ಮಾಲೂರು: ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು ಪಟ್ಟಣದ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕರವೇ ತಾಲ್ಲೂಕು ಅಧ್ಯಕ್ಷ ಎನ್.ರಾಮಕೃಷ್ಣಪ್ಪ ಮಾತನಾಡಿ ಬೇಸಿಗೆ ಕಾಲಕ್ಕೂ ಮುನ್ನವೇ ಬೆಸ್ಕಾಂ ಇಲಾಖೆ ಲೋಡ್ ಶೆಡ್ಡಿಂಗ್ ನೆಪದಲ್ಲಿ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ವಿದ್ಯುತ್ ಅನ್ನು ಅಸಮರ್ಪಕವಾಗಿ ಪೂರೈಸುತ್ತಿದೆ ಎಂದು ದೂರಿದರು.

ಬೆಸ್ಕಾಂ ಎಂಜಿನಿಯರ್ ವಾಸುದೇವ್ ಮಾತನಾಡಿ, ತಾಲ್ಲೂಕಿಗೆ ಪ್ರತಿದಿನ 140 ಮೆಗಾ ವಾಟ್ ವಿದ್ಯುತ್ ಅಗತ್ಯವಿದೆ. ಆದರೆ ಈಗ ಪ್ರತಿದಿನ 30ರಿಂದ 40 ಮೆಗಾ ವಾಟ್ ಮಾತ್ರ ಪೂರೈಕೆಯಾಗುತ್ತಿರುವುದರಿಂದ ಸಮಸ್ಯೆ ಎದುರಾಗಿದೆ. ಕೆಲವೇ ದಿನಗಳಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ ನಂತರ ಮುತ್ತಿಗೆ ಹಿಂಪಡೆದರು.

ಪದಾಧಿಕಾರಿಗಳಾದ ಎನ್.ದಯಾನಂದ್, ಶಿವಾರ ನಾರಾಯಣಸ್ವಾಮಿ, ಮಾಸ್ತಿ ಮಂಜು, ರಾಮಚಂದ್ರ, ಕಡತೂರು ಮಂಜು, ಬಾಬು, ಶಿವಕುಮಾರ್, ಶಂಕರ್, ಕಾಂತಮೂರ್ತಿ, ಶ್ರೀನಾಥ್, ಮಂಜುನಾಥ್ ರೆಡ್ಡಿ, ಸಾರಥಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪುರಸಭೆ ಸದಸ್ಯರ ಚರ್ಚೆ
ಅಸಮರ್ಪಕ ವಿದ್ಯುತ್ ಪೂರೈಕೆ ಕುರಿತು ಬೆಸ್ಕಾಂ ಇಲಾಖೆ ಕಚೇರಿಯಲ್ಲಿ ಬುಧವಾರ ಪುರಸಭೆ ಸದಸ್ಯರ ಚರ್ಚೆ ನಡೆಯಿತು.
ಪುರಸಭೆ 13ನೇ ವಾರ್ಡ್ ಸದಸ್ಯ ಎಂ.ವಿ.ವೇಮನ ಮಾತನಾಡಿ, ಕುಡಿಯುವ ನೀರು ಪೂರೈಕೆಯಲ್ಲಿ ಏರುಪೇರು ಉಂಟಾಗಿ ಸಾರ್ವಜನಿಕರಿಗೆ ತೊಂದರೆಯಾಗಿದೆ. ನೀರಿಗಾಗಿ ಆದರೂ ವಿದ್ಯುತ್ ಅನ್ನು ಸಮರ್ಪಕವಾಗಿ ನೀಡಿ ಎಂದು ಹೇಳಿದರು.

ಸದಸ್ಯರಾದ ಎಂ.ಪಿ.ವಿಜಯಕುಮಾರ್, ಸಿ.ಪಿ.ನಾಗರಾಜ್, ರಾಮಮೂರ್ತಿ, ಮುಖಂಡರಾದ ಆಂಜಿ, ಗೌರಿಶಂಕರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.