ಭಾನುವಾರ, ಮೇ 9, 2021
28 °C

ವಿದ್ಯುತ್ ದರ ಏರಿಕೆ: ಅಹವಾಲು ಸ್ವೀಕಾರ ಪೂರ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿದ್ಯುತ್ ಬೆಲೆ ಹೆಚ್ಚಳ ಮಾಡುವಂತೆ ಕೋರಿ ವಿದ್ಯುತ್ ಸರಬರಾಜು ಕಂಪೆನಿಗಳು ಹಾಗೂ ಕೆಪಿಟಿಸಿಎಲ್ ಮುಂದಿಟ್ಟಿದ್ದ ಕೋರಿಕೆ ಕುರಿತು ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗ ಸಾರ್ವಜನಿಕರ ಅಹವಾಲು ಸ್ವೀಕರಿಸುವುದನ್ನು ಶುಕ್ರವಾರ ಪೂರ್ಣಗೊಳಿಸಿದೆ.ಆಯೋಗದ ಎದುರು ಶುಕ್ರವಾರ ವಾದ ಮಂಡಿಸಿದ ಕೆಪಿಟಿಸಿಎಲ್ ಪ್ರತಿನಿಧಿಗಳು, ಪ್ರಸರಣ ವೆಚ್ಚವನ್ನು ಈಗಿರುವ 28 ಪೈಸೆಯಿಂದ ಪ್ರತಿ ಯೂನಿಟ್ ವಿದ್ಯುತ್ತಿಗೆ 44 ಪೈಸೆಗೆ ಹೆಚ್ಚಳ ಮಾಡಬೇಕು ಎಂದು ಕೋರಿಕೆ ಸಲ್ಲಿಸಿದರು.

ಅಹವಾಲು ಸ್ವೀಕಾರ ಮುಗಿದ ಎರಡು ವಾರಗಳಲ್ಲಿ ಆಯೋಗ ತನ್ನ ತೀರ್ಪು ನೀಡುತ್ತದೆ.ಈ ಹಿನ್ನೆಲೆಯಲ್ಲಿ ವಿದ್ಯುತ್ ಬೆಲೆ ಹೆಚ್ಚಳ ಸಂಬಂಧ ಇದೇ ತಿಂಗಳ ಕೊನೆಯ ವಾರದ ವೇಳೆಗೆ ಆಯೋಗ ತೀರ್ಪು ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.