ಸೋಮವಾರ, ಜೂನ್ 14, 2021
26 °C
ನಿಮಗಿದು ತಿಳಿದಿರಲಿ

ವಿವಾಹ ನೋಂದಣಿ- ಎಲ್ಲಿ ಮತ್ತು ಹೇಗೆ?

ಡಾ. ಗೀತಾ ಕೃಷ್ಣಮೂರ್ತಿ Updated:

ಅಕ್ಷರ ಗಾತ್ರ : | |

ವಿವಾಹ ನೋಂದಣಿ ಮಾಡಿಸಲು ಪ್ರಥಮ ಅರ್ಹತೆ ಎಂದರೆ ವರ ೨೧ ವರ್ಷಗಳನ್ನು ಮತ್ತು ವಧು ೧೮ ವರ್ಷಗಳನ್ನು ಪೂರೈಸಿರಬೇಕು.

ವಿವಾಹವನ್ನು ವಿವಾಹ ನಡೆದ ಸ್ಥಳದ ಅಥವಾ ಪತಿ ಪತ್ನಿಯರು ವಾಸಿಸುವ ಸ್ಥಳದ ಅಧಿಕಾರ ವ್ಯಾಪ್ತಿ ಹೊಂದಿರುವ ಸಬ್ ರಿಜಿಸ್ಟ್ರಾರ್‌ ಕಚೇರಿಯಲ್ಲಿ ನೋಂದಣಿ ಮಾಡಿಸಬೇಕು. ಅದಕ್ಕೆ ಅಗತ್ಯವಾದ ಅರ್ಜಿ ನಮೂನೆ ಅದೇ ಕಚೇರಿಯಲ್ಲಿ ದೊರೆಯುತ್ತದೆ. ಇಲ್ಲವೇ ಅದನ್ನು ಅಂತರ್ಜಾಲತಾಣದಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.ಅರ್ಜಿಯನ್ನು ಎಚ್ಚರಿಕೆಯಿಂದ ತುಂಬಿ. ಅರ್ಜಿಗೆ ಮೂವರು ಸಾಕ್ಷಿಗಳು ಸಹಿ ಮಾಡಬೇಕು. ಸ್ನೇಹಿತರು ಅಥವಾ ಬಂಧುಗಳು ಸಾಕ್ಷಿಗಳಾಗಬಹುದು. ಅರ್ಜಿಗೆ ವಧು ಮತ್ತು ವರ(ಪತಿ ಮತ್ತು ಪತ್ನಿ) ಸಹಿ ಮಾಡಬೇಕು. ಆನಂತರ ಅದಕ್ಕೆ ಮೊಹರು ಹಾಕಿ ರಿಜಿಸ್ಟ್ರಾರ್‌ ಸಹಿ ಮಾಡುತ್ತಾರೆ. ಇದೇ ವಿವಾಹ ಪ್ರಮಾಣ ಪತ್ರ. ಇದರ ಎರಡು ಪ್ರತಿಗಳನ್ನು ವಧು ವರರಿಗೆ ಕೊಟ್ಟು ಉಳಿದ ಪ್ರತಿಗಳನ್ನು ದಾಖಲೆಗಾಗಿ ಕಚೇರಿಯಲ್ಲಿ ಇರಿಸಿಕೊಳ್ಳಲಾಗುವುದು.ಅರ್ಜಿಯ ಜೊತೆಯಲ್ಲಿ ಸಲ್ಲಿಸಬೇಕಾಗಿರುವ ದಸ್ತಾವೇಜುಗಳು-

*ನೀಲಿ ಅಥವಾ ಬಿಳಿ ಹಿನ್ನೆಲೆಯಲ್ಲಿ ತೆಗೆಸಿಕೊಂಡಿರುವ ೨ಬಿ ಅಳತೆಯ ವಧು ವರರ ಜಂಟಿ ಭಾವಚಿತ್ರದ ಆರು ಪ್ರತಿಗಳು

*ವಿವಾಹ ಆಹ್ವಾನ ಪತ್ರಿಕೆಯ ಒಂದು ಪ್ರತಿ

*ವಧೂ ವರರ ಗುರುತಿನ ಚೀಟಿ (ಪ್ಯಾನ್ ಕಾರ್ಡ್, ಮತದಾರ ಗುರುತಿನ ಚೀಟಿ ಪಾಸ್‌ಪೋರ್ಟ್)

*ಪತಿಯ ವಿಳಾಸದ ರುಜುವಾತು (ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಮನೆ ಬಾಡಿಗೆ ಒಪ್ಪಂದ ಪತ್ರ, ಟೆಲಿಫೋನ್ ಬಿಲ್ ಅಥವಾ ಪಡಿತರ ಚೀಟಿ)

*ವಧೂವರರಿಬ್ಬರ ವಯಸ್ಸಿನ ರುಜುವಾತು (ಜನನ ದಿನಾಂಕವನ್ನು ನಮೂದಿಸಿರುವ ಹತ್ತನೇ ತರಗತಿಯ ಅಂಕಪಟ್ಟಿ ಅಥವಾ ಪಾಸ್‌ಪೋರ್ಟ್)

*ವಿವಾಹಾನಂತರ ಹೆಸರನ್ನು ಬದಲಾಯಿಸಿಕೊಂಡಿದ್ದರೆ, ಆ ಸಂಬಂಧ ಒಂದು ಅಫಿಡವಿಟ್ಟು ಮತ್ತು ಹೆಸರು ಬದಲಾಯಿಸಿಕೊಂಡ ಬಗ್ಗೆ ಮಾಹಿತಿ ಪ್ರಕಟ ಗೊಂಡಿರುವ ವೃತ್ತ ಪತ್ರಿಕೆ (ಮುಂದಿನ ವಾರ: ರಿಜಿಸ್ಟರ್‌ ಮದುವೆ ಹೇಗೆ)

(ಮುಂದಿನ ವಾರ: ನೋಂದಣಿ ಮಾಡಿಸುವುದು ಹೇಗೆ?--

ಮಾಹಿತಿಗೆ: 9886604878)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.