ಶನಿವಾರ, ಜನವರಿ 18, 2020
22 °C

ರೋಹಿತ್‌, ರಿಚಾ ಚಾಂಪಿಯನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡಬ್ಲ್ಯುಪಿಬಿಎ ಕ್ಲಬ್‌ನ ಎಂ. ರೋಹಿತ್‌ ಮತ್ತು ಪ್ರಕಾಶ್‌ ಪಡುಕೋಣೆ ಅಕಾಡೆಮಿಯ ರಿಚಾ ಮಕ್ತಿಬೋಧ್‌ ಅವರು ಇಲ್ಲಿ ನಡೆದ ಫೈವ್‌ ಸ್ಟಾರ್‌ ಬ್ಯಾಡ್ಮಿಂಟನ್‌ ಟೂರ್ನಿಯ 13 ವರ್ಷದೊಳಗಿನವರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.ಬೌರಿಂಗ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಮಂಗಳವಾರ ನಡೆದ ಬಾಲಕರ ವಿಭಾಗದ ಫೈನಲ್‌ ಹಣಾಹಣಿಯಲ್ಲಿ ರೋಹಿತ್‌ 21–9, 21–16ರಲ್ಲಿ ತಮ್ಮದೇ ಕ್ಲಬ್‌ನ ಚಿನ್ಮಯ್‌ ವೆಂಕಟೇಶ್‌ ಅವರನ್ನು ಸೋಲಿಸಿದರು. ಬಾಲಕಿಯರ ವಿಭಾಗದಲ್ಲಿ ರಿಚಾ 21–14, 21–16ರಲ್ಲಿ ತಮ್ಮದೇ ಕ್ಲಬ್‌ನ ಡಿ. ಶೀತಲ್‌ ಎದುರು ಜಯ ಪಡೆದು ಪ್ರಶಸ್ತಿ ತಮ್ಮದಾಗಿಸಿಕೊಂಡರು.ಪ್ರಶಸ್ತಿಯ ಗರಿ: ಇದೇ ವಯೋಮಾನದ ಡಬಲ್ಸ್‌ ವಿಭಾಗದಲ್ಲಿ ಚಿನ್ಮಯ್‌ ವೆಂಕಟೇಶ್‌ ಹಾಗೂ ಶ್ರೀಕರ್‌ ರಾಜೇಶ್‌್ ಪ್ರಶಸ್ತಿ ಪಡೆದರು. ಫೈನಲ್‌ನಲ್ಲಿ ಈ ಜೋಡಿ 21–9, 11–21, 21–15ರಲ್ಲಿ ಡಿವೈಎಸ್‌ಎಸ್‌ನ ಕೆ. ಪೃಥ್ವಿ ರಾಯ್‌ ಹಾಗೂ ಎಸ್‌ಎನ್‌ಸಿ ಕ್ಲಬ್‌ನ ಸಿ.ಎಸ್‌. ಸಾಕೇತ್‌ ಎದುರು ಗೆಲುವು ಪಡೆದರು.ಸೈಫ್‌–ಅಶ್ವಿನಿಗೆ ಪ್ರಶಸ್ತಿ: 15 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ಸೈಫ್‌ ಅಲಿ 21–13, 22–20ರಲ್ಲಿ ನಿಖಿಲ್‌ ಶ್ಯಾಮ್‌ ಶ್ರೀರಾಮ್‌ ಮೇಲೂ, ಬಾಲಕಿಯರ ವಿಭಾಗದಲ್ಲಿ ಕೆ. ಅಶ್ವಿನಿ ಭಟ್‌ 21–10, 21–14ರಲ್ಲಿ ಅರ್ಚನಾ ಪೈ ಅವರನ್ನು ಸೋಲಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.ಇದಕ್ಕೂ ಮುನ್ನ ನಡೆದ ಬಾಲಕರ ವಿಭಾಗದ ಸೆಮಿಫೈನಲ್‌ ಪಂದ್ಯಗಳಲ್ಲಿ ಸೈಫ್‌ ಅಲಿ 17–21, 21–10, 21–16ರಲ್ಲಿ ಕೆ. ಅಭಿರಾಮ್‌ ಮೇಲೂ, ನಿಖಿಲ್‌ ಶ್ಯಾಮ್‌ 21–11, 21–12ರಲ್ಲಿ ಸಾಕೇತ್ ಉಪಾಧ್ಯ ವಿರುದ್ಧವೂ ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಿದ್ದರು. ಫೈನಲ್‌ಗೆ ಕೆವಿನ್‌–ನಿಖಿತ್‌ ಜೋಡಿ: ಎಂ.ಎಲ್‌. ಕೆವಿನ್‌ ಹಾಗೂ ನಿಖಿತ್ ಲಕ್ಷ್ಮಣ್‌ ಜೋಡಿ ಬಾಲಕರ 15 ವರ್ಷದೊಳಗಿನವರ ಡಬಲ್ಸ್‌ ವಿಭಾಗದಲ್ಲಿ ಫೈನಲ್‌ ತಲುಪಿದರು.ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಈ ಜೋಡಿ 21–14, 21–11ರಲ್ಲಿ ಅಮೋಘ್‌ ಆರ್. ಗುಪ್ತಾ–ಸಾಕೇತ್‌ ಉಪಾಧ್ಯ ಎದುರು ಗೆಲುವು ಪಡೆದರು. ಇನ್ನೊಂದು ಸೆಮಿಫೈನಲ್‌ನಲ್ಲಿ ನಿಖಿಲ್‌ ಶ್ಯಾಮ್‌ ಹಾಗೂ ಸೈಫ್‌ ಅಲಿ 21-19 21-17ರಲ್ಲಿ ಎಸ್‌. ಅವಿನಾಶ್‌–ಕೆ. ಸಾಯಿ ಪ್ರತೀಕ್‌ ಅವರನ್ನು ಪರಾಭವಗೊಳಿಸಿ ಪ್ರಶಸ್ತಿ ಹಂತ ತಲುಪಿದರು.

ಪ್ರತಿಕ್ರಿಯಿಸಿ (+)