ಮಾಹಿತಿ ತಂತ್ರಜ್ಞಾನದ ಪ್ರಭಾವಲಯದ ವ್ಯಾಪ್ತಿಯಲ್ಲಿ ಬಾರದಿರುವ ಸಂಗತಿ ಯಾವುದಿದೆ? ನಮ್ಮ ಆಡಳಿತವೂ ಇದಕ್ಕೆ ಹೊರತಾಗಿಲ್ಲ. ದಿನೇ ದಿನೇ ಎಲ್ಲ ಬಗೆಯ ಆಡಳಿತಗಳೂ ಗಣಕೀಕರಣದತ್ತ ಧಾವಿಸುವುದನ್ನು ನೋಡಬಹುದಾಗಿದೆ.ಸರ್ಕಾರ ತನ್ನ ಆಡಳಿತವನ್ನು ಪ್ರಜಾಪ್ರಭುತ್ವದ ತತ್ವಗಳಿಗನುಸಾರ ನಡೆಸಬೇಕಾದ ಅಗತ್ಯ ಈಗ ಹಿಂದೆಂಗಿಂತಲೂ ಹೆಚ್ಚಾಗಿದೆ.ವಿದ್ಯುನ್ಮಾನ ಆಡಳಿತದಿಂದ ಪಾರದರ್ಶಕತೆ ಸಾಧ್ಯವಾಗುವುದು ಮಾತ್ರವಲ್ಲ, ಸಾಂಪ್ರದಾಯಿಕ ಆಡಳಿತದ ಅನೇಕ ತೊಡಕುಗಳ ನಿವಾರಣೆಯೂ ಸಾಧ್ಯ. ಆ ಕಾರಣದಿಂದಲೇ ಅದರ ಬಳಕೆಯನ್ನು ನಾವು ಸ್ವಾಗತಿಸಬೇಕಾಗಿದೆ.

ವಿದ್ಯುನ್ಮಾನ ಆಡಳಿತ ಎಂದರೆ ಕೇವಲ ಗಣಕಗಳನ್ನು ಬಳಸುವುದು ಎಂದಷ್ಟೇ ಅಲ್ಲ. ಅದು, ಸರ್ಕಾರ ತನ್ನ ಸಿಬ್ಬಂದಿಯೊಡನೆ, ಸಾರ್ವಜನಿಕರೊಡನೆ, ತನ್ನ ಉದ್ಯಮಗಳಿಗೆ ಸಂಬಂಧಿಸಿದವರೊಡನೆ ಮತ್ತು ಸರ್ಕಾರದ ಇತರೆ ವಿಭಾಗ/ಇಲಾಖೆಗಳು ನಡೆಸುವ ಎಲ್ಲ ಬಗೆಯ ಚಟುವಟಿಕೆಗಳಿಗೂ ಮಾಹಿತಿ ಸಂವಹನ ತಂತ್ರಜ್ಞಾನ ಸಾಧನಗಳನ್ನು ಬಳಸುವುದಾಗಿದೆ.

ಮುಂದಿನ ದಿನಗಳಲ್ಲಿ ಇಡೀ ಸಮಾಜವೇ ಗಣಕಾವಲಂಬಿಯಾಗುವ ಸೂಚನೆಗಳು ಲಭ್ಯವಾಗುತ್ತಿರುವುದರಿಂದ ವಿದ್ಯುನ್ಮಾನ ಆಡಳಿತ ಅಂತಹ ವಿಶೇಷವಲ್ಲ ಎನಿಸಿದರೂ, ಅದನ್ನು ಕಾರ್ಯರೂಪಕ್ಕೆ ಇಳಿಸುವಲ್ಲಿರುವ ತೊಂದರೆಗಳು, ಭದ್ರತೆಯ ಕುರಿತಾದ ಸೂಕ್ಷ್ಮಗಳು, ತಂತ್ರಜ್ಞಾನಾತ್ಮಕ ಸಂಗತಿಗಳು- ಇವೆಲ್ಲ ಕುತೂಹಲಕಾರಿ ಮತ್ತು ನಿರ್ಣಯಿಸಬೇಕಾದ ಅಂಶಗಳಾಗಿರುತ್ತವೆ. ವಿಶ್ವಸಂಸ್ಥೆ ತನ್ನೆಲ್ಲ ಸದಸ್ಯ ರಾಷ್ಟ್ರಗಳಿಗೂ ಅನ್ವಯವಾಗಲಿ ಎನ್ನುವ ಅಭಿಪ್ರಾಯದಿಂದ ಆಡಳಿತದ ಶಿಷ್ಟ ಮಾನದಂಡಗಳನ್ನು ಈ ಹಿಂದೆಯೇ ರೂಪಿಸಿದೆ.

