ಭಾನುವಾರ, ಜೂನ್ 20, 2021
28 °C

ರೈತರಿಗೆ ಕಾರ್ಯಾಗಾರ, ವಿಶೇಷೋಪನ್ಯಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು :  ನಾಗತಿಹಳ್ಳಿ ಸಂಸ್ಕೃತಿ ಹಬ್ಬದ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಈ ತಿಂಗಳ 31ರಂದು (ಯುಗಾದಿ ದಿನ) ರೈತರಿಗೆ ಒಂದು ದಿನದ ಕಾರ್ಯಾಗಾರವನ್ನು ಮಂಡ್ಯ ಜಿಲ್ಲೆಯ ನಾಗತಿಹಳ್ಳಿ ಗ್ರಾಮದಲ್ಲಿ ಏರ್ಪಡಿಸಲಾಗಿದೆ.ಕೃಷಿಯಲ್ಲಿ ಸೌರಶಕ್ತಿ­ಯನ್ನು ಬಳಸುವ ವಿಧಾನ ಮತ್ತು ಕೃಷಿಯಲ್ಲಿ ಲಾಭ ಗಳಿಸುವುದು ಹೇಗೆ ಎಂಬ ವಿಷಯಗಳ ಬಗ್ಗೆ ತಜ್ಞರು ಮತ್ತು ಕೃಷಿಕರಿಂದ ಪ್ರಾತ್ಯಕ್ಷಿಕೆ ,ಉಪನ್ಯಾಸ ಮತ್ತು ಚರ್ಚೆ ಏರ್ಪಡಿಸಲಾಗಿದೆ ಎಂದು ಪತ್ರಿಕಾಪ್ರಕಟಣೆ ತಿಳಿಸಿದೆ.ಆಸಕ್ತರು,  ನಾಗತಿಹಳ್ಳಿ ಚಂದ್ರ­ಶೇಖರ್, ಸಂಚಾಲಕರು, ನಾಗತಿಹಳ್ಳಿ  ಸಂಸ್ಕೃತಿ ಹಬ್ಬ–2014, ನಂ.166, 28ನೇ ಅಡ್ಡರಸ್ತೆ, 17ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು–560070. (ಮೊ 9740092323) ಈ ವಿಳಾಸಕ್ಕೆ ಸಂಪರ್ಕಿಸಿ ಈ ತಿಂಗಳ 15ರ ಒಳಗೆ ನೋಂದಾಯಿಸಿಕೊಳ್ಳಲು ಕೋರಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.