ಗುರುವಾರ , ಮೇ 19, 2022
21 °C

ವಾಹನ ಚಾಲಕರ ಸೇವೆ ಗುರುತಿಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಳಕಲ್: ಅಪಘಾತ ರಹಿತವಾಗಿ ವಾಹನ ಚಾಲನೆ ಮಾಡುವ ಚಾಲಕರು ಸಮಾಜದ ಅಸ್ತಿ ಇದ್ದಂತೆ. ಅವರ ಸಾರ್ಥಕ ಸೇವೆಯನ್ನು ಸಾರಿಗೆ ಸಂಸ್ಥೆ ಗುರುತಿಸಿ,ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ. ಇತರ ಚಾಲಕರಿಗೂ ಇಂತಹ ಸಾಧನೆ ಪ್ರೇರಣೆ ನೀಡಲಿ ಎಂದು ಶಾಸಕ ದೊಡ್ಡನಗೌಡ ಪಾಟೀಲ ಆಶಿಸಿದರು.ಅವರು ಈಚೆಗೆ ನಗರದ ಬಸ್ ಡಿಪೋದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅಪಘಾತ ರಹಿತವಾಗಿ ವಾಹನ ಚಾಲನೆ ಮಾಡಿದ ಚಾಲಕರಿಗೆ ಬೆಳ್ಳಿ ಪದಕ, ನಗದು ಬಹುಮಾನ ವಿತರಿಸಿ ಹಾಗೂ ಎಸ್.ಎಸ್.ಎಲ್.ಸಿ, ಪಿ.ಯು.ಸಿ ಹಾಗೂ ಪದವಿಯಲ್ಲಿ ಶೇ.80 ಕ್ಕಿಂತ ಹೆಚ್ಚು ಅಂಕಗಳಿಸಿದ ಡಿಪೋದ ಸಿಬ್ಬಂದಿ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದರು.ಬೆಳ್ಳಿ ಪದಕ ವಿಜೇತರು: 2003 ರಲ್ಲಿ ಎಂ.ಕೆ.ಹೆಬ್ಬಾಳ, 2004 ರಲ್ಲಿ ಅಮರಪ್ಪ, ಎಂ.ಎ.ಜಾರಡ್ಡಿ, 2005 ರಲ್ಲಿ ವೈ.ಡಿ.ಕಟ್ಟಿಮನಿ, ಎಸ್.ಜಿ.ಹಿರೇಮಠ, ಎಲ್.ವೈ.ನದಾಫ್, ಎಂ.ಎ.ಭಾವಿಕಟ್ಟಿ, 2006 ರಲ್ಲಿ ಎಂ.ಓ.ಮುರಾಳ, ಎಸ್.ಎಸ್.ತೋಟದ, 2007 ರಲ್ಲಿ ಎಚ್.ಎಂ.ಕಮಲದಿನ್ನಿ, ಬಿ.ಎಂ.ಚಿಲ್ಲಾಳ, ಬಿ.ವಿ.ಮಕಾನದಾರ ಇವರಿಗೆ ಶಾಸಕ ದೊಡ್ಡನಗೌಡ ಪಾಟೀಲ ಬೆಳ್ಳಿ ಪದಕ ವಿತರಿಸಿದರು.ಇದೇ ಸಂದರ್ಭದಲ್ಲಿ ಇಳಕಲ್ ಘಟಕದ ಸಿಬ್ಬಂದಿಯವರ ಮಕ್ಕಳಾದ ಕೀರ್ತಿ ವಿ.ಅಂಗಡಿ, ಮಂಜುನಾಥ ಡಿ.ತಾಂಬೇಕರ, ಸುಶ್ಮಿತಾ ಎನ್.ಬಾರಿಗಿಡದ, ಮಲ್ಲಿಕಾರ್ಜುನ ಬಿ. ಜಾವೂರ, ಪ್ರವೀಣ ಎಂ.ಪತ್ತಾರ, ಜ್ಯೋತಿ ಎಂ.ಮುತಾಳ, ರಶ್ಮಿ ವಿ.ಪಾಟೀಲ, ಕೆ.ಎಚ್. ಬಾರಿಗಿಡದ ಅವರುಗಳಿಗೆ ಶೇ. 80 ಕ್ಕಿಂತ ಹೆಚ್ಚು ಅಂಕಗಳಿಸಿದ್ದಕ್ಕಾಗಿ ನಗದು ಬಹುಮಾನ ನೀಡಿ ಗೌರವಿಸಲಾಯಿತು. ವಿಭಾಗೀಯ ಸಾರಿಗೆ ಅಧಿಕಾರಿ ಮುಜುಮದಾರ ಅಧ್ಯಕ್ಷತೆ ವಹಿಸಿದ್ದರು. ಘಟಕ ವ್ಯವಸ್ಥಾಪಕ ಡಿ.ಬಿ. ಚಿತ್ತವಾಡಗಿ, ಬಿಜೆಪಿ ಇಳಕಲ್ ನಗರ ಘಟಕದ ಅಧ್ಯಕ್ಷ ರಾಜು ಕುಲಕರ್ಣಿ, ಮುಖಂಡರಾದ ಶಿವಕುಮಾರ ಹಿರೇಮಠ, ಚಂದ್ರು ಜಾಪಗಾಲ ಉಪಸ್ಥಿತರಿದ್ದರು.ಎಸ್.ಪಿ. ಪಾಟೀಲ ಪ್ರಾರ್ಥಿಸಿದರು. ಡಿ.ಬಿ. ಚಿತ್ತವಾಡಗಿ ಸ್ವಾಗತಿಸಿದರು. ಎಸ್.ಎನ್. ನಿಂಗನಗೌಡ್ರ ನಿರೂಪಿಸಿ, ಸುಭಾಸ ಧೋತ್ರೆ ವಂದಿಸಿದರು.8 ವರ್ಷದಿಂದ ಪದಕ ವಿತರಿಸಿಲ್ಲ: ಅಪಘಾತ ರಹಿತವಾಗಿ 5 ವರ್ಷ ವಾಹನ ಚಾಲನೆ ಮಾಡಿದ ಚಾಲಕರಿಗೆ ಬೆಳ್ಳಿ ಪದಕ, ನಗದು ಬಹುಮಾನ ನೀಡಿ, ಪ್ರೋತ್ಸಾಯಿಸಬೇಕಾದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಳೆದ 8 ವರ್ಷಗಳಿಂದ ಆಯ್ಕೆಯಾದ ಚಾಲಕರಿಗೆ ಪದಕ ವಿತರಿಸಿರಲಿಲ್ಲ. ಈಚೆಗೆ ನಡೆದ ಸಮಾರಂಭದಲ್ಲಿ ಹಿಂದಿನ ವರ್ಷಗಳಲ್ಲಿ ಆಯ್ಕೆಯಾದ ಒಟ್ಟು 12 ಜನರಿಗೆ ಪದಕ, ನಗದು ಬಹುಮಾನವನ್ನು ವಿತರಿಸಲಾಯಿತು. 2005 ರಲ್ಲಿ ಬೆಳ್ಳಿ ಪದಕ ಪಡೆದಿದ್ದ ಎಸ್.ಜಿ.ಹಿರೇಮಠ ಅವರು ಹೃದಯಾಘಾತದಿಂದ ಮೃತರಾದ ಪ್ರಯುಕ್ತ ಅವರ ಪತ್ನಿ ದುಃಖಭರಿತರಾಗಿ ಪದಕ ಸ್ವೀಕರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.