ಶಿರಾ: ನಗರದ ಫುಟ್ಪಾತ್ ವ್ಯಾಪಾರಿಗಳ ವಿರುದ್ಧ ಗುರುವಾರ ಮುಂಜಾನೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ನಗರಸಭೆ ಸಿಬ್ಬಂದಿ ವ್ಯಾಪಾರಿಗಳ ವಿರೋಧದ ನಡುವೆಯೂ ಅಂಗಡಿಗಳನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾದರು.

ಪೊಲೀಸರ ಸಹಾಯದೊಂದಿಗೆ ಫುಟ್ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾದ ನಗರಸಭೆ ಸಿಬ್ಬಂದಿ ಖಾಸಗಿ ಬಸ್ ನಿಲ್ದಾಣದ ಮುಂಭಾಗ ಹಾಗೂ ಎನ್ಬಿ ರಸ್ತೆಯ ವ್ಯಾಪಾರಿಗಳನ್ನು ಒತ್ತಾಯಪೂರ್ವಕವಾಗಿ ಹೊಸ ಮಾರುಕಟ್ಟೆ ಬಳಿಗೆ ಸ್ಥಳಾಂತರಿಸಿದರು.

ಇದರಿಂದ ಸದಾ ಇಕ್ಕಟ್ಟಿನಿಂದ ಕೂಡಿರುತ್ತಿದ್ದ ನಗರದ ಹೃದಯ ಭಾಗದ ಎನ್ಬಿ ರಸ್ತೆ ಓಡಾಟಕ್ಕೆ ನಿರಾಳವೆನ್ನಿಸಿದರೆ, ಅಪಘಾತಗಳಿಗೆ ಆಹ್ವಾನ ನೀಡುವಂತಿರುತ್ತಿದ್ದ ಖಾಸಗಿ ಬಸ್ ನಿಲ್ದಾಣದ ಮುಂಭಾಗ ಆರಾಮವೆನ್ನಿಸಿತು.

ಬೆಳಗಿನ ಜಾವ 4 ಗಂಟೆಗೆ ಖಾಸಗಿ ಬಸ್ ನಿಲ್ದಾಣದ ಮುಂದೆ ಸೇರುತ್ತಿದ್ದ ಹೂವಿನ ವ್ಯಾಪಾರಿಗಳನ್ನು ಹೊಸ ಮಾರುಕಟ್ಟೆ ರಸ್ತೆಗೆ ಸ್ಥಳಾಂತರಿಸಲಾಯಿತು. ನಂತರ ಹೊಸ ಬಸ್ ನಿಲ್ದಾಣದ ರಸ್ತೆಯ ಬದಿಯಲ್ಲಿ ತರಕಾರಿ ಮತ್ತಿತರ ವಸ್ತುಗಳನ್ನು ಮಾರುತ್ತಿದ್ದ ಮಾರಾಟಗಾರರನ್ನು ಎತ್ತಂಗಡಿ ಮಾಡಿಸಲಾಯಿತು.

ಖಾಸಗಿ ಬಸ್ ನಿಲ್ದಾಣದ ಆವರಣಕ್ಕೆ ಹೊಂದಿಕೊಂಡಿದ್ದ ಕೆಲ ಪೆಟ್ಟಿಗೆ ಅಂಗಡಿಗಳನ್ನು, ಟೆಂಟುಗಳಲ್ಲಿ ನಿರ್ವಹಣೆ ಮಾಡುತ್ತಿದ್ದ ಹೋಟೆಲ್ ಮತ್ತಿತರ ಮುಂಗಟ್ಟುಗಳನ್ನು ತೆರವುಗೊಳಿಸಲಾಯಿತು.

ಬೆಳಗ್ಗೆಯೇ ನಗರಸಭೆ ನೀಡಿದ ಶಾಕ್ನಿಂದ ಫುಟ್ಪಾತ್ ವ್ಯಾಪಾರಿಗಳು ಚೇತರಿಸಿಕೊಳ್ಳಲು ಪರದಾಡಿದರು. ನಂತರ ಹೊಸ ಮಾರುಕಟ್ಟೆ ಬಳಿಗೆ ಬಂದ ಹಲವು ತರಕಾರಿ ಹಾಗೂ ಹೂ ಮಾರಾಟಗಾರರು ಸಿಕ್ಕಸಿಕ್ಕ ಸ್ಥಳಗಳಲ್ಲಿ ತಮ್ಮ ಸರಕನ್ನು ಮಾರಲು ಮುಂದಾದರು.

