ಲೈಬೇರಿಯಾ ಅಧ್ಯಕ್ಷೆ ಎಲೆನ್ಗೆ ನೊಬೆಲ್: ಮಹಿಳಾ ತಂಡಕ್ಕೆ ಸಂತಸ
ನವದೆಹಲಿ (ಪಿಟಿಐ): ವಿಶ್ವಸಂಸ್ಥೆ ಶಾಂತಿ ಪಾಲನಾ ತಂಡದ ಸದಸ್ಯರಾಗಿ ಲೈಬೀರಿಯಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತದ 125 ಮಹಿಳಾ ಪೊಲೀಸರಿಗೆ, ಅಲ್ಲಿನ ಅಧ್ಯಕ್ಷೆ ಎಲೆನ್ ಜಾನ್ಸನ್ ಸರ್ಲೀಫ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಬಂದಿರುವುದು ಎಲ್ಲಿಲ್ಲದ ಸಂತೋಷ ತಂದಿದೆ.
ಕೇಂದ್ರ ಮೀಸಲು ಪೊಲೀಸ್ ಪಡೆಗೆ (ಸಿಆರ್ಪಿಎಫ್) ಸೇರಿದ ಈ ಮಹಿಳೆಯರನ್ನು ವಿಶೇಷ ಪೊಲೀಸ್ ಅಧಿಕಾರಿಗಳಾಗಿ ವಿಶ್ವಸಂಸ್ಥೆಯ ಮೂಲಕ, ಎಲೆನ್ ಭದ್ರತೆಗಾಗಿ ನಿಯೋಜಿಸಲಾಗಿದೆ.
`ಎಲೆನ್ ಪ್ರಶಸ್ತಿ ಬಂದಿರುವುದು ನಮಗೆ ಅಪಾರ ಸಂತೋಷವಾಯಿತು~ ಎಂದು ಹೇಳುತ್ತಾರೆ ಭಾರತೀಯ ಮಹಿಳಾ ಪೊಲೀಸ್ ಘಟಕದ ಮುಖ್ಯಸ್ಥೆ ಪೂನಂ ಗುಪ್ತ.
ದಿನದ 24 ಗಂಟೆ ಎಲೆನ್ ಅವರ ಕಚೇರಿಯಲ್ಲಿ ಕಾವಲು ಕಾಯುವ ಈ ಮಹಿಳೆಯರು ಎಕೆ-47, ಐಎನ್ಎಸ್ಎಎಸ್ ರೈಫಲ್ಗಳಂಥ ಶಸ್ತ್ರಾಸ್ತ್ರಗಳು ಹಾಗೂ ಲಘು ಮಶೀನ್ ಗನ್ಗಳನ್ನು ತಮ್ಮ ಬಳಿ ಇಟ್ಟುಕೊಂಡಿರುತ್ತಾರೆ.
ವಿಶ್ವ ಸಂಸ್ಥೆಯ ಶಾಂತಿ ಪಾಲನಾ ತಂಡಕ್ಕೆ ಭಾರತ ನಿರಂತರವಾಗಿ ತನ್ನ ಪಡೆಗಳನ್ನು ಕಳುಹಿಸುತ್ತದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.