ವಿವಾದ ಸೃಷ್ಟಿಸಿದ ‘ಕ್ವೀನ್ಸ್ ವೆಜಿನಾ’

ಪ್ಯಾರಿಸ್ (ಎಎಫ್ಪಿ): ಭಾರತ ಮೂಲದ ಬ್ರಿಟನ್ ಶಿಲ್ಪಿ ಅನೀಶ್ ಕಪೂರ್ ಪ್ಯಾರಿಸ್ನಲ್ಲಿ ನಿರ್ಮಿಸಿದ ಶಿಲ್ಪಕಲಾಕೃತಿ ಯೊಂದು ವಿವಾದ ಸೃಷ್ಟಿಸಿದೆ. ಪ್ರತಿ ವರ್ಷ 50 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಬರುವ ವರ್ಸೈಲ್ಸ್ ಅರಮನೆ ಎದುರು ನಿರ್ಮಿಸಲಾದ 60 ಮೀಟರ್ ಉದ್ದ ಮತ್ತು 10 ಮೀಟರ್ ಎತ್ತರದ ಈ ಕಲಾಕೃತಿಯನ್ನು ಕಪೂರ್ ‘ಕ್ವೀನ್ಸ್ ವೆಜಿನಾ’ ಎಂದು ಕರೆದಿದ್ದಾರೆ.
ಉಕ್ಕು ಮತ್ತು ಕಬ್ಬಿಣದಿಂದ ನಿರ್ಮಿಸಲಾದ ಇದು ಕೊಳವೆ ಮಾದರಿಯಲ್ಲಿ ತೆರೆದು ಕೊಂಡಿದೆ. 17 ನೇ ಶತಮಾನದ ಅರಮನೆಯ ಆವರಣದಲ್ಲಿ ಮಂಗಳವಾರದಿಂದ ಆರಂಭವಾಗಲಿರುವ ಪ್ರದರ್ಶನ ನವೆಂಬರ್ವರೆಗೆ ನಡೆಯಲಿದೆ.
ಪರ ವಿರೋಧ ವಾಗ್ವಾದ: ಅನೀಶ್ ಕಪೂರ್ ಅವರ ‘ಕ್ವೀನ್ಸ್ ವೆಜಿನಾ’ ಕಲಾ ಕೃತಿಗೆ ಭಾರಿ ಖಂಡನೆ ವ್ಯಕ್ತವಾಗಿದೆ. ‘ಇದು ಕೆರಳಿಸುವ ಕಲಾಕೃತಿ’ ಎಂದು ಫ್ರಾನ್ಸ್ನ ಕೆಲವು ಮಾಧ್ಯಮಗಳು ಹೇಳಿವೆ. ‘ಅನೀಶ್ ಕಪೂರ್ ವಿವಾದ ಸೃಷ್ಟಿ ಸುವುದಕ್ಕಾಗಿಯೇ ಈ ಶಿಲ್ಪ ರಚಿಸಿದ್ದಾರೆ’ ಎಂದು ‘ಯುರೋಪ್ 1’ ರೇಡಿಯೊ ಹೇಳಿದೆ.
ಅನೀಶ್ ಕಪೂರ್ ಅವರಿಗೆ ದೊಡ್ಡ ಪ್ರಮಾಣದಲ್ಲಿ ಬೆಂಬಲವೂ ವ್ಯಕ್ತವಾಗಿದೆ. ಸಂಕುಚಿತ ಮನಸುಳ್ಳವರು ಮಾತ್ರ ಈ ಕಲಾಕೃತಿಗೆ ವಿರೋಧ ವ್ಯಕ್ತ ಪಡಿಸಲು ಸಾಧ್ಯ ಎಂದು ‘ಲೆಸ್ ಇನ್ರಾಕ್ಸ್’ ಪತ್ರಿಕೆ ಹೇಳಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.