ಅತ್ಯಾಚಾರದ ಆರೋಪ ಹೊತ್ತ ಮಾಜಿ ಅಥ್ಲೀಟ್ ಪಿಂಕಿ ಪ್ರಾಮಾಣಿಕ್ ಅವರ ಬಂಧನದ ಘಟನೆಯ ನಂತರ ಎಲ್ಲರ ಕಣ್ಣು ಲಿಂಗಾಂತರಿಗಳ(ಟ್ರಾನ್ಸ್ಜೆಂಡರ್) ನಿಗೂಢ ಲೋಕದ ಕಡೆಗೆ ಹೊರಳಿದೆ.

ಜನ್ಮ ಪಡೆದ ದೇಹವನ್ನು ಒಪ್ಪಿಕೊಳ್ಳಲಾಗದೆ, ಸಮಾಜವು ಹೇರುವ ಲಿಂಗ ಹಾಗೂ ಲಿಂಗತ್ವದ ಪರಿಧಿಯಲ್ಲಿ ಇರಲಾಗದೆ, ಒದ್ದಾಡುವ ಇವರದ್ದು ದೇಹ-ಮನಸ್ಸುಗಳ ನಡುವಿನ ನಿತ್ಯ ಸಂಘರ್ಷದ ಬದುಕು. ಈ ಲಿಂಗಾಂತರಿಗಳ ಅಂತರಂಗಕ್ಕೊಂದು ಇಣುಕುನೋಟ.

ನಮ್ಮ ಸಮಾಜದಲ್ಲಿ ಇದುವರೆಗೆ ಕೇವಲ ಗಂಡು ಮತ್ತು ಹೆಣ್ಣು ಎಂಬ ಎರಡು ಲಿಂಗಗಳನ್ನು ಮಾತ್ರ ಗುರುತಿಸಿ, ಮಾನ್ಯತೆ ನೀಡಲಾಗಿದೆ. ಆದರೆ, ಗಂಡೂ ಅಲ್ಲದ ಮತ್ತು ಹೆಣ್ಣೂ ಅಲ್ಲದ ಭಿನ್ನ ಲಿಂಗ ಮತ್ತು ಲಿಂಗತ್ವದಿಂದ ಗುರುತಿಸಿಕೊಂಡಿದ್ದ ಜನರು ನಮ್ಮ ಪುರಾಣ ಕಾಲದಲ್ಲಿ ಮತ್ತು ಚರಿತ್ರೆ ಕಾಲದಲ್ಲಿ ಇದ್ದರು ಎಂಬುದನ್ನು ನಾವ್ಯಾರೂ ಅಲ್ಲಗಳೆಯುವ ಹಾಗಿಲ್ಲ.

ಮಹಾಭಾರತದಲ್ಲಿ ಬರುವ ಶಿಖಂಡಿ, ಬೃಹನ್ನಳೆ, ಚರಿತ್ರೆಯಲ್ಲಿ ರಾಣಿಗಳ ಅಂತ:ಪುರದಲ್ಲಿ ದಾಸರು-ದಾಸಿಯರಾಗಿ ಕೆಲಸ ಮಾಡಲು ನೇಮಕಗೊಳ್ಳುತ್ತಿದ್ದಂತಹವರನ್ನು ಇಲ್ಲಿ ಉದಾಹರಿಸಬಹುದು.

ಹಾಗಿದ್ದರೆ ಏನಿದು ಹೊಸ ಸಮಸ್ಯೆ? ಯಾವುದೇ ಸಮಾಜದ ಶೇ.5ರಿಂದ ಶೇ.10ರಷ್ಟು ಜನ ಪರ್ಯಾಯವಾದ ಲೈಂಗಿಕ ಅಸ್ಮಿತೆ ಬಯಸುವುದನು ನಾವು ನೋಡಬಹುದು. ಆಧುನಿಕ ಕಾಲಘಟ್ಟದಲ್ಲಿ ತಮ್ಮ ಅಸ್ತಿತ್ವದ ಕೂಗಿನಲ್ಲಿ ಮೆಲ್ಲನೆ ಅಡಿ ಇಟ್ಟು ಬಂದಿರುವ ಇವರನ್ನು ನಿರ್ಲಕ್ಷಿಸುವ ಸ್ಥಿತಿಯಲ್ಲಿ ಈಗ ಯಾರೂ ಇಲ್ಲ. ತಮ್ಮನ್ನೇ ತಾವು ಸಂಘಟಿಸಿಕೊಂಡು, ಸಂವಿಧಾನಬದ್ಧ ಮತ್ತು ನಾಗರಿಕ ಹಕ್ಕುಗಳನ್ನು ಪ್ರತಿಪಾದಿಸುವ ಹೋರಾಟದಲ್ಲಿ ಈಗ ಇವರು ತೊಡಗಿಕೊಂಡಿದ್ದಾರೆ.

ತಮ್ಮ ಇರುವಿಕೆಯನ್ನು ಕಡೆಗಣಿಸಿರುವ ಸಮಾಜದ ಮುಖ್ಯಧಾರೆಯಲ್ಲಿ ಕೂಡ ತಮ್ಮದೇ ಆದ ರೀತಿಯಲ್ಲಿ ಬದುಕಿರುವ ಒಂದು ಪರಂಪರಾಗತ ಚೌಕಟ್ಟಿನಲ್ಲಿ ಯುಗಯುಗಗಳಿಂದಲೂ ಬದುಕಿ ಬಂದಿರುವ ಹಿಜ್ಡಾ ಸಮುದಾಯ ಹಾಗೂ ಯಾವುದೇ ಚೌಕಟ್ಟಿಗೂ ಸಿಗದೆ ಬಿಡಿ ಬಿಡಿಯಾಗಿ ತಮ್ಮ ಅಸ್ಮಿತೆಗಾಗಿ ಹೋರಾಟದ ಬದುಕನ್ನು ನಡೆಸುತ್ತಿರುವ ಟ್ರಾನ್ಸ್ಜೆಂಡರ್ಸ್ ಜನರ ಸಮಸ್ಯೆಗಳು ಹಾಗೂ ಸವಾಲುಗಳನ್ನು ನೋಡುತ್ತಾ ಹೋದರೆ, ಅವುಗಳ ಸರಮಾಲೆ ನಮ್ಮ ಮುಂದೆ ನಿಲ್ಲುತ್ತದೆ.

ಜ್ವಲಂತ ಸಮಸ್ಯೆಗಳನ್ನು ವಿಂಗಡಿಸುತ್ತಾ ಹೋದರೆ, ಮೊದಲನೆಯದು ಅಸ್ಮಿತೆ. ಅವರು ಈ ಸಮಾಜದ ಭಾಗವಾದರೂ ಕೂಡ ಅವರ ಇರುವಿಕೆಯನ್ನು ಎಲ್ಲೂ ದಾಖಲಿಸದೆ ಇರುವುದರಿಂದ ಅವರು ನಗಣ್ಯರಾಗಿದ್ದಾರೆ. ಇರುವಿಕೆಯಿಲ್ಲದ ಇವರು ಅವರು ಹುಟ್ಟಿದ ಲಿಂಗದಿಂದಗುರುತಿಸಿಕೊಳ್ಳಬಯಸದೇ ಇರುವುದರಿಂದ ಕೂಡ ಆರ್ಥಿಕವಾಗಿ ಅಸಹಾಯಕ ಸ್ಥಿತಿಯಲ್ಲಿ ಇದ್ದರೂ ಪಡಿತರ ವ್ಯವಸ್ಥೆಯ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

ಸರ್ಕಾರ, ಸಮಾಜ ಎರಡರಲ್ಲೂ ಅವರ ಅಸ್ಮಿತೆ ಇಲ್ಲದ ಕಾರಣಕ್ಕಾಗಿ ಯಾವುದೇ ಆರ್ಥಿಕ ಸೌಲಭ್ಯ, ಅಭಿವೃದ್ಧಿಯ ಪ್ರಯೋಜನ ಮತ್ತು ಉದ್ಯೋಗ ಅವಕಾಶಗಳಿಂದ ದೂರ ಉಳಿದಿದ್ದಾರೆ.

