ಸೋಮವಾರ, ಜನವರಿ 20, 2020
25 °C

ವಿಜಯ ಸಾಯಿ ರೆಡ್ಡಿ ಬಂಧನ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್ (ಪಿಟಿಐ): ವೈ.ಎಸ್. ಜಗನ್‌ಮೋಹನ್ ರೆಡ್ಡಿ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬಂಧಿಸಿರುವ `ಜಗತಿ~ ಪ್ರಕಟಣೆಯ ಉಪಾಧ್ಯಕ್ಷ ವಿ.ವಿಜಯ ಸಾಯಿ ರೆಡ್ಡಿ ಅವರ ಸಿಬಿಐ ಕಸ್ಟಡಿ ಅವಧಿಯನ್ನು ನ್ಯಾಯಾಲಯವು ಮೂರು ದಿನಗಳ ಕಾಲ ವಿಸ್ತರಿಸಿದೆ.  ಸಿಬಿಐ ವಿಶೇಷ ನ್ಯಾಯಾಲಯವು ಸಾಯಿ ರೆಡ್ಡಿ ಅವರ ಬಂಧನ ಅವಧಿಯನ್ನು ಈ ತಿಂಗಳ 16ರವರೆಗೆ ವಿಸ್ತರಿಸಿದ್ದು, 17ರಂದು ಮತ್ತೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದೆ.ಪ್ರಕರಣಕ್ಕೆ ಸಂಬಂಧಿಸಿ ರೆಡ್ಡಿ ಅವರು ಮಹತ್ವದ ಮಾಹಿತಿಗಳನ್ನು ನೀಡಿದ್ದು, ಇನ್ನೂ ಹೆಚ್ಚಿನ ಮಾಹಿತಿ ಪಡೆಯಲು ವಿಚಾರಣೆ ನಡೆಸಬೇಕಾಗಿದೆ. ಆದ್ದರಿಂದ ಬಂಧನದ ಅವಧಿಯನ್ನು ವಿಸ್ತರಿಸಬೇಕು ಎಂದು ಸಿಬಿಐ ವಕೀಲರು ಕೋರಿದ್ದರು.

ಪ್ರತಿಕ್ರಿಯಿಸಿ (+)