ಭಾನುವಾರ, ಜೂನ್ 13, 2021
22 °C

ವಶದಲ್ಲಿದ್ದ ವಿದೇಶಿ ಹಡಗು ವಾಪಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ದಾಖಲೆಯಲ್ಲಿನ ಗೊಂದಲ ದಿಂದಾಗಿ ಒಂದು ವಾರದಿಂದ ಕಸ್ಟಮ್ಸ್‌ ಅಧಿಕಾರಿಗಳ ವಶದಲ್ಲಿದ್ದ ವಿದೇಶಿ ಹಡಗು ಭಾನುವಾರ ರಾತ್ರಿ ವಾಪಸ್‌ ಮರಳಿದ್ದು, ಹಲವು ಸಂಶಯಗಳಿಗೆ ಕಾರಣವಾಗಿದೆ.‘ಶಾರ್ಜಾ’ದ ‘ಕ್ಲೆಟನ್‌–2’ ಎನ್ನುವ ಈ ಹಡಗು ಬಿಟುಮಿನ್‌ (ಟಾರ್‌) ಹೇರಿಕೊಂಡು ಫೆ.28 ರಂದು ಕಾರವಾರ ಬಂದರಿಗೆ ಬಂದಿತ್ತು. ಆದರೆ, ಹಡಗಿನ ದಾಖಲೆಯಲ್ಲಿನ ಗೊಂದಲ ದಿಂದಾಗಿ ಇಲ್ಲಿನ ಕಸ್ಟಮ್ಸ್‌ ಅಧಿಕಾರಿಗಳು ಹಡಗನ್ನು ವಶಕ್ಕೆ ಪಡೆದಿದ್ದರು. ಹೀಗಾಗಿ ಹಡಗು ಇಲ್ಲಿನ ಅರಬ್ಬಿ ಸಮುದ್ರ­ದಲ್ಲಿರುವ ಕೂರ್ಮಗಡ ಗುಡ್ಡದ ಬಳಿ ಲಂಗರು ಹಾಕಿತ್ತು.ಸತತ ಒಂದು ವಾರ ದಾಖಲೆ ಪರಿಶೀಲಿಸಿದ ಕಸ್ಟಮ್ಸ್‌ ಅಧಿಕಾರಿಗಳು ಶನಿವಾರ ಬಂದರಿಗೆ ಬರಲು ಹಡಗಿಗೆ ಅವಕಾಶ ನೀಡಿದ್ದರು. ಅದೇ ದಿನ ಈ ಹಡಗು ಕಾರವಾರ ಬಂದರಿನಲ್ಲಿ 2,700 ಮೆಟ್ರಿಕ್‌ ಟನ್‌ ಬಿಟುಮಿನ್‌ ಖಾಲಿ ಮಾಡಿ ವಾಪಸ್‌ ಮರಳಿದೆ ಎಂದು ಬಂದರು ಇಲಾಖೆ ಅಧಿಕಾರಿ ಗಳು ತಿಳಿಸಿದ್ದಾರೆ.ಆದರೆ, ಈ ಹಡಗು ಕಾರವಾರಕ್ಕೆ ಬಂದ ದಿನ ‘ಯಾವುದೇ ದಾಖಲೆಗಳಿಲ್ಲದೆ ವಿದೇಶಿ ಹಡಗೊಂದು ಅಕ್ರಮವಾಗಿ ಭಾರತದ ಗಡಿಯನ್ನು ಪ್ರವೇಶಿಸಿದೆ’ ಎನ್ನುವ ಸುದ್ದಿ ಕಸ್ಟಮ್ಸ್ ಅಧಿಕಾರಿಗಳಿಂದಲೇ ಹೊರಬಿದ್ದಿತ್ತು. ಈಗ ಹಡಗು ವಾಪಸ್‌ ಮರಳಿದರೂ, ಕಸ್ಟಮ್ಸ್‌ ಅಧಿಕಾರಿಗಳು ಹಡಗಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.