ಕೋಲಾರ: ರೈಲ್ವೆ ಬಜೆಟ್ನಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಅವರ ತವರು ಜಿಲ್ಲೆಯಾದ ಕೋಲಾರದಲ್ಲಿ ರೈಲ್ವೆ ಕೋಚ್ ಕಾರ್ಖಾನೆ (ಆರ್ಸಿಎಫ್) ಸ್ಥಾಪಿಸುವ ಘೋಷಣೆಯನ್ನು ಎರಡನೇ ಬಾರಿಗೆ ಮಾಡಲಾಗಿದೆ.

ಆದರೆ ಈ ಘೋಷಣೆ ಹೊರಬೀಳುವ ಹೊತ್ತಿಗೆ ಕಾರ್ಖಾನೆ ಸ್ಥಾಪನೆಗೆ ಭೂಮಿ ಸಿದ್ಧವಾಗಿದೆ. ಕೋಚ್ ಕಾರ್ಖಾನೆ ನಿರ್ಮಿಸುವ ವಿಷಯ ಕಳೆದ ಬಜೆಟ್ನಲ್ಲೆ ಪ್ರಕಟವಾಗಿತ್ತು. ಈ ಬಾರಿಯೂ ಅದನ್ನೆ ಹೊಸದೆಂದು ರೈಲ್ವೆ ಸಚಿವ ದಿನೇಶ್ ತ್ರಿವೇದಿ ಘೋಷಿಸಿದ್ದಾರೆ. ಆದರೆ, ಒಂದು ವರ್ಷದ ಬಳಿಕ ಹೀಗೆ ಮತ್ತೆ ಪ್ರಕಟವಾಗುವ ಹೊತ್ತಿನಲ್ಲೆ, ಕೋಚ್ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿ ಗುರುತಿಸುವ ಕೆಲಸವೂ ಮುಗಿದಿದೆ.
ಕಳೆದ ವರ್ಷವೇ ಘೋಷಣೆ ಹೊರಬಿದ್ದಿದ್ದರೂ ಅಧಿಕೃತವಾಗಿ ಈ ಬಗ್ಗೆ ಸರ್ಕಾರದಿಂದ ಯಾವ ಪತ್ರವೂ ಜಿಲ್ಲಾಡಳಿತಕ್ಕೆ ಇದುವರೆಗೂ ಬಂದಿಲ್ಲ.

ಆದರೆ ಮುನಿಯಪ್ಪ ಅವರ ಮೌಖಿಕ ಸೂಚನೆ ಮೇರೆಗೆ, ಕಾರ್ಖಾನೆ ಸ್ಥಾಪನೆಗೆ ಅಗತ್ಯವಿರುವ 1 ಸಾವಿರ ಎಕರೆ ಜಮೀನನ್ನು ಜಿಲ್ಲಾಡಳಿತ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಈಗಾಗಲೇ ಗುರುತಿಸಿದೆ. ಅದರಲ್ಲಿ ಶೇ. 60ರಷ್ಟು ಸರ್ಕಾರಿ ಜಮೀನು ಇದೆ. ಉಳಿದ ಶೇ. 40ರಷ್ಟು ಜಮೀನು ಖಾಸಗಿಯವರಿಗೆ ಸೇರಿದ್ದು ಅದನ್ನು ಸ್ವಾಧೀನಪಡಿಸಿಕೊಳ್ಳಬೇಕಿದೆ.

`ಕಳೆದ ವರ್ಷವೇ ಸಚಿವರು ಭೂಮಿ ಗುರುತಿಸಲು ಹೇಳಿದ್ದರು. ಜಿಲ್ಲೆಯ ಹಲವೆಡೆ ಪರಿಶೀಲನೆ ನಡೆಸಿ, ಭೇಟಿ ಮಾಡಿ, ಅಂತಿಮವಾಗಿ ಶ್ರೀನಿವಾಸಪುರ ತಾಲ್ಲೂಕಿನಲ್ಲಿ 1 ಸಾವಿರ ಎಕರೆ ಜಮೀನನ್ನು ಗುರುತಿಸಲಾಗಿದೆ. ಆ ಬಗ್ಗೆ ರಾಜ್ಯ ಸರ್ಕಾರದ ಕಂದಾಯ ಇಲಾಖೆ ಕಾರ್ಯದರ್ಶಿ ಮತ್ತು ಮುಖ್ಯಕಾರ್ಯದರ್ಶಿಗೆ ಮಾಹಿತಿ ನೀಡಲಾಗಿದೆ. ಯಾವುದೇ ಕ್ಷಣದಲ್ಲಿ ಭೂಮಿ ನೀಡಲು ಜಿಲ್ಲಾಡಳಿತ ಸಿದ್ಧವಿದೆ~ ಎಂದು ಜಿಲ್ಲಾಧಿಕಾರಿ ಮನೋಜ್ಕುಮಾರ್ ಮೀನಾ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

`ಕಾರ್ಖಾನೆ ಸ್ಥಾಪಿಸುವ ಸಂಬಂಧ ಅಧಿಕೃತವಾಗಿ ಸರ್ಕಾರದಿಂದ ಯಾವ ಸೂಚನೆಯೂ ಇದುವರೆಗೆ ಬಂದಿಲ್ಲ. ಆದರೆ ಕೇಂದ್ರ ಸಚಿವರ ಸೂಚನೆ ಮೇರೆಗೆ ಭೂಮಿ ಗುರುತಿಸಲಾಗಿದೆ. ಶೇ. 60ರಷ್ಟು ಸರ್ಕಾರಿ ಭೂಮಿ ಇದೆ. ಉಳಿದ ಶೇ. 40ರಷ್ಟು ಜಮೀನನ್ನು ಸ್ವಾಧೀನ ಮಾಡಿಕೊಳ್ಳಬೇಕಾಗಿದೆ~ ಎಂದು ಅವರು ತಿಳಿಸಿದರು.

ಶೋಚನೀಯ: ಕೋಚ್ ಕಾರ್ಖಾನೆ ನಿರ್ಮಾಣವಾಗಲಿರುವ ಕೋಲಾರದಲ್ಲಿ ರೈಲಿನ ಸೌಕರ್ಯ ಶೋಚನೀಯ ಸ್ಥಿತಿಯಲ್ಲಿರುವುದು ವಿಪರ್ಯಾಸ. ಜಿಲ್ಲಾ ಕೇಂದ್ರದಿಂದ ಬೆಂಗಳೂರಿಗೆ ನೇರ ರೈಲು ಸಂಪರ್ಕವೇ ಇಲ್ಲ.
ಕೋಲಾರದಿಂದ ಬೆಂಗಳೂರಿನ ಕಂಟೋನ್ಮೆಂಟ್ವರೆಗೆ ಮಾತ್ರ ಒಂದೇ ಒಂದು ರೈಲು ಸಂಚರಿಸುತ್ತದೆ. ಬಂಗಾರಪೇಟೆ- ಕೋಲಾರ ನಡುವೆ ಒಂದು ರೈಲ್ಬಸ್ ಇದೆ.

ಇವೆರಡನ್ನು ಬಿಟ್ಟರೆ ಬೇರೆ ವ್ಯವಸ್ಥೆಯೇ ಇಲ್ಲ. ಕಳೆದ ಬಜೆಟ್ನಲ್ಲಿ ಪ್ರಕಟಿಸಿದಂತೆ ಕೋಲಾರ- ಬೆಂಗಳೂರು ನಡುವೆ ಎಕ್ಸ್ಪ್ರೆಸ್ ರೈಲು ಸಂಚಾರ ಇನ್ನೂ ಶುರುವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.