗ್ಗಾವಿ ಯಲ್ಲಿ ಸ್ಥಳ ಪರಿಶೀಲನೆ ನಡೆದಿದೆ~ ಎಂದು ಅವರು ಹೇಳಿದರು.

ಸಮೃದ್ಧ ಕಿಸಾನ್ ಯೋಜನೆಯು ಈಗಾಗಲೇ ಒರಿಸ್ಸಾ ಹಾಗೂ ಮಧ್ಯ ಪ್ರದೇಶಗಳಲ್ಲಿ ಜಾರಿಯಲ್ಲಿದ್ದು, ರಾಜಸ್ಥಾನದಲ್ಲಿ ಸದ್ಯದಲ್ಲೇ ಜಾರಿಗೆ ಬರಲಿದೆ. ಆಸಕ್ತ ರೈತರು ಸಮೃದ್ಧ ಜೀವನ್ ಫುಡ್ಸ್ ಇಂಡಿಯಾ ಲಿ. ಕಚೇರಿಯನ್ನು (020-662 35456) ಸಂಪರ್ಕಿಸಬಹುದು ಎಂದು ಅವರು ನುಡಿದರು.

ಸಂಸ್ಥೆಯ ಮಾರುಕಟ್ಟೆ ಸಂಯೋಜಕ ಮಹೇಶ ಶೇಲಾರ, ಭಾರತೀಯ ಕೃಷಿಕ ಸಮಾಜದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಾಳಜ್ಜ ಗೋದಳ್ಳಿ ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.