ಬುಧವಾರ, ಮಾರ್ಚ್ 3, 2021
23 °C

ಲೋಹದ ಹಾಳೆಯಲ್ಲಿ ಪುರಾಣದ ಚಿತ್ತಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲೋಹದ ಹಾಳೆಯಲ್ಲಿ ಪುರಾಣದ ಚಿತ್ತಾರ

ಪುರಾಣ ಕಥೆಗಳ ಸಾರವನ್ನು ಚಿತ್ರಗಳಲ್ಲಿ ಪಡಿಮೂಡಿಸಿ, ಆ ಮೂಲಕ ಅದರ ಮಹತ್ವವನ್ನು ತಿಳಿಸಲು ಹೊರಟವರು ದಿನೇಶ್ ಮಗರ್‌. ಹಿತ್ತಾಳೆಯ ಹಾಳೆಗಳನ್ನು ಮಾಧ್ಯಮವಾಗಿಟ್ಟುಕೊಂಡು ಅವರು ರಚಿಸಿರುವ ಕಲಾಕೃತಿಗಳು ಭೂತ ಹಾಗೂ ವರ್ತಮಾನ ಕಾಲಗಳ ಅನನ್ಯ ಸಮ್ಮಿಶ್ರಣ ಎಂಬಂತೆ ಭಾಸವಾಗುತ್ತದೆ.ಪುರಾಣದ ಶಾಸ್ತ್ರ, ಸಂಕೇತಗಳು ಚಿತ್ರದಲ್ಲಿ ವ್ಯಕ್ತವಾಗುವಂತೆ ಮಾಡಿರುವ ಅವರ ಪ್ರಯೋಗ ನೋಡುಗರ ಗಮನ ಸೆಳೆಯುತ್ತವೆ. ಕಲಾಕೃತಿಗಳ ಪ್ರದರ್ಶನಕ್ಕೆ ‘ಮಿಥಿಸಿಸಮ್‌’ ಎಂಬ ಅನ್ವರ್ಥ ಹೆಸರನ್ನೇ ಇರಿಸಿದ್ದಾರೆ. ಹಿತ್ತಾಳೆ ಹಾಗೂ ಚಿನ್ನದ ಫಲಕಗಳನ್ನು ಜೋಡಿಸಿ ಹರಳುಗಳೊಂದಿಗೆ ಚಿತ್ರ ಹಾಗೂ ಶಿಲ್ಪಕಲಾಕೃತಿಗಳನ್ನು ರೂಪಿಸಿದ್ದಾರೆ.ಕಮಲದ ಹೂಗಳು, ಅಡಿಕೆ– ಎಲೆ, ಶಂಖ, ಮೀನು ಇತ್ಯಾದಿ ವಸ್ತುಗಳು ಇವರ ಚಿತ್ರಗಳಲ್ಲಿ ಎದ್ದು ಕಾಣುತ್ತವೆ. ಸ್ವರೋವ್‌ಸ್ಕಿ ಅಂಶ ಹಾಗೂ ಚಿನ್ನದ ಫಲಕಗಳನ್ನು ಹೊಂದಿರುವ ಈ ಕಲಾಕೃತಿಗಳು ತಂಜಾವೂರು ಶೈಲಿಯನ್ನು ಹೋಲುತ್ತವೆ.ರಕ್ಷಕನಾಗಿರುವ ವಿಷ್ಣುವಿನ ಅವತಾರವನ್ನು ಪ್ರತಿಮಾ ಶಾಸ್ತ್ರಕ್ಕೆ ಅನುಗುಣವಾಗಿ ಚಿತ್ರಿಸಿರುವುದು ಇವರ ವೈಶಿಷ್ಟ್ಯ. ವಿಷ್ಣುವಿನ ಬಹು ಅವತಾರಗಳು ಹಾಗೂ ಸಂಕೇತಗಳನ್ನು ಇವರ ಚಿತ್ರಗಳು ಪ್ರತಿಬಿಂಬಿಸುತ್ತವೆ.ಪ್ರದರ್ಶನದ ವಿವರ

ಸ್ಥಳ: ಚಿತ್ರಕಲಾ ಪರಿಷತ್‌

ಸಮಯ: ಬೆಳಿಗ್ಗೆ 10 ರಿಂದ ಸಂಜೆ 7

ನಾಳೆ (ಆ.7) ಕೊನೆಯ ದಿನ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.