ಶನಿವಾರ, ಜೂನ್ 19, 2021
26 °C

ವಿಜೃಂಭಣೆ ರಾಜಾ ಬಾಗ್ ಸವಾರ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವನಬಾಗೇವಾಡಿ: ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತವಾದ ಸಮೀಪದ ನಾಗೂರ ಗ್ರಾಮದ ಯಮನೂರೇಶ್ವರ ರಾಜಾ ಬಾಗ್‌ಸವಾರ ಜಾತ್ರೆಯು ವಿಜೃಂಭಣೆಯಿಂದ ಜರುಗಿತು.ಜಾತ್ರೆಯ ಮುನ್ನಾ ದಿನ ರಾತ್ರಿ ಗಂಧಾಭಿಷೇಕ (ಸಂದಲ್) ಸಕಲ ವಾದ್ಯ ವೈಭವಗಳೊಂದಿಗೆ ನೆರವೇರಿತು. ಜಆತ್ರೆ ದಿನ ಭಕ್ತರು ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಕೆಲವರು ಪಾದಯಾತ್ರೆ ಮೂಲಕ ಆಗಮಿಸಿ ಹರಕೆ ತೀರಿಸಿದರು.ಜಾತ್ರೆಯ ಅಂಗವಾಗಿ ಆಟೋ ಚಾಲಕರು ಮತ್ತು ಮಾಲೀಕರ ಸಂಘವು ಟಗರಿನ ಕಾಳಗ ಹಮ್ಮಿಕೊಂಡಿತ್ತು. ಅದನ್ನು ವೀಕ್ಷಿಸಲು ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು.ರಾತ್ರಿ ಗ್ರಾಮದ ಬಸವೇಶ್ವರ ನಾಟ್ಯ ಸಂಘದವರಿಂದ `ಮಾತು ತಪ್ಪಿದ ಮೈದುನರು~ ಎಂಬ ನಾಟಕ ಪ್ರದರ್ಶನ ಗೊಂಡಿತು. ಭಾರ ಎತ್ತುವ ಸ್ಪರ್ಧೆ, ಜಂಗಿ ಕುಸ್ತಿಗಳು ನಡೆದವು. ಟ್ರ್ಯಾಕ್ಟರ ಮಾಲೀಕರ ಮತ್ತು ಚಾಲಕರ ಸಂಘದವರ ಅಶ್ರಯದಲ್ಲಿ ಟ್ರ್ಯಾಕ್ಟರ್ ರಿವರ್ಸ್‌ ಎಂಬ ವಿನೂತನ ಪಂದ್ಯ ಗಮನ ಸೆಳೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.