ಬುಧವಾರ, ಏಪ್ರಿಲ್ 21, 2021
24 °C

ವಿಕ್ರಮ್ ಪಂಡಿತ್ ಗೆ 66 ಲಕ್ಷ ಡಾಲರ್ ಪ್ರಶಸ್ತಿ: ಸಿಟಿ ಗ್ರೂಪ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಕ್ರಮ್ ಪಂಡಿತ್ ಗೆ 66 ಲಕ್ಷ ಡಾಲರ್ ಪ್ರಶಸ್ತಿ: ಸಿಟಿ ಗ್ರೂಪ್

ನ್ಯೂಯಾರ್ಕ್ (ಪಿಟಿಐ): ಹಠಾತ್ತನೆ, ಕಳೆದ ತಿಂಗಳು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದ ತನ್ನ ಮಾಜಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಭಾರತೀಯ ಸಂಜಾತ ವಿಕ್ರಮ್ ಪಂಡಿತ್ ಅವರಿಗೆ 2012ರ ಪ್ರೋತ್ಸಾಹ ಪ್ರಶಸ್ತಿಯಾಗಿ 66 ಲಕ್ಷ ಅಮೆರಿಕನ್ ಡಾಲರ್ ಗಳನ್ನು ನೀಡಲು ಸಿಟಿ ಗ್ರೂಪ್ ನಿರ್ಧರಿಸಿದೆ.ತನ್ನ ಮಾಜಿ ಅಧ್ಯಕ್ಷ ಮತ್ತು ಮುಖ್ಯ ಕಾರ್ಯಾಚರಣಾ ಅಧಿಕಾರಿ ಜಾನ್ ಹ್ಯಾವೆನ್ಸ್ ಅವರಿಗೆ 67.9 ಲಕ್ಷ ಅಮೆರಿಕನ್ ಡಾಲರ್ ಗಳನ್ನು ನೀಡಲಾಗುವುದು~ ಎಂದು ಅಮೆರಿಕದ ಭದ್ರತಾ ವಿನಿಮಯ ಕಮಿಷನ್ ಗೆ ಸಲ್ಲಿಸಿದ ವಿವರಗಳಲ್ಲಿ ಹಣಕಾಸು ದಿಗ್ಗಜ ಸಂಸ್ಥೆಯು ತಿಳಿಸಿದೆ.~ಪಂಡಿತ್ ಮತ್ತು ಹ್ಯಾವೆನ್ಸ್ ಅವರು ತಮ್ಮ  ಐದು ವರ್ಷಗಳ ಸೇವಾವಧಿಯಲ್ಲಿ ಸಿಟಿ ಗ್ರೂಪ್ ಸಂಸ್ಥೆಗೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ~ ಎಂದು ಸಿಟಿ~ಯ ನಿರ್ದೇಶಕರ ಮಂಡಳಿಯ ಅಧ್ಯಕ್ಷ ಮೈಕೆಲ್ ಓ~ನೀಲ್ ಹೇಳಿದರು.~ಹಣಕಾಸು ಬಿಕ್ಕಟ್ಟಿನಲ್ಲಿ ಸಿಲುಕಿದ್ದ ಸಿಟಿಯ ಕಾರ್ಯತಂತ್ರಕ್ಕೆ ಹೊಸ ರೂಪ ನೀಡಿದ ವಿಕ್ರಮ್ ಅದನ್ನು ನಷ್ಟದಿಂದ ಲಾಭದತ್ತ ಮುನ್ನಡೆಸಿದ್ದಾರೆ. ಜಾನ್ ಕೂಡಾ ಸಾಂಸ್ಥಿಕ ವ್ಯವಹಾರದತ್ತ ಗಮನ ಹರಿಸಿ ನಮ್ಮ ಸಾಮರ್ಥ್ಯವನ್ನು ವೃದ್ಧಿಸಿ ನಮ್ಮ ಗ್ರಾಹಕರಿಗೆ ಸಂದರ್ಭಕ್ಕೆ ತಕ್ಕಂತೆ ನೆರವಾಗುವ ಶಕ್ತಿ ತುಂಬಿದರು ಎಂದು ನೀಲ್ ನುಡಿದರು.ಈ ವರ್ಷದ ಪ್ರಗತಿಯನ್ನು ಆಧರಿಸಿ 2012ರ ಸಾಲಿನಲ್ಲಿ ಅವರಿಗೆ ಪ್ರೋತ್ಸಾಹ ಪ್ರಶಸ್ತಿ ನೀಡಲು ಮಂಡಳಿಯು ನಿರ್ಧರಿಸಿತು ಎಂದು ಅವರು ಹೇಳಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.