ಶೈಕ್ಷಣಿಕವಾಗಿ ಕೂಡ ಇವರು ದೂರ ಉಳಿದಿರಲು ಹಲವು ಕಾರಣಗಳಿವೆ. ಚಿಕ್ಕವರಿರುವಾಗ ಮನೆಯಲ್ಲಿ ಗಂಡಾಗಿದ್ದರೂ ಹೆಣ್ಣುಮಕ್ಕಳಂತೆ ಬಟ್ಟೆ ಧರಿಸುವುದು, ಅವರು ಕೆಲಸ ಮಾಡುವುದನ್ನು ಗಮನಿಸಿದ ಮನೆಯವರು ಆರಂಭದಲ್ಲಿ ಮಕ್ಕಳೆಂದು ಸುಮ್ಮನಿದ್ದರೂ ನಂತರ ಅದು ಸಲ್ಲದು ಎಂಬ ಕಟ್ಟಪ್ಪಣೆಗೆ ಬರುವಷ್ಟರಲ್ಲಿ ಅವರು ಯೌವ್ವನದ ಅಂಚಿಗೆ ಬಂದಿರುತ್ತಾರೆ.

ಯೌವ್ವನದ ಆರಂಭ ಆಕರ್ಷಣೆ ಅಷ್ಟೇ ಅಲ್ಲದೆ ನಾನ್ಯಾರು? ನಾನೇನಾಗಬೇಕು? ನನ್ನ ಬಯಕೆಗಳೇನು? ಎಂಬ ಹುಡುಕಾಟ, ಬೆಳವಣಿಗೆಯ ಒಂದು ಸಹಜ ಹಂತ. ಹಾರ್ಮೋನುಗಳ ಉತ್ಪಾದನೆ ಎಲ್ಲರನ್ನೂ ತುಯ್ದಾಟಕ್ಕೆ ದೂಡುವುದನ್ನು ನಾವೆಲ್ಲ ಬಲ್ಲೆವು. ಹಾಗೆ ಇವರ ಒಳಮನಸ್ಸಿನ ಬಯಕೆಗಳಿಗೆ ಎಲ್ಲರ ವಿರೋಧ.

ಪುರುಷಪ್ರಧಾನ ಸಮಾಜದಲ್ಲಿ `ಗಂಡಸುತನವನ್ನೇ ತೊರೆಯುವೆ~ ಎಂಬ ಇವರ ಒಳ ತುಡಿತವನ್ನು ಒಪ್ಪಿಕೊಳ್ಳಲಾಗದೆ, ನಿರ್ವಾಣದ (ಕ್ಯಾಸ್ಟ್ರೇಷನ್) ಹಾಗೂ ಹಾರ್ಮೋನುಗಳ ಮೂಲಕ ಬದಲಾಗಲು ಬಯಸುವ ಮಗನನ್ನು ಮಗಳೆಂದು ಒಪ್ಪಿಕೊಳ್ಳಲಾಗದೆ, ಮಗಳು ಎಸ್.ಆರ್.ಎಸ್. (ಸೆಕ್ಸ್ ರಿಅಸೈನ್ ಸರ್ಜರಿ)ಗೆ ಒಳಗಾಗುವುದನ್ನು ಊಹಿಸಿಕೊಳ್ಳಲೂ ಆಗದೆ ಇರುವುದು, ಅವರನ್ನು ಅವರ ಅಸ್ಮಿತೆಯ ಹುಡುಕಾಟಕ್ಕಾಗಿ ಮನೆ ಬಿಡುವಂತೆ ಮಾಡುತ್ತದೆ. ಹಾಗಾಗಿ, ಓದು ಯಾವುದೇ ಹಂತ ತಲುಪಿಲ್ಲದ ಕಾರಣಕ್ಕೆ ಶಾಲಾ/ಕಾಲೇಜು ವಿದ್ಯಾಭ್ಯಾಸದಿಂದ ವಂಚಿತರಾಗುವುದು ಅನಿವಾರ್ಯವಾಗುತ್ತದೆ.

