ಹುಬ್ಬಳ್ಳಿ: ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ವರ್ಷಾಂತ್ಯದ ವೇಳೆಗೆ 8 ಕೋಟಿ ರೂಪಾಯಿ ವೆಚ್ಚದಲ್ಲಿ 200 ಹಾಪ್ಕಾಮ್ಸ (ತೋಟಗಾರಿಕೆ ಬೆಳಗಾರರ ಸಹಕಾರಿ ಸಂಸ್ಕರಣಾ ಮತ್ತು ಮಾರಾಟ ಸಂಘ ನಿಯಮಿತ) ಮಳಿಗೆಗಳು ತಲೆ ಎತ್ತಲಿವೆ.

ಗ್ರಾಹಕರಿಗೆ ತಾಜಾ ಹಣ್ಣು- ತರಕಾರಿ ಪೂರೈಸಲು ಕೇಂದ್ರದ ಕೃಷಿ ಮಂತ್ರಾಲಯ ರೂಪಿಸಿರುವ ಈ ಯೋಜನೆಯಡಿ ಮೊದಲ ಹಂತದಲ್ಲಿ 80 ಲಕ್ಷ ರೂಪಾಯಿ ಬಿಡುಗಡೆ ಯಾಗಿದ್ದು, 30 ಮಳಿಗೆಗಳ ಆರಂಭಕ್ಕೆ ಸಿದ್ಧತೆ ನಡೆದಿದೆ. ಈಗಾಗಲೇ ಧಾರವಾಡದಲ್ಲಿ 12 ಮಳಿಗೆಗಳಿಗೆ ಸ್ಥಳ ಗುರುತಿಸಲಾಗಿದೆ. ಹುಬ್ಬಳ್ಳಿಯಲ್ಲಿಯೂ ಈ ಪ್ರಕ್ರಿಯೆ ಆರಂಭ ಗೊಂಡಿದೆ. ಜೂನ್ 1ರಿಂದ ಈ ಹೊಸ ಮಳಿಗೆಗಳು ಆರಂಭವಾಗಲಿವೆ.
ಹಾಪ್ಕಾಮ್ಸನ ಈ ಮಹತ್ವದ ಯೋಜನೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕೂಡ ಕೈ ಜೋಡಿಸಿದೆ.
ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ನಗರದಲ್ಲಿ 200 ಮಳಿಗೆಗಳ ನಿರ್ಮಾಣಕ್ಕೆ ಸ್ಥಳ ಗುರುತಿಸುವರು. 500 ರೂಪಾಯಿ ಬಾಡಿಗೆಗೆ ಪಾಲಿಕೆ ಹಾಪ್ಕಾಮ್ಸಗೆ ಸ್ಥಳಾವಕಾಶ ಕಲ್ಪಿಸಲಿದೆ. ಶೈತ್ಯಾಗಾರ ಹಾಗೂ ನೈರ್ಮಲ್ಯಕ್ಕೆ ಹೆಚ್ಚು ಒತ್ತು ಇರುವ ಅತ್ಯಾಧುನಿಕ ಮಳಿಗೆಗಳ ನಿರ್ಮಾಣಕ್ಕೆ ತಲಾ ನಾಲ್ಕು ಲಕ್ಷ ರೂಪಾಯಿ ವ್ಯಯಿಸಲಾಗುತ್ತಿದೆ.