ನಮ್ಮ ಕೇಂದ್ರ ಸರ್ಕಾರವೂ ಈ ಕುರಿತು ಹಲವು ವರ್ಷಗಳಿಂದ ಚಿಂತನೆ ನಡೆಸುತ್ತಿದೆ. ಕಳೆದ ನವೆಂಬರ್ನಲ್ಲಿ ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ನಮ್ಮ ಸರ್ಕಾರಗಳು ವಿದ್ಯುನ್ಮಾನ ಆಡಳಿತ ನಡೆಸುವಲ್ಲಿ ಅನುಸರಿಸಬೇಕಾದ ವಿವಿಧ ಮಾನದಂಡಗಳನ್ನು ಪ್ರಕಟಿಸಿದೆ.ತುಂಬಾ ತಾಂತ್ರಿಕವಾಗಿರುವ ಅದರ ವಿವರಗಳಲ್ಲಿನ ಒಂದೆರಡು ಮುಖ್ಯಾಂಶಗಳನ್ನು ಹೀಗೆ ನಿರೂಪಿಸಬಹುದು:

1. ಆಡಳಿತದಲ್ಲಿ ಬಳಸಲಾಗುವ ತಂತ್ರಾಂಶಗಳ ನೆಲೆಗಟ್ಟು ಮುಕ್ತ ಆಕರ ಶಿಷ್ಟತೆಗಳನ್ನು ಬಳಸಿದವಾಗಿರಬೇಕು.
2. ರಾಯಧನ ಮುಕ್ತವಾಗಿರುವ ಅಥವಾ ನಾಮಮಾತ್ರದ್ದಾಗಿರುವ ತಂತ್ರಾಂಶ ನೆಲೆಗಟ್ಟುಗಳನ್ನು ಬಳಸಬೇಕು.
3. ಈ ನೆಲೆಗಟ್ಟು ದೇಶದ ಎಲ್ಲ ಸ್ಥಳೀಯ ಭಾಷೆಗಳ ಮುಕ್ತ ಆಕರಗಳಿಂದ ರೂಪಿಸಿರುವ ಅಕ್ಷರ ಶೈಲಿಗಳನ್ನು ಬಳಸಲು ಅನುವು ಮಾಡಿಕೊಡುವ ಹಾಗಿರಬೇಕು. (ಇಲ್ಲಿ ಭಾಷೆಗೆ ಅನುಸರಿಸುವ ಶಿಷ್ಟತೆ ಎಂದರೆ ಯುನಿಕೋಡ್ ಕನ್ಸಾರ್ಷಿಯಂ ಸಂಸ್ಥೆ ರೂಪಿಸಿರುವ ಯುನಿಕೋಡ್ ಶಿಷ್ಟತೆ 5.1.0).
4. ಶಿಷ್ಟ ವಾತಾವರಣ ಇನ್ನೂ ನಿರ್ಮಾಣವಾಗದಿದ್ದಲ್ಲಿ ಕೊನೆಯ ಪಕ್ಷ ಯೋಗ್ಯ, ಯಥೋಚಿತ ಷರತ್ತುಗಳೊಂದಿಗೆ ಆದರೆ ಯಾವುದೇ ರೀತಿಯ ನಿಷೇಧಾತ್ಮಕ ಷರತ್ತುಗಳಿಲ್ಲದಿರುವ ಹಾಗೂ ರಾಯಧನದ ಪ್ರಸ್ತಾಪ ಇಲ್ಲದಿರುವ ನೆಲೆಗಟ್ಟನ್ನು ರೂಪಿಸಬಹುದು ಮತ್ತು ಇದನ್ನು ತಾತ್ಕಾಲಿಕ ಶಿಷ್ಟ ಮಾನದಂಡಗಳೆಂದು ಪರಿಗಣಿಸಬಹುದು.

