ಶುಕ್ರವಾರ, ಜನವರಿ 24, 2020
20 °C

ವಿಧಾನ ಸಭೆ ಚುನಾವಣೆ: ಬಿಜೆಪಿಗೆ ಮುನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ಮತ ಎಣಿಕೆ ನಡೆಯುತ್ತಿರುವ ಎಲ್ಲಾ ರಾಜ್ಯಗಳಲ್ಲೂ (ಮಧ್ಯ ಪ್ರದೇಶ, ರಾಜಸ್ತಾನ ಹಾಗೂ ಛತ್ತೀಸ್‌ಗಡ್) ಬಿಜೆಪಿ ಉತ್ತಮ ಮುನ್ನಡೆ ಕಾಯ್ದುಕೊಂಡಿದೆ.

ದೆಹಲಿ: ದಿಕ್ಷೀತ್ ವಿರುದ್ಧ ಕೇಜ್ರಿವಾಲ್ ಗೆ ಮುನ್ನಡೆ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ  ನಾಲ್ಕನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು  ಕಣಕ್ಕಿಳಿದರುವ ಮುಖ್ಯಮಂತ್ರಿ ಶೀಲಾ ದಿಕ್ಷೀತ್ ಅವರಿಗಿಂತ ಆಮ್‌ ಆದ್ಮಿ ಪಕ್ಷದ ಅರವಿಂದ್‌ ಕೇಜ್ರಿವಾಲ್‌ ಸುಮಾರು 2000 ಮತಗಳ ಅಂತರದ ಮುನ್ನಡೆ ಕಾಯ್ದುಕೊಂಡಿದ್ದಾರೆ.

ದೆಹಲಿ ವಿಧಾನಸಭೆಯ 70 ಕ್ಷೇತ್ರಗಳ ಪೈಕಿ 67 ಕ್ಷೇತ್ರಗಳಲ್ಲಿ ಮತ ಎಣಿಕೆ ಕಾರ್ಯ ಭರದಿಂದ ಸಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ (ಬೆಳಿಗ್ಗೆ  10 ಗಂಟೆಯ ವರೆಗಿನ ಅಂಕಿ–ಅಂಶಗಳನ್ನು ಆಧರಿಸಿ) ಬಿಜೆಪಿ 33 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡರೇ, ಎಪಿಪಿ 24 ಸ್ಥಾನಗಳಲ್ಲಿ ಮುನ್ನಡೆ ಪಡೆದಿದೆ. ಅಧಿಕಾರರೂಢ ಕಾಂಗ್ರೆಸ್‌ 09 ಸ್ಥಾನಗಳೊಂದಿಗೆ ಮುನ್ನಡೆಯಲ್ಲಿ 3 ಸ್ಥಾನದಲ್ಲಿದೆ. 2 ಸ್ಥಾನಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.ಮಧ್ಯ ಪ್ರದೇಶ: ಬಿಜೆಪಿ ಮುನ್ನಡೆ

ಭೋಪಾಲ್ (ಪಿಟಿಐ):
230 ಸದಸ್ಯ ಬಲದ ಮಧ್ಯ ಪ್ರದೇಶದ   ವಿಧಾನಸಭೆಯ 214 ಕ್ಷೇತ್ರಗಳ ಮತ ಎಣಿಕೆ  ಕಾರ್ಯ ಪ್ರಗತಿಯಲ್ಲಿದ್ದು, ಬಿಜೆಪಿ ಮುನ್ನಡೆಯಲ್ಲಿ ಮೊದಲ ಸ್ಥಾನದಲ್ಲಿದ್ದು,  ಕಾಂಗ್ರೆಸ್‌ ಎರಡನೇ ಹಾಗೂ ಬಿಎಸ್‌ಪಿ ಮೂರನೇ ಸ್ಥಾನದಲ್ಲಿದೆ.

ಛತ್ತಿಸಗಡ್: ಬಿಜೆಪಿಗೆ ಮುನ್ನಡೆ

ರಾಯಪುರ್ (ಪಿಟಿಐ):
90 ಸದಸ್ಯ ಬಲದ ಛತ್ತಿಸಗಡ್ ವಿಧಾನ ಸಭೆಯ 81 ಕ್ಷೇತ್ರಗಳಲ್ಲಿ ಮತ ಎಣಿಕೆ ಕಾರ್ಯ ಭರದಿಂದ ಸಾಗಿದ್ದು, ಬಿಜೆಪಿ 41 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್‌ 39 ಸ್ಥಾನಗಳಲ್ಲಿ ಮುನ್ನಡೆ ಪಡೆದು ಎರಡನೇ ಸ್ಥಾನದಲ್ಲಿದೆ.

ರಾಜಸ್ತಾನ್: ವಸುಂಧರಾ ರಾಜೆಗೆ ಮುನ್ನಡೆ

ಜೈಪುರ್:
ರಾಜಸ್ತಾನದಲ್ಲಿ ಬಿಜೆಪಿಯ ಮುನ್ನಡೆ ಬದಲಾವಣೆಯ ಗಾಳಿಯನ್ನು  ಬೀಸುವ ಮುನ್ಸೂಚನೆ ನೀಡಿದೆ. ಬಿಜೆಪಿ ಅಭ್ಯರ್ಥಿ ವಸುಂಧರಾ ರಾಜೆ ಅವರು ತಮ್ಮ ಪ್ರತಿ ಸ್ಪರ್ಧಿ ಕಾಂಗ್ರೆಸ್‌ನ ಮೀನಾಕ್ಷಿ ಚಂದ್ರಾವತ್‌ ಅವರಿಗಿಂತ ಸುಮಾರು 3500ಕ್ಕೂ ಅಧಿಕ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

199 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಮಲ ಪಕ್ಷ 130 ಸ್ಥಾನ, ಕಾಂಗ್ರೆಸ್‌ 24 ಹಾಗೂ ಪಕ್ಷೇತರ ಅಭ್ಯರ್ಥಿಗಳು 19 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಪ್ರತಿಕ್ರಿಯಿಸಿ (+)