ಬೆಂಗಳೂರು: ಪ್ರತಿ ಯೂನಿಟ್ ವಿದ್ಯುತ್ನ ದರವನ್ನು 66 ಪೈಸೆಯಷ್ಟು ಹೆಚ್ಚಳ ಮಾಡುವಂತೆ ಕೋರಿ ರಾಜ್ಯದ ಐದೂ ವಿದ್ಯುತ್ ಸರಬರಾಜು ಕಂಪೆನಿಗಳು (ಎಸ್ಕಾಂಗಳು) ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್ಸಿ) ಶುಕ್ರವಾರ ಅರ್ಜಿ ಸಲ್ಲಿಸಿವೆ.

ಪ್ರಸಕ್ತ ವರ್ಷ 61,075 ದಶಲಕ್ಷ ಯೂನಿಟ್ ವಿದ್ಯುತ್ ಪೂರೈಸಲಾಗುತ್ತದೆ. ಇದಕ್ಕಾಗಿ ಎಸ್ಕಾಂಗಳು ರೂ 24,469 ಕೋಟಿ ವಹಿವಾಟು ನಡೆಸುವುದಕ್ಕೆ ಅನುಮೋದನೆ ಇದೆ. 2014–15ರಲ್ಲಿ ರಾಜ್ಯದ ಒಟ್ಟು ವಿದ್ಯುತ್ ಪೂರೈಕೆಯ ಪ್ರಮಾಣ 62,959 ದಶಲಕ್ಷ ಯೂನಿಟ್ಗಳಷ್ಟಾಗಬಹುದು ಎಂದು ಅಂದಾಜಿಸಲಾಗಿದೆ. ಇದರಿಂದ ರೂ 27,772 ಕೋಟಿ ವಹಿವಾಟು ನಡೆಯಬಹುದು. ಈ ಸಮಯದಲ್ಲಿ ಬೇಕಾಗುವ ವಾರ್ಷಿಕ ವರಮಾನ ಪ್ರಮಾಣವನ್ನು ಆಧಾರವಾಗಿ ಇರಿಸಿಕೊಂಡು ಪ್ರತಿ ಯೂನಿಟ್ ವಿದ್ಯುತ್ನ ದರವನ್ನು 66 ಪೈಸೆಯಷ್ಟು ಹೆಚ್ಚಳ ಮಾಡಬೇಕು ಎಂದು ಎಸ್ಕಾಂಗಳು ಅರ್ಜಿಯಲ್ಲಿ ಮನವಿ ಮಾಡಿವೆ.

ರೈತರ ನೀರಾವರಿ ಪಂಪ್ಸೆಟ್ಗಳು, ಭಾಗ್ಯ ಜ್ಯೋತಿ ಮತ್ತು ಕುಟೀರ ಜ್ಯೋತಿ ಸಂಪರ್ಕಗಳಿಗೆ ಪೂರೈಸುವ ವಿದ್ಯುತ್ಗೆ ಅರ್ಜಿಯಲ್ಲಿ ಕೋರಿರುವ ಅಂಶ ಅನ್ವಯವಾಗುವುದಿಲ್ಲ. ಈ ಸಂಪರ್ಕಗಳಿಗೆ ಪೂರೈಸುವ ವಿದ್ಯುತ್ನ ಪೂರ್ಣ ಮೊತ್ತವನ್ನು ಸರ್ಕಾರವೇ ಪಾವತಿಸುತ್ತದೆ.

ವಿದ್ಯುತ್ ಸರಬರಾಜು ಕಂಪೆನಿಗಳು ಸಲ್ಲಿಸಿರುವ ಅರ್ಜಿಗಳ ವಿವರವನ್ನು ಶೀಘ್ರದಲ್ಲೇ ಎಲ್ಲಾ ಎಸ್ಕಾಂಗಳ ಕೇಂದ್ರ ಕಚೇರಿಗಳಲ್ಲಿ ಪ್ರಕಟಿಸಲಾಗುತ್ತದೆ. ನಂತರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಪ್ರಕ್ರಿಯೆ ಆರಂಭವಾಗುತ್ತದೆ.

ಮುಂದಿನ ಮೂರು ತಿಂಗಳಲ್ಲಿ ಆಯೋಗವು ಎಸ್ಕಾಂಗಳ ಅರ್ಜಿಯಲ್ಲಿನ ಅಂಶಗಳು ಮತ್ತು ಅವುಗಳಿಗೆ ಪೂರಕವಾಗಿ ನೀಡಿರುವ ಆಧಾರಗಳ ಮೌಲ್ಯಮಾಪನ ನಡೆಸುತ್ತದೆ. ಬಳಿಕ ರಾಜ್ಯದ ವಿವಿಧೆಡೆ ಸಾರ್ವಜನಿಕ ಸಭೆಗಳನ್ನು ನಡೆಸಿ ಸಮಾಲೋಚನೆ ಮತ್ತು ವಿಚಾರಣೆ ನಡೆಸುತ್ತದೆ. ನಂತರ 2014ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ದರ ಹೆಚ್ಚಳಕ್ಕೆ ಅನುಮೋದನೆ ನೀಡುತ್ತದೆ ಎಂದು ಕೆಇಆರ್ಸಿ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.