ಆನೇಕಲ್: ಇತ್ತೀಚಿಗೆ ತಾಲ್ಲೂಕಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೌಡಿ ಪಟ್ಟಿಯಲ್ಲಿರು ವವರ ಮನೆಗಳ ಮೇಲೆ ದಾಳಿ ಮಾಡಿ ತಾಲ್ಲೂಕಿನಾದ್ಯಂತ 100ಕ್ಕೂ ಹೆಚ್ಚು ರೌಡಿಗಳನ್ನು ಬಂಧಿಸಿ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ರಮೇಶ್ ತಿಳಿಸಿದರು.

ಅವರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಆನೇಕಲ್, ಹೆಬ್ಬಗೋಡಿ, ಅತ್ತಿಬೆಲೆ, ಸರ್ಜಾಪುರ, ಜಿಗಣಿ, ಬನ್ನೇರುಘಟ್ಟ ಠಾಣೆಗಳ ವ್ಯಾಪ್ತಿಯಲ್ಲಿ ರೌಡಿ ಪಟ್ಟಿಯಲ್ಲಿದ್ದವರ ಮನೆಗಳ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಕೆಲವರ ಮನೆಗಳಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿವೆ.

ರೌಡಿ ಪಟ್ಟಿ ಯಲ್ಲಿರುವವರಿಗೆ ಸೂಚನೆ ನೀಡಿ ತಮ್ಮ ಚಟುವಟಿಕೆಗಳನ್ನು ಬದ ಲಾಯಿಸಿಕೊಂಡು ಸಮಾಜದ ಮುಖ್ಯ ವಾಹಿನಿಯಲ್ಲಿ ಸೇರುವಂತೆ ತಿಳಿಸಲಾಗಿದೆ. ಸೂಚನೆಯನ್ನು ಮೀರಿ ಅಕ್ರಮ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಮುಂದುವರೆದಲ್ಲಿ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಗಡೀಪಾರಿಗೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.

ರೌಡಿ ಪಟ್ಟಿಯಲ್ಲಿರುವವರ ನಡವಳಿಕೆಯಲ್ಲಿ ಬದಲಾವಣೆ ಕಂಡು ಬಂದಲ್ಲಿ ಪರಿಶೀಲಿಸಿ ರೌಡಿ ಪಟ್ಟಿಯಿಂದ ತೆಗೆಯುವ ಬಗ್ಗೆ ಚಿಂತನೆ ಮಾಡಲಾಗಿದೆ ಎಂದು ತಿಳಿಸಿದರು.ಪೊಲೀಸ್ ಠಾಣೆಗಳನ್ನು ಜನಸ್ನೇಹಿ ಠಾಣೆಗಳನ್ನಾಗಿ ಮಾಡುವ ದಿಸೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಠಾಣೆಗಳಿಗೆ ಬಂದು ದೂರು ನೀಡಲು ಭಯ ಪಡುತ್ತಿದ್ದಾರೆ. ದೂರವಾಣಿಗಳ ಮೂಲಕ ದೂರು ನೀಡುತ್ತಿದ್ದಾರೆ. ಯಾವುದೇ ಭಯವಿಲ್ಲದೇ ಠಾಣೆಗಳಿಗೆ ಬಂದು ದೂರು ನೀಡಬೇಕು ಎಂದು ತಿಳಿಸಿದರು.

ಹೆಚ್ಚುವರಿ ಎಸ್ಪಿ ಅಬ್ದುಲ್ ಅಹದ್, ಡಿವೈಎಸ್ಪಿ ಬಲರಾಮೇಗೌಡ, ಅತ್ತಿಬೆಲೆ ವೃತ್ತ ನಿರೀಕ್ಷಕ ಬಿ.ಕೆ.ಕಿಶೋರ್ ಕುಮಾರ್್, ಆನೇಕಲ್ ಸಿಪಿಐ ರಾಜೇಂದ್ರ, ಜಿಗಣಿ ಸಿಪಿಐ ಮಲ್ಲೇಶ್, ಪಿಎಸ್ಐಗಳಾದ ರಾಘವೇಂದ್ರ ಬೈಂದೂರು, ಶಶಿಧರ್, ಚೇತನ್ ಕುಮಾರ್, ಪ್ರಕಾಶ್, ಹನು ಮಂತರಾಜು ಇದ್ದರು.ಪೊಲೀಸರು ಪಟ್ಟಣದಲ್ಲಿ ಪೆರೇಡ್ ನಡೆಸಿ ಸಾರ್ವಜನಿಕರಲ್ಲಿ ವಿಶ್ವಾಸ ತುಂಬಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.