ವಂಡರ್‌ಲಾ ದಸರಾ

7

ವಂಡರ್‌ಲಾ ದಸರಾ

Published:
Updated:
ವಂಡರ್‌ಲಾ ದಸರಾ

ಭರಪೂರ ಮನರಂಜನೆ ನೀಡುವ ಮೈಸೂರು ರಸ್ತೆ ಅಮ್ಯೂಸ್‌ಮೆಂಟ್ ಪಾರ್ಕ್ ವಂಡರ್‌ಲಾ `ದಸರಾ~ ಪ್ರಯುಕ್ತ ಅ. 11ರ ವರೆಗೂ (ಬೆಳಿಗ್ಗೆ 11 ರಿಂದ ಸಂಜೆ 7) ಅನೇಕ ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ನಡೆಸುತ್ತಿದೆ.ಈ ಅವಧಿಯಲ್ಲಿ ಭೇಟಿ ಕೊಡುವವರಿಗೆ ಭರ್ಜರಿ ಸ್ವಾಗತ ನೀಡಲು ಆಕರ್ಷಕವಾಗಿ ಶೃಂಗರಿಸಲಾಗಿದೆ. ಕರ್ನಾಟಕದ ಸಿರಿವಂತ ಮತ್ತು ಶೋಭಾಯಮಾನ ಸಂಸ್ಕೃತಿಯನ್ನು ಬಿಂಬಿಸುವ ಡೊಳ್ಳು ಕುಣಿತ ಇದೆ. ನೀವೂ ಸಹ ಹಾಡಿ ಕುಣಿಯುವ ಅವಕಾಶವಿದೆ. ವಾರಾಂತ್ಯದಲ್ಲಿ ಪೂಜಾ ಕುಣಿತ ಮತ್ತು ಮರಗಾಲು ಕುಣಿತ ಇರುತ್ತದೆ.ಮೊಬೈಲ್ ಫನ್ ಗೇಮ್ಸನಲ್ಲಿ ಭಾಗವಹಿಸಿ ಗೆದ್ದರೆ ಬಹುಮಾನ ದೊರೆಯಲಿದೆ. ಡ್ಯಾನ್ಸ್ ಪ್ರಿಯರಿಗೆ ಕುಣಿದು ಕುಪ್ಪಳಿಸಲು ಮುಕ್ತ ಡಿಜೆ ಡ್ಯಾನ್ಸ್ ಫ್ಲೋರ್, ಹಬ್ಬದ ಸವಿಯನ್ನು ಹೆಚ್ಚಿಸಲು ಖಾದ್ಯ ಮೇಳ ಆಯೋಜಿಸಲಾಗಿದೆ.ರೋಮಾಂಚಕಾರಿ, ಉಸಿರು ಬಿಗಿ ಹಿಡಿಯುವಂತೆ ಮಾಡುವ ಕ್ರೀಡೆಗಳು ಮತ್ತು ಮನ ಮುದಗೊಳಿಸುವ ನಿರ್ಮಲವಾದ ಜಲ ಕ್ರೀಡೆಗಳನ್ನು ಆನಂದಿಸಬಹುದು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry