ಬುಧವಾರ, ಮೇ 12, 2021
18 °C

ವಿದ್ಯಾರ್ಥಿಗಳಿಂದ ಐತಿಹಾಸಿಕ ಬಾವಿ ಸ್ವಚ್ಛ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ಯಾರ್ಥಿಗಳಿಂದ ಐತಿಹಾಸಿಕ ಬಾವಿ ಸ್ವಚ್ಛ

ವಿಜಾಪುರ: ಕಸದ ಗುಡ್ಡೆ ಎತ್ತಿ ಹಾಕಲು ಬಾವಿಗೆ ಜಿಗಿದ ನಗರಪಾಲಿಕೆ ಸದಸ್ಯ, ಕೊಳೆತು ನಾರುತ್ತಿದ್ದ ಕಸವನ್ನು ಖುಷಿಯಿಂದ ಬರಿಗೈಯಿಂದಲೇ ಎತ್ತಿದ ವಿದ್ಯಾರ್ಥಿಗಳು, ಉಮೇದಿನಿಂದ ಕಸಗೂಡಿಸಿದ ವಿದ್ಯಾರ್ಥಿನಿಯರು, ಕೊಳೆಗೆ ಮುಕ್ತಿ ನೀಡಲು ಹುಮ್ಮಸ್ಸಿನಿಂದ ಪ್ಯಾಂಟು ಏರಿಸಿದ ಶಿಕ್ಷಕರು...ವಿದ್ಯಾರ್ಥಿಗಳಲ್ಲಿ ಸ್ಮಾರಕಗಳ ಬಗೆಗೆ ಕಳಕಳಿ ಹೆಚ್ಚಿಸಿ, ಅವುಗಳ ರಕ್ಷಣೆಗೆ ಪ್ರೇರೇಪಿಸಲು ಭಾನುವಾರ ನಗರದಲ್ಲಿನ ಆದಿಲ್‌ಶಾಹಿ ಕಾಲದ ಇತಿಹಾಸ ಪ್ರಸಿದ್ದ ತಾಜ್ ಬಾವಡಿ ಬಾವಿಯಲ್ಲಿ ಹಮ್ಮಿಕೊ ಳ್ಳಲಾಗಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಕಂಡುಬಂದ ಕೆಲವು ಕುತೂಹಲಕಾರಿ ಸನ್ನಿವೇಶಗಳಿವು.ಸುಮಾರು 100 ವಿದ್ಯಾರ್ಥಿಗಳು ಈ ಪರಂಪರೆ ಉಳಿಸಿ ಅಭಿಯಾನದಲ್ಲಿ ಮುಂಜಾನೆಯಿಂದ ಮಧ್ಯಾಹ್ನದವರೆಗೆ ಅತಿ ಉತ್ಸಾಹದಿಂದ, ಆದಿಲ್‌ಶಾಹಿ ರಾಜರು ನಿರ್ಮಿಸಿದ ಬೃಹತ್ ಬಾವಿ ಯಲ್ಲಿ ಎಸೆಯಲಾಗಿದ್ದ ರಾಶಿ-ರಾಶಿ ಕಸ ಹೊರತೆಗೆದು ಹಾಗೂ ಅದರ ಸುತ್ತ ಬೆಳೆದಿದ್ದ ಕಳೆಯನ್ನು ಸ್ವಚ್ಛಗೊಳಿಸಿ, ಅರ್ಥಪೂರ್ಣ ವಿದ್ಯಾರ್ಥಿ ಬದುಕಿಗೆ ಮಾದರಿಯಾದರು.ಎಸ್.ಬಿ. ಕಲಾ ಹಾಗೂ ಕೆ.ಸಿ.ಪಿ. ವಿಜ್ಞಾನ ಮಹಾ ವಿದ್ಯಾಲಯದ ಹೆರಿಟೇಜ್ ಕ್ಲಬ್ ಹಾಗೂ ಆರ್ಯ ಟ್ರಸ್ಟ್ ಜಂಟಿಯಾಗಿ ~ಪರಂಪರೆ ಉಳಿಸಿ~ ಅಭಿಯಾನದ ಅಂಗವಾಗಿ ಈ ಸ್ಮಾರಕ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿ ದ್ದವು. ಎನ್‌ಸಿಸಿ ಕೆಡೆಟ್ಸ್, ರಾಷ್ಟ್ರೀಯ ಸ್ವಯಂ ಸೇವಕರು, ಕಾಲೇಜಿನ ಸಿಬ್ಬಂದಿ, ಭಾರತೀಯ ಪ್ರಾಚ್ಯವಸ್ತು ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಸಿದ್ದ ಈ ಕಾರ್ಯಕ್ರಮದಲ್ಲಿ ಕಸ-ಕಡ್ಡಿ, ಕುರುಚಲು ಗಿಡಗಳಿಂದ ಮಲಿನವಾಗಿದ್ದ ಅಪರೂಪದ ತಾಜ್ ಬಾವಡಿ ಮರು ಕಳೆ ಪಡೆದುಕೊಂಡಿತು.ಗಿಡಗಂಟೆ, ಕಸವನ್ನು ಸ್ವಚ್ಛಗೊಳಿಸು ವಾಗ ಈ ನಾಜೂಕಿನ ಸ್ಮಾರಕಕ್ಕೆ ಎಲ್ಲೂ ಧಕ್ಕೆಯಾಗದಂತೆ ವಿದ್ಯಾರ್ಥಿಗಳು ಜಾಗರೂಕತೆ ವಹಿಸಿದ್ದರು. ಸ್ವಚ್ಛತಾ ಕಾರ್ಯ ಮುಗಿಸಿ, ನೆರಳಿನಲ್ಲಿ ದಣಿವಾರಿಸಿಕೊಳ್ಳು ತ್ತಿದ್ದ ವಿದ್ಯಾರ್ಥಿನಿಯರ ಮುಖದಲ್ಲಿ ಧನ್ಯತಾಭಾವವಿತ್ತು. ಇತಿಹಾಸವನ್ನು ಗೌರವಿಸಿದ ತೃಪ್ತಿಯಿತ್ತು.  ನಮ್ಮ ಭವ್ಯ ಪರಂಪರೆಯ ಸಂಕೇತಗಳಾದ ಈ ಐತಿಹಾಸಿಕ ತಾಣಗಳ ಬಗೆಗೆ ವಿದ್ಯಾರ್ಥಿ ಗಳಲ್ಲಿ ಅರಿವು ಮೂಡಿಸಿ, ಅವುಗಳ ರಕ್ಷಣೆಗೆ ಹುರುದುಂಬಿಸುವುದೇ ಈ ಕಾರ್ಯಕ್ರಮದ ಉದ್ದೇಶ.`ಇಷ್ಟೊಂದು ವಿದ್ಯಾರ್ಥಿಗಳು, ಸಾರ್ವಜನಿಕರು ಇದರಲ್ಲಿ ಭಾಗವಸಿದ್ದು ನೋಡಿದರೆ ನಮ್ಮ ಶ್ರಮ ಸಾರ್ಥಕವಾಯಿತು ಎನಿಸುತ್ತದೆ ಎನ್ನುತ್ತಾರೆ~ ಆರ್ಯ ಟ್ರಸ್ಟ್‌ನ ಗೌರವಾಧ್ಯಕ್ಷ ಡಾ. ಎಚ್.ಜಿ.ದಡ್ಡಿ.`ಇಲ್ಲಿಯವರೆಗೆ ಬರೀ ರಸ್ತೆ, ಚರಂಡಿ ಸ್ವಚ್ಛತೆ ಕಾರ್ಯಕ್ರಮಗಳಲ್ಲಿ ಭಾಗವಹಿ ಸ್ದ್ದಿದೇವು. ಇದೊಂದು ಅದ್ಭುತ ಅನು ಭವ~ ಎಂದು ಉದ್ಘರಿಸಿದ ಬಿಎಸ್ಸಿ ನಾಲ್ಕನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವ ವಿದ್ಯಾರ್ಥಿ ರಘುವೀರ.  ನಾವ್ಯಾಕೆ ನಮ್ಮ ಸುತ್ತಲಿನ ಅಮೂಲ್ಯ ಪರಂಪರೆ ತಾಣಗಳ ಬಗೆಗೆ ಗಮನ ಹರಿಸುತ್ತಿಲ್ಲ? ಇವತ್ತಿನ ಕಾರ್ಯಕ್ರಮದಿಂದ ಸ್ಮಾರಕಗಳ ಮಹತ್ವದ ಬಗೆಗೆ ನನಗೆ ಜ್ಞಾನೋದಯ ವಾಗಿದೆ. ಇನ್ನುಮುಂದೆ, ಸ್ಮಾರಕಗಳನ್ನು ಮುಂದಿನ ತಲೆಮಾರಿನವರಿಗೆ ಉಳಿಸಿ ಕೊಡಲು ಸರ್ವ ರೀತಿಯಿಂದ ಪ್ರಯತ್ನ ಮಾಡುತ್ತೇನೆ ಎಂದು ಹೇಳುವಾಗ ಆತನ ಮುಖದಲ್ಲಿ ತೃಪ್ತಭಾವ ಮೂಡಿತ್ತು.ಈತನ ಮಾತನ್ನು ಪಾಂಡುರಂಗ ಕುಲಕರ್ಣಿ, ಸುಧೀರ ದೇಶಪಾಂಡೆ, ಜಯಲಕ್ಷ್ಮಿ ರೇಮಠ, ಕಟಕದೊಂಡ, ಬಿರಾದಾರ ನಾಗಿಣಿ, ಪಾಟೀಲ ಅನು ದೀಪ, ಪ್ರದೀಪಕುಮಾರ ಮಮದಾಪುರ ಮತ್ತು ಇತರ ವಿದ್ಯಾರ್ಥಿಗಳೂ ಧ್ವನಿಗೂಡಿಸಿದರು.ಹದಿನೈದನೇ ಶತಮಾನದ ರಾಣಿ ತಾಜ್ ಸುಲ್ತಾನಾಳ ಸ್ಮರಣಾರ್ಥ ನಿರ್ಮಿಸಿದ  ಈ ಬಾವಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಶಿಷ್ಟ ಅನುಭವದಿಂದ ಉತ್ತೇಜಿತಗೊಂಡ ಎನ್‌ಸಿಸಿ ಅಧಿಕಾರಿ ಮೇಜರ್ ಪಿ.ಡಿ. ನೀಡಗಿ ಮತ್ತು ಎನ್‌ಎಸ್‌ಎಸ್ ಘಟಕದ ಮುಖ್ಯಸ್ಥರು ಮುಂದಿನ ಎನ್‌ಸಿಸಿ ಹಾಗೂ ಎನ್‌ಎಸ್‌ಎಸ್ ಕ್ಯಾಂಪ್‌ಗಳನ್ನು ಸ್ಮಾರಕಗಳ ಸ್ಥಳಗಳಲ್ಲೇ ಸಂಘಟಿಸಲು ತಮ್ಮ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಚಾರ್ಯರನ್ನು ಕೇಳಿ ಕೊಳ್ಳಲಾಗು ವುದು ಎಂದರು.ತ್ಯಾಜ್ಯ ವಸ್ತುಗಳನ್ನು ಮೇಲೆತ್ತಲು ಸ್ವತಃ ತಾವೇ ಬಾವಿಗೆ ಜಿಗಿದ ನಗರ ಸಭೆ ಸದಸ್ಯ ರವೀಂದ್ರ ಕುಲಕರ್ಣಿ ಈ ಸ್ವಚ್ಛತಾ ಕಾರ್ಯಕ್ರಮದ ಕೆಂದ್ರಬಿಂದು ವಾಗಿದ್ದರು. ಸ್ಮಾರಕಗಳು ನಮ್ಮ ರಾಷ್ಟ್ರದ ಅಮೂಲ್ಯ ಆಸ್ತಿ. ಅವುಗಳನ್ನು ಉಳಿಸಿ, ಸಂರಕ್ಷಸಿಲು ನಾವು ತನು- ಮನದಿಂದ ಶ್ರಮಿಸೋಣ, ಎಂದರು.ಪಾಚಾರ್ಯ ಬಿ.ಜಿ.ಮಠ, ಪರಂಪರೆ ಕೂಟದ ಕಾರ್ಯದರ್ಶಿ ರಾಜೇಂದ್ರ ಬಿದರಿ, ಯು.ಎಸ್. ಪೂಜಾರ, ಡಾ. ಮೂಲಿಮನಿ, ಎ.ಎಸ್. ಪೂಜಾರ, ಡಾ.ಎಸ್.ಸಿ. ಪತ್ತಾರ, ವಕ್ಫ್  ಬೋರ್ಡ್ ಸಲಹಾ ಸಮಿತಿ ಸದಸ್ಯ ಮೊಹಮ್ಮದ್ ಮಜರ್ ಇನಾಮದಾರ್, ಸಜ್ಜಾದ ನಸೀನ್ ಎನ್.ಕೆ. ಜಾಗೀರದಾರ್, ಸಂಜಯ ಹಿರೇಮಠ, ಸಂಗಮೇಶ ದುರ್ಗದ, ಡಾ. ಸಲೀಮ್ ದುಂಡ್ಸೆ, ಪತ್ರಕರ್ತ ರಾಜು ವಿಜಾಪುರ, ಭಾರತೀಯ ಪ್ರಾಚ್ಯವಸ್ತು ಇಲಾಖೆ ಸಿಬ್ಬಂದಿ, ಹಾಗೂ ಇತರರು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.