ಹುಬ್ಬಳ್ಳಿ: ಲಾರಿಯೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ, ಬೈಕ್ನಲ್ಲಿದ್ದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ಪಿ.ಬಿ. ರಸ್ತೆಯ ಕಾವೇರಿ ಡಾಭಾ ಬಳಿ ನಡೆದಿದೆ.

ತಂದೆ ಹಾಗೂ ಪುತ್ರರಾದ ರಾಮಪ್ಪ ಪೂಜಾರ (60) ಹಾಗೂ ಕೃಷ್ಣ ಪೂಜಾರ (28) ಮೃತಪಟ್ಟವರು. ಹಾನಗಲ್ಲ ತಾಲ್ಲೂಕಿನ ಮಲಕುಂದ ಗ್ರಾಮದವರಾದ ಅವರು, ಧಾರವಾಡಕ್ಕೆ ಹೋಗಿ ತಮ್ಮ ಗ್ರಾಮಕ್ಕೆ ತೆರಳುತ್ತಿದ್ದರು. ಕೃಷ್ಣನ ಮದುವೆಯಾಗಿ ಕೇವಲ 9 ದಿನಗಳಾಗಿತ್ತು. ಡಿಕ್ಕಿ ಹೊಡೆದ ಲಾರಿಯು ತಡಸದಿಂದ ನಗರಕ್ಕೆ ಬರುತ್ತಿತ್ತು ಎನ್ನಲಾಗಿದ್ದು, ಚಾಲಕ ಲಾರಿಯನ್ನು ನಿಲ್ಲಿಸದೆ ಪರಾರಿಯಾಗಿದ್ದಾನೆ.
ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.