ಮಂಗಳವಾರ, ಜೂನ್ 15, 2021
21 °C

ವಚನ ಸಾಹಿತ್ಯದಿಂದ ಕನ್ನಡಕ್ಕೆ ಸ್ಥಾನಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳೆನರಸೀಪುರ: `ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರಕಿಸಿಕೊಟ್ಟಿದ್ದು ವಚನ ಸಾಹಿತ್ಯ~ ಎಂದು ಸಾಹಿತಿ ಡಾ. ಮಳಲಿ ವಸಂತಕುಮಾರ್ ನುಡಿದರು.ತಾಲ್ಲೂಕು ವಚನ ಸಾಹಿತ್ಯ ಅಕಾಡೆಮಿ ಶನಿವಾರ ತಾಲ್ಲೂಕಿನ ಬಾಗೀವಾಳು ಗ್ರಾಮದಲ್ಲಿ ಆಯೋಜಿಸಿದ್ದ ಹಳೇಕೋಟೆ ಹೋಬಳಿ ಮಟ್ಟದ ವಚನ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.ವಚನಗಳಲ್ಲಿ ಕ್ರಾಂತಿ, ಸಂಸ್ಕೃತಿ, ಶಾಂತಿ, ಸಮಾಧಾನ ಎಲ್ಲವೂ ಇದೆ. ನೊಂದ ಮನಸ್ಸಿಗೆ ಸಮಾಧಾನ, ದಿಕ್ಕು ತಪ್ಪಿದವರಿಗೆ ಮಾರ್ಗದರ್ಶನ ಮಾಡುವ ಶಕ್ತಿ ವಚನಗಳಲ್ಲಿ ಅಡಕವಾಗಿದೆ ಎಂದರು.ಸಮ್ಮೇಳನಾಧ್ಯಕ್ಷ ಬಾ.ರಾ. ಸುಬ್ಬರಾಯ ಮಾತನಾಡಿ, `ಬಸವಣ್ಣ, ಅಲ್ಲಮಪ್ರಭು, ಸಿದ್ದರಾಮ, ಅಂಬಿಗರ ಚೌಡಯ್ಯ, ದೇವರ ದಾಸಿಮಯ್ಯ, ಅಕ್ಕಮಹಾದೇವಿ, ಚನ್ನಬಸವಣ್ಣ ಮುಂತಾದವರ ವಚನಗಳು ಭೂಮಿ ಇರುವ ವರೆಗೂ ಜನರಿಗೆ ಮಾರ್ಗದರ್ಶನ ನೀಡುತ್ತವೆ~ ಎಂದರು.ತಾಲ್ಲೂಕು ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕುಮಾರ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಜಿಲ್ಲಾಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಎನ್. ದೇವೇಗೌಡ, ಬಿ.ಎನ್. ರಾಮಸ್ವಾಮಿ, ಮುಕುಂದೂರು ಮಠದ ಚನ್ನಪ್ಪಸ್ವಾಮೀಜಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೋಲಾಕ್ಷಿ, ಪುರಸಭಾಧ್ಯಕ್ಷೆ ವಿನೋದಾ, ಬಿಇಒ ಎನ್.ಕೆ.ಶಿವರಾಜು, ಶೇಖರ್, ಬಾಗೀವಾಳು ಬಸವರಾಜು, ಕೆ.ಬಿ. ವೆಂಕಟಸ್ವಾಮಿ, ಗುಂಜೇವು ಅಣ್ಣಾಜಪ್ಪ, ಮಲ್ಲೇಶ್, ಪುಟ್ಟಸೋಮಪ್ಪ ಇತರರು ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.