ಅಷ್ಟರಲ್ಲಿ ಫುಟ್ಪಾತ್ ಮೇಲೆ ತರಕಾರಿ ಮಾರುತ್ತಿದ್ದ ಹಲವು ಜನ ಸಂಘಟಿತರಾಗಿ ಪ್ರತಿಭಟನೆ ಮಾಡಲೆಂದು ಉಳಿದವರನ್ನು ಉತ್ತೇಜಿಸುವ ಕಾರ್ಯದಲ್ಲಿ ತೊಡಗಿಕೊಂಡರು. ಆದರೆ ತರಕಾರಿ ಮಾರಾಟಗಾರರಲ್ಲಿಯೇ ಎರಡು ಗುಂಪುಗಳಾದವು. ಕೆಲವರು ಹೊಸ ಮಾರುಕಟ್ಟೆ ಸ್ಥಳ ತಮಗೆ ಚೆನ್ನಾಗಿದೆ ಎಂದರೆ, ಇನ್ನು ಕೆಲವರು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರು.

ಕ್ಷಿಪ್ರ ಕಾರ್ಯಾಚರಣೆ ಹಿಂದೆ ಷೋಕಾಸ್ ನೋಟಿಸ್
ಹೊಸ ಮಾರುಕಟ್ಟೆ ನಿರ್ಮಾಣಗೊಂಡು ದಶಕವೇ ಉರುಳಿದ್ದರೂ ಈವರೆಗೂ ಫುಟ್ಪಾತ್ ವ್ಯಾಪಾರಿಗಳನ್ನು ಅಲ್ಲಿಗೆ ಸ್ಥಳಾಂತರಿಸದೆ ಈಗ ಏಕಾಏಕಿ ಕಾರ್ಯಾಚರಣೆ ನಡೆಸಲು ಜಿಲ್ಲಾಧಿಕಾರಿಗಳು ನಗರಸಭೆಗೆ ನೀಡಿದ ಷೋಕಾಸ್ ನೋಟಿಸ್ ಕಾರಣವಾಗಿದೆ.

ಹೊಸ ಮಾರುಕಟ್ಟೆ ನಿರ್ಮಾಣ ಕಾರ್ಯ 2002ರಲ್ಲಿ ಪ್ರಾರಂಭಗೊಂಡು 2005ರಲ್ಲಿ ಉದ್ಘಾಟನೆಯಾಗಿದ್ದು, ಈವರೆಗೂ ಅಲ್ಲಿ ಮಾರುಕಟ್ಟೆ ನಡೆದೇ ಇಲ್ಲ. ತರಕಾರಿ, ಹೂ, ಮಾಂಸ ಮಾರಾಟಕ್ಕೆಂದೆ 86 ಕೊಠಡಿಗಳಿದ್ದು, ಎರಡು ಬಾರಿ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆದಿದೆ. ಆದರೆ ಬಿಡ್ಡುದಾರರು ತಮ್ಮ ಕೊ ಠಡಿಗಳನ್ನು ಈವರೆಗೂ ವಹಿಸಿಕೊಂಡಿಲ್ಲ.

ಈ ಕುರಿತು ಸಣ್ಣ ಮಧ್ಯಮ ವಾಣಿಜ್ಯ ಸಂಕೀರ್ಣಗಳ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ, ನಿರ್ಮಾಣಗೊಂಡಿರುವ ಮಳಿಗೆಗಳಿಂದ ಪ್ರತಿ ತಿಂಗಳು ರೂ. 2.80 ಲಕ್ಷ ಬಾಡಿಗೆ ಬರಬೇಕಿದ್ದು, ಇಲ್ಲಿಯವರೆಗೆ ಏಕೆ ಬಾಡಿಗೆ ವಸೂಲಿ ಮಾಡಿಲ್ಲವೆಂದು ಕೋರಿ ನಗರಸಭೆಗೆ ಷೋಕಾಸ್ ನೋಟಿಸ್ ಜಾರಿ ಮಾಡಿದ್ದರು. ನೋಟಿಸ್ ಕ್ಷಿಪ್ರ ಕಾರ್ಯಾಚರಣೆಗೆ ಕಾರಣವಾಯಿತು ಎಂದು ನಗರಸಭೆ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.