ವಾಣಿಜ್ಯ ಸಂಬಂಧ ವೃದ್ಧಿ

7

ವಾಣಿಜ್ಯ ಸಂಬಂಧ ವೃದ್ಧಿ

Published:
Updated:
ವಾಣಿಜ್ಯ ಸಂಬಂಧ ವೃದ್ಧಿ

ಮುಂಬೈ (ಪಿಟಿಐ): `ಭಾರತ-ಅಮೆರಿಕ ವಾಣಿಜ್ಯ ಸಂಬಂಧ ಮತ್ತಷ್ಟು ಗಟ್ಟಿಯಾಗಬೇಕು' ಎಂದು ಅಮೆರಿಕದ ಉಪಾಧ್ಯಕ್ಷ ಜೋ ಬಿಡೆನ್ ಬುಧವಾರ ಹೇಳಿದ್ದಾರೆ.`ಎರಡೂ ದೇಶಗಳು ಸರಿಯಾದ ಆಯ್ಕೆ ಮಾಡಿದಲ್ಲಿ ವಾಣಿಜ್ಯ ಸಂಬಂಧ ಐದು ಪಟ್ಟು ಬೆಳೆಯುತ್ತದೆ' ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.ಬಾಂಬೆ ಷೇರು ವಿನಿಮಯ ಕೇಂದ್ರದಲ್ಲಿ ಅಮೆರಿಕ-ಭಾರತ ಸಹಭಾಗಿತ್ವದ ಬಗ್ಗೆ ಉಪನ್ಯಾಸ ನೀಡಿದ ಅವರು, `ಭಾರತವು ಕಳೆದ ದಶಕದಲ್ಲಿ ತ್ವರಿತವಾಗಿ ಪ್ರಗತಿ ಹೊಂದಿದೆ. ಉದಾರೀಕರಣದ ಕುರಿತು 1991ರಲ್ಲಿ ತೆಗೆದುಕೊಂಡ ದಿಟ್ಟ ನಿಲುವೇ ಈ ಪ್ರಗತಿಗೆ ಕಾರಣ 'ಎಂದರು.ಭಯೋತ್ಪಾದನೆ ಬಗ್ಗೆ ಮಾತನಾಡುತ್ತಾ, `ಎರಡೂ ದೇಶಗಳು ಈ ಪಿಡುಗಿಗೆ ಬಲಿಯಾಗುತ್ತಿವೆ. ಭಯೋತ್ಪಾದನೆ ನಿಗ್ರಹಕ್ಕೆ ಪರಸ್ಪರ ಸಹಕಾರವನ್ನು ಬಲಪಡಿಸಬೇಕಿದೆ' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry