ಶುಕ್ರವಾರ, ಏಪ್ರಿಲ್ 16, 2021
22 °C

ವಿದ್ಯುತ್ ಕಿಡಿ; 500 ಕಾಫಿ ಗಿಡ ಭಸ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳಸ: ಇಲ್ಲಿಗೆ ಸಮೀಪದ ಅಂಬಿನಕೊಡಿಗೆಯಲ್ಲಿ ವಿದ್ಯುತ್ ತಂತಿಗಳಿಂದ ಹೊಮ್ಮಿದ ಕಿಡಿ ಕಾಫಿ ತೋಟವನ್ನು ಆಹುತಿ ಮಾಡಿದೆ.11 ಕೆ.ವಿ. ವಿದ್ಯುತ್ ಮಾರ್ಗದಲ್ಲಿ ತಂತಿಗಳು ಪರಸ್ಪರ ತಗುಲಿದಾಗ ಕಿಡಿಗಳು ಹೊಮ್ಮಿ ಸತೀಶ್‌ಚಂದ್ರ ಅವರ 1 ಎಕರೆ ಕಾಫಿ ತೋಟಕ್ಕೆ ಬೆಂಕಿ ತಗುಲಿದೆ. ‘500ಕ್ಕೂ ಹೆಚ್ಚು ಗಿಡಗಳು ಸುಟ್ಟು ಭಸ್ಮವಾಗಿದ್ದು ಅಪಾರ ನಷ್ಟವಾಗಿದೆ. ಕಳೆದ ವರ್ಷವೂ ಇದೇ ಮಾರ್ಗದ ಕೆಳಗೆ ಬೆಂಕಿ ಹೊತ್ತಿಕೊಂಡಿತ್ತು’ ಎಂದು ಸತೀಶ್ ತಿಳಿಸಿದ್ದಾರೆ. ಶುಕ್ರವಾರ ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ತೆರಳಿ ತಂತಿಗಳನ್ನು ಸಮರ್ಪಕವಾಗಿ ಜೋಡಿಸಿದ್ದಾರೆ.ಕಳಸ: ಕಾಡ್ಗಿಚ್ಚಿನ ಹಾವಳಿ

ಕಳಸ
: ಇಲ್ಲಿಗೆ ಸಮೀಪದ ಕಲ್ಲುಗೋಡು ಅರಣ್ಯ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ವ್ಯಾಪಕ ಕಾಡ್ಗಿಚ್ಚು ಕಾಣಿಸಿಕೊಂಡಿದೆ.ಗುರುವಾರ ಬೆಳಗ್ಗಿನಿಂದಲೇ ಪಾಂಡವರ ಉಪ್ಪರಿಗೆ ಮತ್ತು ಕಲ್ಲುಗೋಡು ಕಾಡಿನಲ್ಲಿ ಬೆಂಕಿ ಹೊತ್ತಿಕೊಂಡಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಗುರುವಾರ ರಾತ್ರಿ ಧಗಧಗನೆ ಉರಿಯುತ್ತಿದ್ದ ಬೆಂಕಿ ಕಳಸ ಪಟ್ಟಣಕ್ಕೂ ಗೋಚರಿಸುತ್ತಿತ್ತು. ಬೆಂಕಿಯಲ್ಲಿ ಹಲವಾರು ಮರಗಳು ಮತ್ತು ಪ್ರಾಣಿ ಸಂಕುಲ ನಾಶವಾಗಿರುವ ಭೀತಿ ಇದೆ.ಒಣಗಿದ ಹುಲ್ಲಿಗೆ ಹಳ್ಳಿಗರು ನೀಡಿದ್ದ ಬೆಂಕಿಯು ಅರಣ್ಯಕ್ಕೆ ವ್ಯಾಪಿಸಿರುವ ಸಾಧ್ಯತೆ ಇದೆ. ಅರಣ್ಯ ಇಲಾಖೆಯು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಅಭಯಾರಣ್ಯದಲ್ಲಿ ಬೆಂಕಿ

ಬಾಳೆಹೊನ್ನೂರು:
ಭದ್ರಾ ಅಭಯಾರಣ್ಯದಲ್ಲಿ ಗುರುವಾರ ಸಂಜೆಯಿಂದ ಅಲ್ಲಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ಶುಕ್ರ ವಾರ ಹಲವು ಪ್ರದೇಶಗಳಿಗೆ ವ್ಯಾಪಿಸಿದ್ದು, ಸೀಕೆ ಸಮೀಪದ ಮುದುಗುಣಿಯಲ್ಲಿ ಜನವಸತಿ ಪ್ರದೇಶದಲ್ಲಿ ಆತಂಕ ಸೃಷ್ಟಿಸಿತ್ತು. ಬೆಂಕಿಯ ಕಿಡಿ ಸಮೀಪದ ಮನೆಗಳಿಗೆ ವ್ಯಾಪಿಸುವ ಸಾಧ್ಯತೆ ಇದ್ದು ಸ್ಥಳೀಯರು ಅಗ್ನಿಶಾಮಕ ದಳವನ್ನು ಸ್ಥಳಕ್ಕೆ ಕರೆಸಿದ್ದರು.  ಅಭಯಾರಣ್ಯದಲ್ಲಿ ಅಪಾರ ಗಿಡ ಮೂಲಿಕೆಗಳು ಬೆಂಕಿಯಿಂದ ನಾಶವಾಗುತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಇತ್ತ ತಲೆ ಹಾಕಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.