ಹೈದರಾಬಾದ್ (ಐಎಎನ್ಎಸ್): ವಿ.ವಿ.ಎಸ್.ಲಕ್ಷ್ಮಣ್ ತಮ್ಮ ನಿವಾಸದಲ್ಲಿ ಬುಧವಾರ ಆಯೋಜಿಸಿದ್ದ ಪಾರ್ಟಿಗೆ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಅವರಿಗೆ ಆಹ್ವಾನ ನೀಡಿರಲಿಲ್ಲ ಎಂಬುದು ತಿಳಿದು ಬಂದಿದೆ.

ಈ ಪಾರ್ಟಿಯಲ್ಲಿ ತಂಡದ ಹಿರಿಯ ಆಟಗಾರರು ಪಾಲ್ಗೊಂಡಿದ್ದರು. ಆದರೆ ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಕೇಳಲಾದ ಪ್ರಶ್ನೆಗೆ ದೋನಿ ಸ್ಪಷ್ಟ ಪ್ರತಿಕ್ರಿಯೆ ನೀಡಲಿಲ್ಲ. ವಿದಾಯ ಹೇಳಿದ ಸಂಬಂಧದ ಮತ್ತೊಂದು ಪ್ರಶ್ನೆಗೆ, `ನೀವು ಈ ಪ್ರಶ್ನೆಯನ್ನು ಲಕ್ಷ್ಮಣ್ ಅವರಲ್ಲಿಯೇ ಕೇಳಿ~ ಎಂದರು.

ನಗರದ ಮಣಿಕೊಂಡದಲ್ಲಿರುವ ತಮ್ಮ ನಿವಾಸದಲ್ಲಿ ವಿ.ವಿ.ಎಸ್ ಆಯೋಜಿಸಿದ್ದ ಈ ಪಾರ್ಟಿಯಲ್ಲಿ ಸಚಿನ್, ಗಂಭೀರ್, ಜಹೀರ್ ಖಾನ್ ಹಾಗೂ ವಿರಾಟ್ ಕೊಹ್ಲಿ ಪಾಲ್ಗೊಂಡಿದ್ದರು.

ಈ ಪಾರ್ಟಿಗೂ ಮುನ್ನವೇ ಲಕ್ಷ್ಮಣ್ ನಿವಾಸಕ್ಕೆ ಸಚಿನ್ ತೆರಳಿದ್ದರು. `ಲಕ್ಷ್ಮಣ್ ನಿವಾಸದಲ್ಲಿ ಭೋಜನ ಮಾಡಿದೆ. ಇದೊಂದು ವಿಶೇಷ ಭೇಟಿ. ವಿವಿಎಸ್ ಅತ್ಯುತ್ತಮ ವ್ಯಕ್ತಿ~ ಎಂದು ಸಚಿನ್ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.