ಇದರಿಂದಾಗಿ ಅವರು ಮುಂದಿನ ಜೀವನದಲ್ಲಿ ಯಾವ ಕೆಲಸವನ್ನು ಪಡೆಯುವ ಅರ್ಹತೆಯನ್ನೂ ಪಡೆಯಲಾರದವರಾಗುತ್ತಾರೆ. ಈ ಮಧ್ಯೆ ಯಾರಾದರೂ ವಿದ್ಯಾಭ್ಯಾಸ ಮುಂದುವರೆಸಿದಲ್ಲಿ ಅವರು ಸಮಾಜದ ಅಪಹಾಸ್ಯಕ್ಕೆ ಗುರಿಯಾದ ಉದಾಹರಣೆಗಳು ಅನೇಕ. ಇದರೊಂದಿಗೆ ಅತಿಯಾದ ಕುಚೇಷ್ಟೆಗೆ ಹಾಗೂ ದೌರ್ಜನ್ಯಕ್ಕೆ ಸಿಕ್ಕು, ಮಾನಸಿಕವಾಗಿ ಜರ್ಜರಿತರಾಗುತ್ತಾರೆ. ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದವರ ಸಂಖ್ಯೆ ಹೆಚ್ಚಿದೆ.

ಸಮಾಜದಿಂದ ಬಹುಮಟ್ಟಿಗೆ ಎಲ್ಲ ಹಂತಗಳಲ್ಲಿ ನಿರ್ಲಕ್ಷಿತರೂ, ಅಪಮಾನಿತರೂ ಆಗುವ ಇವರು ತಮ್ಮನ್ನು ಒಪ್ಪಿಕೊಳ್ಳುವ ಜನರಿಗಾಗಿ ಹುಡುಕಾಡುತ್ತಾರೆ. ತಮಗೆ ತಮ್ಮಂಥವರ ಸಂಗದಲ್ಲಿಯೇ ನೆಮ್ಮದಿ, ಸಂತೋಷ ಸಿಗಬಲ್ಲದು ಎಂಬ ಅರಿವಾಗಿ ಅವರು ಮನೆ ತೊರೆಯುತ್ತಾರೆ; ತಮ್ಮ ಸಮುದಾಯದವರನ್ನು ಸೇರಿಕೊಳ್ಳುತ್ತಾರೆ.

ಇನ್ನೂ ಇತರರಿಗೆ ಅವರದೇ ಆಗಿರುವ ಸಮುದಾಯ, ಗುಂಪು ಎಂದೇನೂ ಇಲ್ಲ. ಆದರೂ, ಹಿಂಸೆ-ಅಪಮಾನದಿಂದ ತಪ್ಪಿಸಿಕೊಳ್ಳಲು ತಮ್ಮ ನೆಲೆ ತೊರೆಯುತ್ತಾರೆ (ಎಫ್ಟುಎಂ-ಹೆಣ್ಣಾಗಿ ಹುಟ್ಟಿ ಗಂಡಾಗಿ ಬದುಕಲು ಬಯಸುವವರು). ಇಲ್ಲಿಗೂ ಅವರ ನೆಲೆಯಿಲ್ಲದ ಬದುಕಿನ ಗೊಂದಲ, ಅಭದ್ರತೆ ಕೊನೆಗೊಳ್ಳುವುದಿಲ್ಲ.

ಕೆಲವರಿಗೆ ಪಿತ್ರಾರ್ಜಿತ ಆಸ್ತಿ, ಮನೆ ಇದ್ದರೂ ಇವರ ಲೈಂಗಿಕ ಭಿನ್ನ ಆಸಕ್ತಿಯಿಂದಾಗಿ ಮನೆಯಿಂದ ಹೊರ ನೂಕಲ್ಪಡುತ್ತಾರೆ; ಆಸ್ತಿಯಿಂದ ವಂಚಿತರಾಗುತ್ತಾರೆ. ಹಾಗಾಗಿ ಇಂಥವರು ತಾವು ಬದುಕಲು ಪುಟ್ಟ ಸೂರಿಗೂ ಪಡಿಪಾಟಲು ಪಡುವಂತಾಗುತ್ತದೆ; ಇವರಿಗೆ ಬಾಡಿಗೆ ಮನೆಗಳು ಸಿಗುವುದೂ ದುಸ್ತರ; ಇವರನ್ನು ಕಂಡವರು ದುಪ್ಪಟ್ಟು ಬಾಡಿಗೆ ಕೇಳುವ ಉದಾಹರಣೆಗಳೂ ಅಸಂಖ್ಯ.