ಒಂದು ರೀತಿಯಲ್ಲಿದು ಸ್ವಾಗತಾರ್ಹ ಪ್ರಕಟಣೆಯಾಗಿದೆ. ಮುಕ್ತ ವಾತಾವರಣದಲ್ಲಿ ಕೆಲಸ ಮಾಡಲಿಚ್ಛಿಸುವ ತಂತ್ರಜ್ಞರಿಗಿದು ಉತ್ತೇಜಕ ಪ್ರಕ್ರಿಯೆಯಾಗಬಹುದಾಗಿದೆ. ಜೊತೆಗೆ ಇದರಿಂದ ತಂತ್ರಾಂಶ ನಿರ್ಮಾಣದ ವೆಚ್ಚ ತಗ್ಗುವ ಸಾಧ್ಯತೆ ಇರುತ್ತದೆ. ಮುಖ್ಯವಾಗಿ, ವಿಭಿನ್ನ ವಾತಾವರಣಗಳಲ್ಲಿ ತಂತ್ರಾಂಶಗಳನ್ನು ರೂಪಿಸಿದಾಗ ಆಗುವ ಗೋಜಲುಗಳನ್ನು ತಪ್ಪಿಸಬಹುದು. ಇದರಿಂದ ಬಳಕೆದಾರರಿಗೂ ಪ್ರಯೋಜನವಿದೆ. ಎಲ್ಲ ತಂತ್ರಾಂಶಗಳೂ ಏಕರೂಪವಾಗಿರುವುದರಿಂದ ಇವುಗಳ ಜೊತೆ ವ್ಯವಹರಿಸುವುದು ಸುಲಭವಾಗುತ್ತದೆ.

ದಶಕದ ಹೊಳಪು
ಭಾರತದಲ್ಲಿ ಮಾಹಿತಿ ತಂತ್ರಜ್ಞಾನ ವಲಯ ಸಾಕಷ್ಟು ಪ್ರಗತಿ ಸಾಧಿಸಿ ವಿದೇಶಿ ವಿನಿಮಯವನ್ನು ಗಳಿಸುತ್ತಿದ್ದರೂ, ಕೇವಲ ಹತ್ತು ರಾಜ್ಯಗಳು ಮಾತ್ರ ವಿದ್ಯುನ್ಮಾನ ಆಡಳಿತಕ್ಕೆ ಮಣೆಹಾಕಿವೆ. ಉಳಿದ ರಾಜ್ಯಗಳು ಇನ್ನೂ ಇದರಿಂದ ಬಹುದೂರದಲ್ಲಿವೆ. ಈ ಪೈಕಿ ಕರ್ನಾಟಕ ಸರ್ಕಾರ 2000ದ ದಶಕದಿಂದಲೇ ಅನೇಕ ಉಪಕ್ರಮಗಳನ್ನು ಕೈಗೊಳ್ಳಲಾರಂಭಿಸಿದೆ. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದಾಗ ವಿದ್ಯುನ್ಮಾನ ಆಡಳಿತಕ್ಕೆ ಹೆಚ್ಚಿನ ಒತ್ತು ದೊರೆಯಿತು.

ಕರ್ನಾಟಕ ಸರ್ಕಾರದ ಇಲಾಖೆಗಳು, ನಿಗಮಗಳು, ಮಂಡಳಿಗಳು ಇತರ ಅರೆಸರ್ಕಾರಿ ಸಂಸ್ಥೆಗಳು ಮುಂತಾದವುಗಳಲ್ಲಿ ಈಗ ಒಟ್ಟು ಒಂದು ಲಕ್ಷಕ್ಕೂ ಹೆಚ್ಚು ಗಣಕಗಳಿವೆ. ಹೀಗಾಗಿ ಸಿಬ್ಬಂದಿ, ಅಧಿಕಾರಿ ಎಲ್ಲರೂ ಗಣಕದ ಬಳಕೆಯಲ್ಲಿ ನಿರತರಾಗಿದ್ದಾರೆ ಎನ್ನಬಹುದು. ಭಾಷೆಯ ದೃಷ್ಟಿಯಿಂದ ಎಲ್ಲ ಕಡೆ ಕನ್ನಡ ಬಳಕೆಯಾಗುತ್ತಿದೆಯೇ ಎಂಬುದು ಬಹುಮುಖ್ಯವಾದ ಅಂಶ. ಇದನ್ನು ಸ್ಪಷ್ಟಪಡಿಸಿಕೊಳ್ಳಬೇಕಾದರೆ ಕರ್ನಾಟಕ ಸರ್ಕಾರ ಯಾವ ರೀತಿಯ ತಂತ್ರಾಂಶಗಳನ್ನು ರೂಪಿಸಿದೆ ಮತ್ತು ಅಲ್ಲೆಲ್ಲ ಎಷ್ಟರ ಮಟ್ಟಿಗೆ ಕನ್ನಡವನ್ನು ಬಳಸಿಕೊಳ್ಳುತ್ತಿದೆ ಎಂಬುದನ್ನು ಗಮನಿಸಬೇಕು.

ಕೆಲವು ಇಲಾಖಾ ನಿರ್ದಿಷ್ಟ ಮತ್ತು ಕೆಲವು ವ್ಯಾಪಕ ಬಳಕೆಗೆ ಅನುವಾಗುವ ತಂತ್ರಾಂಶಗಳನ್ನು ಕರ್ನಾಟಕ ಸರ್ಕಾರ ಅಭಿವೃದ್ಧಿಗೊಳಿಸಿ ಬಳಕೆಗೆ ತಂದಿದೆ. ಇನ್ನೂ ಕೆಲವು ಯೋಜನೆಗಳು ವಿವಿಧ ಹಂತದಲ್ಲಿವೆ.ಕರ್ನಾಟಕದ ಇ-ಆಡಳಿತದಲ್ಲಿ ಸರ್ವತ್ರ ಬಳಕೆಯಾಗುವ ಎರಡು ತಂತ್ರಾಂಶಗಳನ್ನು ಮೊದಲನೆಯದಾಗಿ ಗಮನಿಸಬಹುದು. ಮೊದಲನೆಯದು, ತುಂಬ ಮೊದಲು ಪ್ರಾರಂಭವಾಗಿ ಈಗ ಗಟ್ಟಿಯಾಗಿರುವ ‘ಭೂಮಿ’ ತಂತ್ರಾಂಶ.

ಭೂದಾಖಲೆಗಳನ್ನು ನಿಖರವಾಗಿ ದಾಖಲಿಸುವ ಅವುಗಳನ್ನು ಬೇಕೆಂದಾಗ ಬೇಕಾದವರಿಗೆ ಒದಗಿಸುವ ತಂತ್ರಾಂಶವಿದು.ಎರಡನೆಯದು, ಖಜಾನೆಯ ವ್ಯವಹಾರಗಳಿಗೆ ಸಂಬಂಧಿಸಿದ ತಂತ್ರಾಂಶ- ‘ಖಜಾನೆ’. ಇದು ಇಂಗ್ಲಿಷ್ನಲ್ಲಿದೆ.ಖಜಾನೆಯ ಎರಡನೆಯ ಆವೃತ್ತಿಯಲ್ಲಿ ಕನ್ನಡವನ್ನು ಅಳವಡಿಸುವ ಚಿಂತನೆ ಇದೆ ಎನ್ನಲಾಗಿದೆ.