ಕೃಷಿ ವಿಕಾಸ ಯೋಜನೆಯಡಿ 20 ಹಾಗೂ ಜಿಲ್ಲಾಧಿಕಾರಿಯ ವಿಶೇಷ ಅನುದಾನದಡಿ ನೀಡಿರುವ 36 ಲಕ್ಷದಲ್ಲಿ 10 ಮಳಿಗೆ ಆರಂಭಿಸಲಾಗುತ್ತಿದೆ. ಉಳಿದ ನಾಲ್ಕು ಲಕ್ಷ ರೂಪಾಯಿ ತೋಟಗಾರಿಕೆ ಇಲಾಖೆ ಭರಿಸಲಿದೆ. ಈ ಬಗ್ಗೆ ಹಾಪ್ಕಾಮ್ಸ ಹಾಗೂ ಪಾಲಿಕೆ ನಡುವೆ ಶೀಘ್ರ ಅಂತಿಮ ಒಡಂಬಡಿಕೆ ಏರ್ಪ ಡಲಿದೆ ಎನ್ನುತ್ತಾರೆ ಧಾರವಾಡ ಜಿಲ್ಲಾ ಹಾಪ್ಕಾಮ್ಸ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ ಬಣಕಾರ.

ಪ್ರಸ್ತುತ ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ತಲಾ ಒಂದು ಹಾಪ್ಕಾಮ್ಸ ಮಳಿಗೆ ಇದ್ದು, ಯೋಜನೆ ಸಾಕಾರಗೊಂಡರೆ, ಅವಳಿನಗರದಲ್ಲಿ ಹಣ್ಣು ತರಕಾರಿ ವಹಿವಾಟು ಬಹುಪಾಲು ಹಾಪ್ಕಾಮ್ಸ ಸಂಸ್ಥೆಯ ಪಾಲಾಗಲಿದೆ. ಮಧ್ಯವರ್ತಿಗಳಿಂದ ಗ್ರಾಹಕರು ಹಾಗೂ ಬೆಳೆಗಾರರು ಶೋಷಣೆ ಕೂಡ ತಪ್ಪಲಿದೆ ಎನ್ನುತ್ತಾರೆ.

ಎಲ್ಲಾ ಮಳಿಗೆಗಳಲ್ಲಿ ಏಕರೂಪದ ದರ ಕಾಯ್ದುಕೊಳ್ಳಲು ವಿಶೇಷ ತಂತ್ರಾಂಶ (ಸಾಫ್ಟ್ವೇರ್) ಬಳಕೆ ಮಾಡಲಾಗುವುದು. ಇದರಿಂದ ಗ್ರಾಹಕ ರಿಗೆ ನ್ಯಾಯಯುತ ಬೆಲೆಗೆ ತಾಜಾ ಉತ್ಪನ್ನಗಳನ್ನು ನೀಡಲು ಸಾಧ್ಯ ವಾಗಲಿದೆ. ತೂಕದಲ್ಲಿ ಮೋಸದ ಪ್ರಶ್ನೆಯೂ ಇಲ್ಲ. ಹೆಚ್ಚಿನ ಲಾಭದ ಅಪೇಕ್ಷೆ ಇಲ್ಲದಿರುವುದರಿಂದ ಸಹ ಜವಾಗಿಯೇ ಗ್ರಾಹಕ ಸ್ನೇಹಿ ವಾತಾವರಣವಿರುತ್ತದೆ ಎಂದು ಬಣಕಾರ ಹೇಳುತ್ತಾರೆ.

ಹಾಪ್ಕಾಮ್ಸ ಮಳಿಗೆಗಳಿಗೆ ಜಾಗ ನೀಡಲು ಈಗಾಗಲೇ ಪಾಲಿಕೆ ಸಾಮಾನ್ಯ ಸಭೆ ಒಪ್ಪಿಗೆ ನೀಡಿದೆ. ಯೋಜನೆಯ ಅಂತಿಮ ಒಡಂಬ ಡಿಕೆಯ ಕುರಿತಾದ ಕಡತ ತಮ್ಮ ಪರಿ ಶೀಲನೆಗೆ ಬಂದಿದ್ದು, ವಾರ ದೊಳಗಾಗಿ ಎಲ್ಲಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎನ್ನುತ್ತಾರೆ ಪಾಲಿಕೆ ಆಯುಕ್ತ ಡಾ.ಕೆ.ವಿ. ತ್ರಿಲೋಕಚಂದ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.