ಇವರಿಗೆ ಆರ್ಥಿಕ ಮೋಸಕ್ಕೆ ಗುರಿ ಮಾಡಿದ ಪ್ರಕರಣಗಳೂ ಅನೇಕ. ಇವರು ಧೈರ್ಯದಿಂದ ಪೊಲೀಸ್ ಠಾಣೆಗೆ ಹೋಗಿ, ತಮ್ಮ ವಿರುದ್ಧ ದೂರು ನೀಡಲಾರರು ಎಂಬ ಭಂಡ ನಂಬಿಕೆಯನ್ನು ಹೊಂದಿರುವ ಇತರರು ಇವರಿಗೆ ಹೆಚ್ಚಿನ ಪ್ರಮಾಣದಲ್ಲಿ ವಂಚನೆ ಮಾಡುತ್ತಾರೆ. ಹಾಗಾಗಿ, ಇವರುಗಳು ಪುಟ್ಟ ಪುಟ್ಟ ಕೋಣೆ/ಮನೆಗಳಲ್ಲಿ ಕುರಿಗಳಂತೆ ಇರುವುದು ಅನಿವಾರ್ಯವಾಗಿ ಬಿಡುತ್ತದೆ. ಇವರು ಒಂದೇ ಪ್ರದೇಶದಲ್ಲಿ ಹೆಚ್ಚಿನ ಮಟ್ಟದಲ್ಲಿ ವಾಸವಾಗಿರುವುದು ಕಾಣುತ್ತದೆ.

ಇವರಲ್ಲಿ ಹಲವರು ತಮ್ಮ ಜೀವನೋಪಾಯಕ್ಕಾಗಿ ಸೆಕ್ಸ್ ವರ್ಕ್ಗೆ ಇಳಿಯುವುದು ಸಾಮಾನ್ಯ. ಏಕೆಂದರೆ, ಇವರಿಗೆ ಅತಿ ಸುಲಭದಲ್ಲಿ ಸಂಪಾದನೆಯನ್ನು ಒದಗಿಸುವುದು ಇದೇ ವೃತ್ತಿ. ಈ ಪ್ರಕ್ರಿಯೆಯಲ್ಲಿ ಇವರ ಮೇಲೆ ಗೂಂಡಾಗಳು, ಪೊಲೀಸರು ದಾಳಿ ಮಾಡುವುದು ಸುಲಭವಾಗುತ್ತದೆ. ಇವರ ಮೇಲೆ ನಡೆಯುವ ದಮನ-ದೌರ್ಜನ್ಯವನ್ನು ಊಹಿಸಿಕೊಳ್ಳುವುದೂ ಭಯಾನಕ.

ಎಷ್ಟೋ ವೇಳೆ ವಿನಾಕಾರಣ ಇವರನ್ನು ಅವರದಲ್ಲದ ತಪ್ಪಿಗೆ ಪೊಲೀಸರು ಬೆದರಿಸುವುದು ಮತ್ತು ಬಂಧಿಸುವುದು ಸರ್ವೇಸಾಮಾನ್ಯ.ಇವರಲ್ಲಿ ಕೆಲವರಾದರೂ ತಮ್ಮನ್ನು ಲಿಂಗ ಪರಿವರ್ತನೆಗೆ ಒಳಗು ಮಾಡಿಕೊಳ್ಳುವ ಹಂಬಲವನ್ನು ಹೊಂದಿರುತ್ತಾರೆ. ಇದೊಂದು ಅತ್ಯಂತ ಕ್ಲಿಷ್ಟ ಪ್ರಕ್ರಿಯೆ. ಇದಕ್ಕೆ ಅಪಾರ ಹಣ ಬೇಕು. ಇದೂ ಇವರ ಬಳಿ ಇಲ್ಲದಿರುವುದರಿಂದ, ಗುಣಮಟ್ಟವನ್ನು ಗಮನಿಸದೆ ಅತಿ ಕಠೋರ/ನಾಟಿ ರೀತಿಯಲ್ಲಿ ಇವರು ಲಿಂಗ ಪರಿವರ್ತನೆ ಮಾಡಿಸಿಕೊಳ್ಳಲು ಮುಂದಾಗಿರುವುದೂ ಉಂಟು. ಈ ಹಂತದಲ್ಲಿ ಅನೇಕರು ಪ್ರಾಣ ಕಳೆದುಕೊಂಡಿರುವುದಕ್ಕೂ ಲೆಕ್ಕವಿಲ್ಲ.