ಮೂರನೆಯದು ಎಚ್ಆರ್ಎಂಎಸ್- ಮಾನವ ಸಂಪನ್ಮೂಲ ವ್ಯವಸ್ಥಾಪನಾ ತಂತ್ರಾಂಶ. ಇದರಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡನ್ನೂ ಸ್ವಲ್ಪಮಟ್ಟಿಗೆ ಬಳಸಲು ಅವಕಾಶವಿದೆ. ಹೆಸರು, ವಿಳಾಸ ಮುಂತಾದವು ಇಂಗ್ಲಿಷ್ನಲ್ಲಿವೆ. ಇದು ಸಿಬ್ಬಂದಿಯ ವೇತನ, ಸೇವಾವಿವರಗಳು ಮುಂತಾದುವನ್ನು ನಿರ್ವಹಿಸುವ ತಂತ್ರಾಂಶ. ಇದರಿಂದ ಸಿಬ್ಬಂದಿಗೆ ಸಂಕೀರ್ಣವಾದ ಕೆಲಸ ಸುಗಮವಾಗಿದ್ದು, ಇದನ್ನು ಇನ್ನಷ್ಟು ವಿಸ್ತರಿಸುವ ಚಿಂತನೆ ಇದೆ.

ನಾಲ್ಕನೆಯದಾಗಿ ಕಾಮಗಾರಿ ಮತ್ತು ಖರೀದಿಯ ವ್ಯವಹಾರಗಳಿಗಾಗಿ ಟೆಂಡರು ಪ್ರಕ್ರಿಯೆಯನ್ನು ನಿರ್ವಹಿಸುವ ‘ಇ-ಪ್ರಿಕೂರ್ಮೆಂಟ್’. ಇದು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಲಾಗಿರುವ ಒಂದು ತಂತ್ರಾಂಶ. ಇದು ಸಂಪೂರ್ಣ ಇಂಗ್ಲಿಷ್ನಲ್ಲಿದೆ.

ಇಲಾಖೆಯೊಂದಕ್ಕೆ ನಿರ್ದಿಷ್ಟವಾದ ತಂತ್ರಾಂಶಕ್ಕೆ ‘ಕಾವೇರಿ’ಯನ್ನು ಉದಾಹರಿಸಬಹುದು. ನೋಂದಣಿಗೆ ಸಂಬಂಧಿಸಿದ ಈ ತಂತ್ರಾಂಶವನ್ನು ಸ್ಟಾಂಪು ಮತ್ತು ನೋಂದಣಿಗಳ ಇಲಾಖೆ ಬಳಸುತ್ತದೆ. ನೋಂದಣಿಗಳಲ್ಲಿ ಆಗುತ್ತಿದ್ದ ವಿಳಂಬ, ದಾಖಲೆಗಳನ್ನು ಪೂರೈಸುವಲ್ಲಿ ಆಗುತ್ತಿದ್ದ ತೊಂದರೆಗಳನ್ನು ಇದು ನಿವಾರಿಸುತ್ತದೆ ಎಂದು ಆಶಿಸಲಾಗಿದೆ.

ವಾಣಿಜ್ಯ ಇಲಾಖೆಯವರು ಬಳಕೆಗೆ ತಂದಿರುವ ತಂತ್ರಾಂಶ ‘ತೆರಿಗೆ’. ಇದರಲ್ಲಿಯೂ ಕನ್ನಡ ಮತ್ತು ಇಂಗ್ಲಿಷ್ ಬಳಕೆಗೆ ಅವಕಾಶವಿದೆ. ಇವಲ್ಲದೆ ಇನ್ನೂ ಅನೇಕ ರೀತಿಯ ತಂತ್ರಾಂಶಗಳನ್ನು ಆಯಾ ಇಲಾಖೆ ಅಥವಾ ನಿಗಮ ಅಥವಾ ಮಂಡಳಿಗಳು ತಾವೇ ಅಭಿವೃದ್ಧಿ ಮಾಡಿಕೊಂಡಿರುತ್ತವೆ. ಉದಾಹರಣೆಗೆ ವಿದ್ಯುಚ್ಛಕ್ತಿ ನಿಗಮ ಅಥವಾ ಜಲಮಂಡಳಿ ಮುಂತಾದವು.

