ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದ (2015–16) ಒಂಬತ್ತು ತಿಂಗಳಿನಲ್ಲಿ ವಿತ್ತೀಯ ಕೊರತೆ (ವರಮಾನ ಮತ್ತು ವೆಚ್ಚದ ನಡುವಿನ ಅಂತರ) ಪ್ರಮಾಣವು ಬಜೆಟ್ ಅಂದಾಜಿನ ಶೇ 88ರಷ್ಟಾಗಿದೆ.

ಮೌಲ್ಯದ ಲೆಕ್ಕದಲ್ಲಿ ಹೇಳುವು ದಾದರೆ, ಏಪ್ರಿಲ್–ಡಿಸೆಂಬರ್ ಅವಧಿ ಯಲ್ಲಿ ವಿತ್ತೀಯ ಕೊರತೆ ₹4.88 ಲಕ್ಷ ಕೋಟಿಗಳಷ್ಟಿದೆ. 2015–16ಕ್ಕೆ ₹5.55 ಲಕ್ಷ ಕೋಟಿಗಳಷ್ಟು ವಿತ್ತೀಯ ಕೊರತೆ ಅಂದಾಜು ಮಾಡಲಾಗಿದೆ.

ವಿತ್ತೀಯ ಕೊರತೆ ಅಂತರವನ್ನು ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಶೇ 3.9ರ ಒಳಗೆ ಇರುವಂತೆ ನೋಡಿಕೊಳ್ಳುವುದಾಗಿ ಸರ್ಕಾರ ಹೇಳಿದೆ. 2014–15ರಲ್ಲಿ ವಿತ್ತೀಯ ಕೊರತೆ ಬಜೆಟ್ ಅಂದಾಜನ್ನೂ ಮೀರಿ ಶೇ 100.2ರಷ್ಟಾಗಿತ್ತು. ಹೆಚ್ಚು ತೆರಿಗೆ ಸಂಗ್ರಹವಾಗಿರುವುದೇ ವಿತ್ತೀಯ ಕೊರತೆ ಏರಿಕೆಗೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.