ನಿರ್ವಾಣ (ಸೆಕ್ಸ್ ಬದಲಾವಣೆ) ಕ್ರಿಯೆಗೆ ಬೇಕಾಗುವ ಹಣ ಹೊಂದಿಸಲು ಅನೇಕರು ಸಾಲ ಮಾಡುತ್ತಾರೆ; ಆ ಸಾಲವನ್ನು ತೀರಿಸಲು ಆಗದೆ ಒದ್ದಾಡುತ್ತಾರೆ; ಇದಕ್ಕಾಗಿ ತಮ್ಮ ದೇಹವನ್ನೇ ಮಾರಾಟ ಮಾಡಿಕೊಳ್ಳುತ್ತಾರೆ; ಇರುವ ದೇಹದ ಒಳಗೆ ಇರಲಾಗದೆ, ಬಯಸುವ ದೇಹಕ್ಕಾಗಿ ನಡೆಯುವ ಹೋರಾಟದ ಜೊತೆಗಿನ ಈ ಸಾಲದ ಬಲೆ ಕೂಡ ಬಹು ಕಠೋರವಾದುದು.

ಇನ್ನೊಂದು ಅತಿ ಕಿರಿಕಿರಿ ಉಂಟು ಮಾಡುವ ಸಮಸ್ಯೆ ಎಂದರೆ, ಇಂಥವರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗಲೆಲ್ಲ ಎಲ್ಲರ ಕೊಂಕು ನೋಟಕ್ಕೆ ಗುರಿಯಾಗುವುದು; ಇದರಿಂದ ಕೊಂಚವೂ ಖಾಸಗಿತನ ಇಲ್ಲದೆ, ನೋವಿಗೆ ಬಲಿಯಾಗುವುದು. ಇವರಿಗೆ ಎಲ್ಲೂ ಖಾಸಗಿ ಸ್ಥಳ ಇಲ್ಲ. ಹಾಗಾಗಿ ಇವರು ಎಲ್ಲರ ಬಿರುಸಿನ ನೋಟಕ್ಕೆ, ಅವಹೇಳನಕ್ಕೆ ಗುರಿಯಾಗುತ್ತಲೇ ಬದುಕಬೇಕಿದೆ.

ಟ್ರಾನ್ಸ್ಜೆಂಡರ್ ಜನರು ಲೈಂಗಿಕವಾಗಿ ದೌರ್ಜನ್ಯಕ್ಕೆ ಹಾಗೂ ಹಲ್ಲೆಗೂ ಒಳಗಾಗುವುದು ಸಾಮಾನ್ಯ. ಆದರೆ ಕಾನೂನು ಪ್ರಕಾರ ಗಂಡಾಗಿ ಹುಟ್ಟಿದವರ ಮೇಲೆ ರೇಪ್ ಆಗಲು ಸಾಧ್ಯ ಎನ್ನಲು ಕಾನೂನಿನಲ್ಲಿ ಅವಕಾಶ ಇಲ್ಲದೆ ಇರುವ ಕಾರಣದಿಂದಾಗಿ ಕಾನೂನಿನ ರಕ್ಷಣೆಯನ್ನು ಕೂಡ ಅವರು ಹೊಂದಲು ಸಾಧ್ಯವಿಲ್ಲವಾಗಿದೆ. ಇದರೊಂದಿಗೆ ಅವರಿಗೆ ಮದುವೆಯಾಗುವ ಹಕ್ಕಾಗಲಿ, ದತ್ತು ತೆಗೆದುಕೊಳ್ಳುವ ಹಕ್ಕಾಗಲಿ ಇಲ್ಲ.
(ಲೇಖಕಿ ಕೌನ್ಸೆಲರ್ ಹಾಗೂ ಟ್ರೇನರ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.