ಗುರುವಾರ , ಏಪ್ರಿಲ್ 15, 2021
26 °C

ರೈತರ ಮೇಲೆ ಲಾಠಿ ಪ್ರಹಾರ: ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಣೆಬೆನ್ನೂರು: ಕೊಪ್ಪಳದಲ್ಲಿ ಈಚೆಗೆ ರೈತರು, ರೈತ ಮಹಿಳೆಯರು ಮತ್ತು ಮಕ್ಕಳ ಮೇಲೆ ಪೊಲೀಸರು ನಡೆಸಿದ ಲಾಠಿ ಪ್ರಹಾರವನ್ನು ಖಂಡಿಸಿ ರಾಣೆಬೆನ್ನೂರಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು  ಪ್ರತಿಭಟನೆ ನಡೆಸಿ ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸಿದರು. ತಾಪಂ ಮಾಜಿ ಅಧ್ಯಕ್ಷ ರವೀಂದ್ರಗೌಡ ಪಾಟೀಲ ಮಾತನಾಡಿ, ‘ರೈತರ ಹೆಸರಿನ ಮೇಲೆ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರದ ಗದ್ದುಗೆ ಏರಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಿಜೆಪಿ ಸರ್ಕಾರ ಮುರುದಿನವೇ ಹಾವೇರಿಯಲ್ಲಿ ರಸಗೊಬ್ಬರ ಕೇಳಲು ಹೋದ ರೈತರ ಮೇಲೆ ಗೋಲಿಬಾರ್ ನಡೆಸಿ ಇಬ್ಬರ ಸಾವಿಗೆ ಕಾರಣವಾಗಿದೆ. ಅಲ್ಲದೇ ಗೋಲಿಬಾರ್‌ನಲ್ಲಿ ಮಡಿದ ರೈತರನ್ನು ಗೂಂಡಾಗಳೆಂದು ಪಟ್ಟ ಕಟ್ಟಿತು’ ಎಂದು ಲೇವಡಿ ಮಾಡಿದರು.ಜಿಲ್ಲಾ ಘಟಕದ ಅಧ್ಯಕ್ಷ ಬಸವಣ್ಣೆಪ್ಪ ನಲುವಾಗಲ, ಕೊಪ್ಪಳದಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ ದುಡಿದು ಕೂಲಿ ಕೇಳಲು ಹೋದ ರೈತ, ರೈತ ಮಹಿಳೆಯರು ಮತ್ತು ಮಕ್ಕಳ ಮೇಲೆ ಪೊಲೀಸರು ಉದ್ದೇಶಪೂರ್ವಕವಾಗಿ ಲಾಠಿ ಪ್ರಹಾರ ಮಾಡಿದ್ದಲ್ಲದೇ ಬೂಟಿನಿಂದ ಒದ್ದು ಅಮಾನಿಯವಾಗಿ ವರ್ತಿಸಿ ಮನುಕುಲವೇ ತಲೆ ತಗ್ಗುವಂತೆ ಮಾಡಿದ್ದಾರೆ ಎಂದರು. ಒಂದು ವಾರದೊಳಗೆ ತಪ್ಪಿಸ್ಥ ಪೊಲೀಸ್ ಅಧಿಕಾರಿಗಳ ಮೇಲೆ ನ್ಯಾಯಾಂಗ ತನಿಖೆ ನಡೆಸಿ ಅವರನ್ನು  ಅಮಾನತುಗೊಳಿಸಬೇಕು. ಮಾನಸಿಕವಾಗಿ ನೊಂದ ರೈತರಿಗೆ ಸೂಕ್ತ ಪರಿಹಾರ ವಿತರಿಸಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಇರುವ ರೈತ ಮುಖಂಡರು ಕೊಪ್ಪಳಕ್ಕೆ ಹೋಗಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಎಸ್.ಕುದ್ರಿಹಾಳ, ರಾಮನಗೌಡ ಮಲಕನಹಳ್ಳಿ, ಎಚ್.ಎಸ್. ಮಾಗನೂರು, ಬಿ.ಕೆ. ರಾಜನಹಳ್ಳಿ, ಎಂ.ಎಚ್. ಓಲೇಕಾರ,ಭರಮಪ್ಪ ಕೋಟಿಹಾಳ, ಸುರೇಶ ಎಸ್. ಗರಡೀಮನಿ, ಎಸ್.ಬಿ. ಮಾಗನೂರು, ತಮ್ಮಣ್ಣ ಮುದಕರಿಯಣ್ಣನರ,  ನಾಗರಡ್ಡಿ, ದಿಳ್ಳೆಪ್ಪ ಸತ್ಯಪ್ಪನವರ, ಎಚ್.ಎಸ್. ಪಾಟೀಲ, ಶಿವಪುತ್ರಪ್ಪ, ಜಿ.ಬಿ. ಸುರೇಂದ್ರ, ಶಿವಪುತ್ರಪ್ಪ, ಸಿ.ಎಫ್. ಹನುಮಂತಪ್ಪ ಕುಂಬಳೂರು, ರುದ್ರಪ್ಪ ಸಾದರ, ಆರ್.ಎಚ್. ಹದಡಿ, ಟಿ.ಸಿ. ಹಳಗೇರಿ, ಬಸವನಗೌಡ ಮಲ್ಲನಗೌಡ ಮುಳಗುಂದ, ಖಾದರ ಶಿರಿಗೇರಿ, ಕರಿಯಪ್ಪ, ಬಿ.ಎಚ್. ಅಡವಿನಾಯಕ, ಕೆ.ಟಿ. ಶೇತಸನದಿ,  ಜಾನಪ್ಪನವ, ಫಕ್ಕೀರಪ್ಪ ಕೆಂಚಮ್ಮನವರ, ಬಸವನಗೌಡ ಮುಂಗುಂದ, ಬಿ.ಕೆ. ರಾಜನಹಳ್ಳಿ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.