ಸೋಮವಾರ, ಏಪ್ರಿಲ್ 12, 2021
31 °C

ಲಿಬಿಯಾದಿಂದ 12,000 ಭಾರತೀಯರು ವಾಪಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ:  ಗಲಭೆಗ್ರಸ್ತ ಲಿಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರನ್ನು ಕರೆತರುವಲ್ಲಿ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ ಎನ್ನುವ ಆರೋಪಗಳ ಹೊರತಾಗಿಯೂ ಇದುವರೆಗೆ 12 ಸಾವಿರ ಭಾರತೀಯರನ್ನು ಸ್ವದೇಶಕ್ಕೆ ಕರೆ ತರಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.ಶನಿವಾರದಿಂದ ಈಚೆಗೆ ಏರ್ ಇಂಡಿಯಾದ ಮೂರು ವಿಶೇಷ ವಿಮಾನಗಳ ಮೂಲಕ ಟ್ರಿಪೋಲಿಯಿಂದ 2,300 ಭಾರತೀಯರನ್ನು ಕರೆತರಲಾಗಿದೆ. ಅಲ್ಲದೇ ಶೆಹ್ಬಾ (ಲಿಬಿಯಾ)ದಿಂದಲೂ ಒಂದು ವಿಮಾನದ ಮೂಲಕ ಇವರನ್ನೆಲ್ಲಾ ಸ್ವದೇಶಕ್ಕೆ ಕರೆ ತರಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ. ಅಶಾಂತಿಯ ವಾತಾವರಣ ಇರುವ ಲಿಬಿಯಾದಲ್ಲಿ ಸುಮಾರು 18 ಸಾವಿರ ಭಾರತೀಯರು ವಾಸವಾಗಿದ್ದಾರೆ.ದುಬೈನ ಏರ್‌ಲೈನ್ಸ್ ಮೂಲಕ ಪ್ರತಿದಿನವೂ ಭಾರತೀಯರನ್ನು ಕರೆ ತರಲಾಗುವುದು. ಸುಮಾರು 360 ಮಂದಿ ಈಗ ಟ್ಯುನಿಷಿಯಾಕ್ಕೆ ಹೋಗಿದ್ದು, ಅಲ್ಲಿಂದ ಅವರನ್ನು ರಕ್ಷಿಸಲಾಗುವುದು.ಅಲ್ಲಿದ್ದ 580 ಮಂದಿಯನ್ನು ಮುಂಬೈಗೆ ಕರೆ ತರಲಾಗಿದೆ.ಇದಲ್ಲದೇ ಎಂ.ವಿ ಸ್ಕೋಟಿಯಾ ಪ್ರಿನ್ಸ್ ಹಡಗಿನ ಮೂಲಕ ಲಿಬಿಯಾದ ಬೆಂಗಾಜಿಯಿಂದ 972 ಭಾರತೀಯರನ್ನು ಕರೆ ತರಲಾಗುತ್ತಿದ್ದು, ಹಡಗು ಅಲೆಕ್ಸಾಂಡ್ರಿಯಾ ಕಡೆ ತೆರಳುತ್ತಿದೆ. ಇವರೆಲ್ಲಾ ಸೋಮವಾರ ಅಥವಾ ಮಂಗಳವಾರದ ವೇಳೆಗೆ ಭಾರತಕ್ಕೆ ಬರಲಿದ್ದಾರೆ ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.