ಅಂದಹಾಗೆ, ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಬಳಕೆಯಲ್ಲಿರುವ ತಂತ್ರಾಂಶಗಳು ತಮ್ಮ ಎಲ್ಲ ಉದ್ದೇಶಗಳನ್ನೂ ಪೂರೈಸಿವೆಯೇ ಎಂಬುದು ಮುಖ್ಯ ಪ್ರಶ್ನೆ. ಇದಕ್ಕೆ ವ್ಯಾಪಕವಾದ ಸಮೀಕ್ಷೆ, ಲೆಕ್ಕ ಪರಿಶೋಧಕರ ವರದಿ ಅಗತ್ಯವಾಗಿದೆ. ಆದರೆ, ಸರ್ಕಾರದ ಎಲ್ಲ ಕಚೇರಿಗಳಲ್ಲಿಯೂ ಸಾಮಾನ್ಯ ಪತ್ರವ್ಯವಹಾರ, ಟಿಪ್ಪಣಿಗಳು ಮುಂತಾದವೆಲ್ಲ ಗಣಕಗಳಲ್ಲಿ, ಕನ್ನಡದಲ್ಲಿಯೇ ನಡೆಯುತ್ತಿದೆ ಎಂಬುದು ಸಮಾಧಾನ ನೀಡುವ ಅಂಶ. ಅಷ್ಟರ ಮಟ್ಟಿಗೆ ಗಣಕಗಳು ಆಡಳಿತದಲ್ಲಿ ಕನ್ನಡವನ್ನು ಉಳಿಸಿವೆ.

ಸಾರ್ವಜನಿಕರು ಬಳಸುವ ಒಂದೆರಡು ತಂತ್ರಾಂಶಗಳನ್ನು ಗಮನಿಸಬಹುದು. ಪಾವತಿ ವ್ಯವಸ್ಥೆಗೆ ಸಂಬಂಧಿಸಿದ ‘ಬೆಂಗಳೂರು ಒನ್’ ಎಂಬ ತಂತ್ರಾಂಶ ವ್ಯವಸ್ಥೆಯ ಸಹಾಯದಿಂದ ವಿದ್ಯುತ್ ಶುಲ್ಕ, ನೀರಿನ ಶುಲ್ಕಗಳಲ್ಲದೇ ದೂರವಾಣಿ ಬಿಲ್ಲುಗಳನ್ನು ಪಾವತಿಸಲು ಅವಕಾಶವಿದೆ. ಪಾಸ್ಪೋರ್ಟ್ ಅರ್ಜಿಯನ್ನು ಪಡೆದುಕೊಳ್ಳಲು ಸಹಾ ಅವಕಾಶವಿದೆ. ಇದೇ ರೀತಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಜಾರಿಗೆ ತಂದಿರುವ ಸ್ಥಳ ಮೀಸಲು ವ್ಯವಸ್ಥೆ ಹಾಗೂ ಈ ಸಂಸ್ಥೆಯೂ ಸೇರಿದಂತೆ ಹಲವು ಸಂಸ್ಥೆಗಳು ಅನ್ವಯಕ್ಕೆ ತಂದುಕೊಂಡಿರುವ ನೇಮಕಾತಿ ವ್ಯವಸ್ಥೆಗಳನ್ನೂ ಇಲ್ಲಿ ನೆನೆಯಬಹುದಾಗಿದೆ.

