ವಾಲ್‌ಸ್ಟ್ರೀಟ್ ಮುತ್ತಿಗೆ: ಬಾನ್ ಕಿ ಮೂನ್ ಆತಂಕ

7

ವಾಲ್‌ಸ್ಟ್ರೀಟ್ ಮುತ್ತಿಗೆ: ಬಾನ್ ಕಿ ಮೂನ್ ಆತಂಕ

Published:
Updated:

ಬರ್ನ್, ಸ್ವಿಟ್ಜರ್‌ಲೆಂಡ್ (ಎಪಿ): `ವಾಲ್‌ಸ್ಟ್ರೀಟ್ ಮುತ್ತಿಗೆ~ ಆಂದೋಲನ ವ್ಯಾಪಕಗೊಳ್ಳುತ್ತಿರುವುದು ಗಂಭೀರ ವಿಷಯ ಎಂದಿರುವ ವಿಶ್ವ ಸಂಸ್ಥೆಯ ಮಹಾ ಕಾರ್ಯದರ್ಶಿ ಬಾನ್ ಕಿ ಮೂನ್ ಅವರು `ಪ್ರತಿಭಟನಾಕಾರರ ಭಾವನೆಗಳನ್ನು ಅರ್ಥಮಾಡಿಕೊಳ್ಳಬಲ್ಲೆ~ ಎಂದು ಅವರು ಹೇಳಿದ್ದಾರೆ.ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಶೀಲ ದೇಶಗಳ ಹಣಕಾಸು ಸಚಿವಾಲಯದ ಮುಖ್ಯಸ್ಥರು ಜನರ ಧ್ವನಿಯನ್ನು ಆಲಿಸಿ, ಸ್ಪಂದಿಸಬೇಕಾದ ಅಗತ್ಯವಿದೆ ಎಂದೂ ಅವರು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದ್ದಾರೆ.ಕಾರ್ಪೋರೇಟ್ ಸಂಸ್ಥೆಗಳ ದುರಾಸೆ ಪ್ರವೃತ್ತಿಗಳ ವಿರುದ್ಧ ವ್ಯಾಪಕಗೊಳ್ಳುತ್ತಿರುವ `ವಾಲ್‌ಸ್ಟ್ರೀಟ್ ಮುತ್ತಿಗೆ~ ಆಂದೋಲನವನ್ನು ಪ್ರಸ್ತಾಪಿಸಿ ಅವರು ಮಾತನಾಡಿದ್ದಾರೆ.ಇತ್ತೀಚಿಗೆ ಜಗತ್ತು ಕಂಡ ಬಲುದೊಡ್ಡ ಆರ್ಥಿಕ ಸಂಬಂಧಿ ಆಂದೋಲನ ಇದಾಗಿದೆ ಎಂಬ ಮಾತನ್ನೂ ಬಾನ್ ಕಿ ಮೂನ್ ಅವರು ಒಪ್ಪಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry