ಮೈಸೂರು: ಟಿಟಿಎಲ್ ಟ್ರಸ್ಟ್ನಿಂದ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಉಪ್ಪಾರ ಸಮಾಜಕ್ಕೆ ಹಸ್ತಾಂತ ರಿಸಬೇಕು. ಒಂದು ವೇಳೆ ಈ ಕುರಿತು ವಿಳಂಬ ನೀತಿಯನ್ನು ಅನುಸರಿಸಿದರೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ಕ್ಕೆ ಮುತ್ತಿಗೆ ಹಾಕಲು ಭಾನುವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.

`ಉಪ್ಪಾರ ಸಮಾಜಕ್ಕೆ ನ್ಯಾಯ ದೊರಕಿಸಿಕೊಡುವುದಾಗಿ ಮುಡಾ ಹೇಳುತ್ತಲೇ ಇದೆ. ಆದರೆ ಇದುವರೆಗೂ ಆಸ್ತಿಯನ್ನು ಮುಟ್ಟು ಗೋಲು ಹಾಕಿಕೊಂಡು ಉಪ್ಪಾರ ಸಂಘದ ವಶಕ್ಕೆ ನೀಡಿಲ್ಲ. ಮುಡಾ ವಿಳಂಬ ನೀತಿ ಅನುಸರಿಸಿದಲ್ಲಿ ಮುಂಬ ರುವ ಶೈಕ್ಷಣಿಕ ವರ್ಷದಲ್ಲಿ ಗೊಂದಲ ಗಳು ಸೃಷ್ಟಿಯಾಗುತ್ತವೆ. ಕಾನೂನು ಬಾಹಿರವಾಗಿ ಟಿಟಿಎಲ್ ಟ್ರಸ್ಟ್ನವರಿಗೆ ಕಾಲೇಜು ನಡೆಸಿಕೊಡಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ.

ಇದಕ್ಕೆ ಅವಕಾಶ ನೀಡಬಾರದು~ ಎಂದು ಮೈಸೂರು-ಚಾಮರಾಜನಗರ ಜಿಲ್ಲಾ ಉಪ್ಪಾರ ಸಂಘದ ಗೌರವಾಧ್ಯಕ್ಷ ಕೂಡ್ಲೂರು ಹನುಮಂತ ಶೆಟ್ಟಿ ಒತ್ತಾಯಿಸಿದರು.

`ಅತ್ಯಂತ ಹಿಂದುಳಿದ ಉಪ್ಪಾರ ಸಮಾಜಕ್ಕೆ ಮಾರಕವಾಗುವಂತಹ ಯಾವುದೇ ನಿರ್ಣಯಗಳನ್ನು ಮುಡಾ ತೆಗೆದುಕೊಳ್ಳಬಾರದು. ಮುಂದಿನ ಮುಡಾ ಸಾಮಾನ್ಯ ಸಭೆಯಲ್ಲಿ ಆಸ್ತಿಯನ್ನು ಸಂಪೂರ್ಣವಾಗಿ ಸಂಘಕ್ಕೆ ಹಸ್ತಾಂತರ ಮಾಡಬೇಕು~ ಎಂದು ಒತ್ತಾಯಿಸಿದರು.

ವಕೀಲ ಎಸ್.ಅರುಣ್ಕುಮಾರ್ ಮಾತನಾಡಿ, `ಮುಡಾ ವಿಳಂಬ ಮಾಡಬಾರದು. ಮುಂದಿನ ಸಭೆಯಲ್ಲಿ ಮುಡಾ ನ್ಯಾಯ ದೊರಕಿಸಿಕೊಡದೆ ಇದ್ದರೆ ಉಪ್ಪಾರ ಸಮಾಜದ ಕುಲಗುರು ಪುರುಷೋತ್ತ ಮಾನಂದ ಪುರಿ ಸ್ವಾಮೀಜಿ ಅವರ ಮಾರ್ಗದರ್ಶ ನದಲ್ಲಿ ಮುಡಾ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಅಲ್ಲದೆ ಟಿಟಿಎಲ್ ಕಾಲೇಜಿನ ಮುಂದೆ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡ ಲಾಗುವುದು~ ಎಂದು ತಿಳಿಸಿದರು.

`ಟಿಟಿಎಲ್ ಕಾಲೇಜಿನಲ್ಲಿ ಈಗಾ ಗಲೇ ಎಂಬಿಎ ತರಗತಿಗಳನ್ನು ಸ್ಥಗಿತ ಗೊಳಿಸಲಾಗಿದೆ. ಮುಂದೆ ಪದವಿ ಮತ್ತು ಪಿಯುಸಿ ತರಗತಿಗಳು ಸಹ ಸ್ಥಗಿತಗೊಳ್ಳಲಿವೆ. ಮುಂದಿನ ಶೈಕ್ಷಣಿಕ ವರ್ಷದಿಂದ ಪೋಷಕರು ತಮ್ಮ ಮಕ್ಕಳನ್ನು ಕಾಲೇಜಿಗೆ ಸೇರಿಸ ಬಾರದು. ಒಂದು ವೇಳೆ ಸೇರಿಸಿದರೆ ತೊಂದರೆ ಅನುಭವಿಸಬೇಕಾಗುತ್ತದೆ~ ಎಂದು ಹೇಳಿದರು.

ಸಂಘದ ಸಂಚಾಲಕ ಡಿ.ಜಗನ್ನಾಥ ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಸಂಘದ ಸಣ್ಣಮಾದಶೆಟ್ಟಿ, ಲಿಂಗರಾಜು ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.