ಭಾನುವಾರ, ಜೂನ್ 13, 2021
22 °C

ಲೋಕೋಪಯೋಗಿ ಇಲಾಖೆ ವಿರುದ್ಧ ನಾಗರಿಕರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನರಸಿಂಹರಾಜಪುರ: ಸ್ವಾತಂತ್ರ್ಯ ಪೂರ್ವದಲ್ಲೇ ರೈಲ್ವೆ, ಸಾರಿಗೆ ಸೇರಿದಂತೆ ಆಧುನಿಕ ಸಾರಿಗೆ ಸೌಲಭ್ಯ ಹೊಂದಿದ್ದ, ಭತ್ತದ ಕಣಜವೆಂದು ಪ್ರಸಿದ್ಧಿ ಪಡೆದುಕೊಂಡಿದ್ದ ತಾಲ್ಲೂಕು ಕೇಂದ್ರವನ್ನು ಲೋಕೋಪಯೋಗಿ ಇಲಾಖೆ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.ಪ್ರಮುಖವಾಗಿ ಜಿಲ್ಲಾ ಕೇಂದ್ರವಾದ ಚಿಕ್ಕಮಗಳೂರಿನಿಂದ ಹಾಗೂ ಪಕ್ಕದ ಜಿಲ್ಲೆಯಾದ ಶಿವಮೊಗ್ಗ ದಿಂದ ಬರುವಾಗ ರಸ್ತೆ ಬದಿಯಲ್ಲಿ ಅಳವಡಿಸಿರುವ  ನಾಮಫಲಕದಲ್ಲಿ ಎನ್.ಆರ್.ಪುರದ ಹೆಸರು ಅಥವಾ ಅಲಲಿಗೆ ಇರುವ ದೂರವನ್ನು ನಮೂದಿಸದೆ ಲೋಕೋಪಯೋಗಿ ಇಲಾಖೆ ಪ್ರಮಾದ ಎಸಗಿದೆ ಎಂಬ ಆರೋಪ ವ್ಯಕ್ತವಾಗಿದೆ.ಶಿವಮೊಗ್ಗದಿಂದ ಪ್ರಮುಖ ಧಾರ್ಮಿಕ ಸ್ಥಳಗಳಾದ ಶೃಂಗೇರಿ, ಹೋರನಾಡು, ಕಳಸ, ರಂಭಾಪುರಿ ಪೀಠಗಳಿಗೆ ಹೋಗ ಬೇಕಾದರೆ ತಾಲ್ಲೂಕು ಕೇಂದ್ರದ ಮೂಲಕವೇ ಹಾದು ಹೋಗ ಬೇಕಾಗುತ್ತದೆ. ಈ ಎಲ್ಲ ಧಾರ್ಮಿಕ ಸ್ಥಳಗಳ ಬಗ್ಗೆ ಎಲ್ಲೆಡೆ  ನಾಮ ಫಲಕ ಅಳವಡಿಸಿರುವ ಇಲಾಖೆ ತಾಲ್ಲೂಕು ಕೇಂದ್ರದ ಹೆಸರು ಕೈಬಿಟ್ಟಿದೆ.ತಾಲ್ಲೂಕು ಕೇಂದ್ರದಲ್ಲೂ ಜೈನರ ಧಾರ್ಮಿಕ ಕ್ಷೇತ್ರವಾದ ಸಿಂಹನಗದ್ದೆ ಬಸ್ತಿಮಠವಿದೆ. ಇಲ್ಲಿಗೆ ರಾಜ್ಯದ ಭಕ್ತರಲ್ಲದೆ ಹೊರ ರಾಜ್ಯದಿಂದಲೂ ಭಕ್ತರು ಆಗಮಿಸುತ್ತಾರೆ.ಇಟಾಲಿಯನ್ ಗೋಥಿಕ್ ಶೈಲಿಯಲ್ಲಿ ನಿರ್ಮಿಸಿರುವ, ಕರ್ನಾಟಕದಲ್ಲೇ ಅತಿ ದೊಡ್ಡ ರೋಮನ್ ಕ್ಯಾಥೋಲಿಕ್ ಪಂಗಡಕ್ಕೆ ಸೇರಿರುವ ಚರ್ಚ್ ಬಗ್ಗೆಯೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಿಳಿದಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.ಪ್ರಸ್ತುತ ವರ್ಷಗಳಲ್ಲಿ ರಬ್ಬರ್, ಶುಂಠಿ, ಬಾಳೆ ಮುಂತಾದ ವಾಣಿಜ್ಯ ಬೆಳೆಗಳನ್ನು ಅಧಿಕ ಪ್ರಮಾಣದಲ್ಲಿ ತಾಲ್ಲೂಕು ಕೇಂದ್ರದ ವ್ಯಾಪ್ತಿಯಲ್ಲಿ ಬೆಳೆಯಲಾಗುತ್ತಿದೆ. ರಾಜ್ಯದ ತಲಾ ಆದಾಯದಲ್ಲಿ 6ನೇ ಸ್ಥಾನ ಪಡೆದಿರುವ ಪ್ರಮುಖ ಸ್ಥಳವನ್ನು ಲೋಕೋಪಯೋಗಿ ಇಲಾಖೆ ಕಡೆಗಣಿಸಿರುವುದು ಸರಿಯಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.ಶಿವಮೊಗ್ಗದಿಂದ ಬರುವ ಮಾರ್ಗದ ಪಕ್ಕದಲ್ಲಿ ಇನ್ನು ಮುಂದೆ ಹೊಸದಾಗಿ ಹಾಕುವ ಮಾರ್ಗ ಸೂಚಿ ನಾಮಫಲಕದಲ್ಲಿ ತಾಲ್ಲೂಕು ಕೇಂದ್ರದ ಹೆಸರು ಹಾಗೂ ಪ್ರಮುಖ ಧಾರ್ಮಿಕ ಕೇಂದ್ರದ ಹೆಸರನ್ನು ಸೇರಿಸಿ ಅಳವಡಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಸುಬ್ರಹ್ಮಣ್ಯ ಪ್ರಜಾವಾಣಿಗೆ ತಿಳಿಸಿದರು. ಲೋಕೋಪಯೋಗಿ ಇಲಾಖೆಯಿಂದ ಆಗಿರುವ ದೋಷವನ್ನು ಸರಿಪಡಿಸುವತ್ತ ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಪ್ರವಾಸೋಧ್ಯಮ ಇಲಾಖೆ ಸರಿಪಡಿಸುವತ್ತ ಶೀಘ್ರ ಪ್ರಯತ್ನಿಸಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.