ದೊಡ್ಡ ಪಟ್ಟಿಯೇ ಆಗಬಹುದಾದ ವೈವಿಧ್ಯಮಯ ಆಡಳಿತ ತಂತ್ರಾಂಶಗಳನ್ನು ಕರ್ನಾಟಕ ಬಳಸಿಕೊಳ್ಳುತ್ತಿದೆ. ಇದು ನಮಗೊಂದಿಷ್ಟು ಸಂತೋಷವನ್ನು ತರಬಲ್ಲ ವಿಚಾರ. ಈ ತಂತ್ರಾಂಶಗಳಲ್ಲೆಲ್ಲ ಕನ್ನಡದ ಬಳಕೆ ಇನ್ನೂ ಹೆಚ್ಚಿದರೆ ಮಾತ್ರ ಈ ಸಂತೋಷ ಅರ್ಥಪೂರ್ಣವೂ ಆಗಬಲ್ಲದು.

ಉತ್ತಮ ತಂತ್ರಾಂಶಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನೀಡುವ ಪ್ರಶಸ್ತಿಗಳೂ ಕರ್ನಾಟಕಕ್ಕೆ ದಕ್ಕಿವೆ ಎಂಬುದನ್ನೂ ಇಲ್ಲಿ ಉಲ್ಲೇಖಿಸಬೇಕು. ಗ್ರಾಮ ಪಂಚಾಯಿತಿ ನಿರ್ವಹಣೆಗೆ ಬಳಸುವ ‘ಪಂಚತಂತ್ರ’ ಅಂಥದೊಂದು ಪ್ರಶಸ್ತಿ ವಿಜೇತ ತಂತ್ರಾಂಶ. ಆದರೆ, ಈ ಪುರಸ್ಕೃತ ತಂತ್ರಾಂಶಗಳು ಇನ್ನೂ ಬಳಕೆಗೆ ಬರಬೇಕಾಗಿದೆ ಎನ್ನುವುದು ಬೇರೆಯ ಮಾತು.

ಹಾದಿ ಇನ್ನೂ ಇದೆ...
ತಂತ್ರಜ್ಞಾನ ಸಂಬಂಧಿ ಪಾರಿಭಾಷಿಕ ಪದಕೋಶವನ್ನು ನಿರ್ಮಿಸುವುದು ಆಗಬೇಕಾದ ಕೆಲಸಗಳಲ್ಲಿ ಮುಖ್ಯವಾದುದಾಗಿದೆ. ಇಲ್ಲದಿದ್ದಲ್ಲಿ ನಮ್ಮ ಆಡಳಿತದಲ್ಲಿ ಬಹುಪಾಲು ಇಂಗ್ಲಿಷ್ ಶಬ್ದಗಳು ತುಂಬಿಕೊಳ್ಳುವ ಅಪಾಯವಿದೆ.ವಿದ್ಯುನ್ಮಾನ ಆಡಳಿತ ಎಂಬುದಕ್ಕೆ ಪರ್ಯಾಯವಾಗಿ ಈಗಾಗಲೇ ‘ಇ-ಆಡಳಿತ’ ಎಂಬ ವಿಚಿತ್ರ ಪ್ರಯೋಗದ ಶಬ್ದ ನೆಲೆಗೊಂಡಿರುವುದನ್ನೇ ನಾವು ಗಮನಿಸಬಹುದು. ಎಲೆಕ್ಟ್ರಾನಿಕ್ ಗವರ್ನೆನ್ಸ್ ಎಂಬುದನ್ನು ಹೀಗೆ ಕನ್ನಡೀಕರಿಸಲಾಗಿದೆ. ಇದು ಎಷ್ಟು ಸರಿ ಎಂದು ಯೋಚಿಸುವ ಹಂತ ಬಹುಶಃ ಈಗಾಗಲೇ ದಾಟಿಹೋಗಿದೆ.

ಕೇಂದ್ರ ಸರ್ಕಾರದ ಒಡೆತನದಲ್ಲಿರುವ ರೈಲ್ವೆ, ಬ್ಯಾಂಕಿಂಗ್ ಮತ್ತು ವಿಮಾ ಕಂಪನಿಗಳು ತಮ್ಮ ತಂತ್ರಾಂಶಗಳಲ್ಲಿ ತ್ರಿಭಾಷಾ ಸೂತ್ರವನ್ನು ಪಾಲಿಸಿವೆಯೇ ಎಂಬುದೂ ಬಹುಮುಖ್ಯ ಪ್ರಶ್ನೆ. ಕೆಲವು ವಿಧದ ರೈಲ್ವೆ ಟಿಕೆಟ್ಗಳಲ್ಲಿ ಮಾತ್ರ ತ್ರಿಭಾಷಾ ಸೂತ್ರ ಕಾಣಿಸಿಕೊಳ್ಳುತ್ತದೆ. ಉಳಿದಂತೆ ಇಲ್ಲ. ಆದರೆ ವಿಮಾಸಂಸ್ಥೆಗಳಲ್ಲಿ ಮಾತ್ರ ತ್ರಿಭಾಷಾ ಸೂತ್ರ ಇಲ್ಲವೇ ಇಲ್ಲ. ಇದು ಕನ್ನಡಿಗರು ತೀವ್ರವಾಗಿ ಗಮನಿಸಬೇಕಾದ ವಿಚಾರ. ಬ್ಯಾಂಕುಗಳಲ್ಲಿ ಕನ್ನಡದ ಸ್ಥಾನ ಯಾವಾಗಲೂ ಗೌಣ.ಕೆಲವು ಬ್ಯಾಂಕಿನ ಎಟಿಎಂಗಳಲ್ಲಿ ಮಾತ್ರ ಕನ್ನಡದ ಮೂಲಕ ವ್ಯವಹರಿಸಲು ಅವಕಾಶವಿದೆ.

ಲೇಖನದ ಆರಂಭದಲ್ಲಿ ಪ್ರಸ್ತಾಪಿಸಿದ ಶಿಷ್ಟತೆಗಳ ವಿಚಾರದಲ್ಲಿ ಕರ್ನಾಟಕ ಸರ್ಕಾರದ ನಿಲುವೇನು ಎಂದು ಪ್ರಶ್ನಿಸಿದರೆ ತೃಪ್ತಿಕರವಾದ ಉತ್ತರ ದೊರೆಯುವುದಿಲ್ಲ. ಮುಕ್ತ ಆಕರ ಕ್ಷೇತ್ರದ ತಂತ್ರಾಂಶಗಳನ್ನು ಬಳಸಕೂಡದು ಎಂದು ರಾಜ್ಯ ಸರ್ಕಾರ ನಿಷೇಧವನ್ನೇನೂ ಹಾಕಿಲ್ಲ. ಆದರೆ, ಕೇಂದ್ರ ಸರ್ಕಾರ ಪ್ರಕಟಿಸಿರುವ ನೀತಿಯನ್ನು ಸಂಪೂರ್ಣವಾಗಿ ಅನುಸರಿಸುತ್ತಿದೆ ಎಂದೂ ಅಲ್ಲ. ಕೇಂದ್ರ ಸರ್ಕಾರವೂ ಇದನ್ನೇ ಅನುಸರಿಸಬೇಕು ಎಂದೇನೂ ಹೇಳಿಲ್ಲ.ಇಂಥ, ವಿರೋಧಾಭಾಸಗಳ ಸಂದರ್ಭದಲ್ಲಿ,ಕ್ರಮೇಣ ಶಿಷ್ಟತೆಯ ಚೌಕಟ್ಟಿನಲ್ಲಿಯೇ ಎಲ್ಲ ತಂತ್ರಾಂಶಗಳೂ ಅಭಿವೃದ್ಧಿಗೊಂಡು ಒಂದು ಸುಂದರ ಚಿತ್ರ ದೊರೆಯುತ್ತದೆಂದು ಪ್ರಸ್ತುತ ಆಶಿಸಬಹುದು, ಅಷ್ಟೇ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.