ಸೋಮವಾರ, ಜೂನ್ 14, 2021
27 °C
ರಾಣಿ ಚೆನ್ನಮ್ಮ ವಿವಿ ನೇಮಕ ವಿವಾದ

ವಿ.ವಿ. ಕುಲಾಧಿಪತಿ ಭಾರದ್ವಾಜ್‌ಗೆ ಹೈಕೋರ್ಟ್‌ ನೋಟಿಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಸ್ಥಾನಕ್ಕೆ ಬಿ.ಆರ್‌. ಅನಂತನ್‌ ಅವರನ್ನು ನಿಯಮ ಬಾಹಿರವಾಗಿ ಎರಡು ಬಾರಿ ನೇಮಕ ಮಾಡಲಾಗಿದೆ ಎಂದು ಆರೋ­ಪಿಸಿ ಸಲ್ಲಿಸಿರುವ ಅರ್ಜಿಗೆ ಸಂಬಂ­­ಧಿ­ಸಿದಂತೆ ವಿ.ವಿ. ಕುಲಾಧಿಪತಿ ಎಚ್‌.­ಆರ್‌. ಭಾರದ್ವಾಜ್‌ ಅವರಿಗೆ ನೋಟಿಸ್‌ ಜಾರಿಗೆ ಹೈಕೋರ್ಟ್‌ ಆದೇಶಿಸಿದೆ.‘ಅನಂತನ್‌ ಅವರನ್ನು ಮೊದಲು 2010ರ ಆಗಸ್ಟ್‌ 16ರಂದು ಕುಲಪತಿ ಸ್ಥಾನಕ್ಕೆ ನೇಮಕ ಮಾಡಲಾಯಿತು. ಅವರು 2013ರ ಮೇ 2ರಂದು ನಿವೃತ್ತರಾದರು.

ಆದರೆ ವಿ.ವಿ. ಕುಲಾ­ಧಿ­ಪತಿಯೂ ಆಗಿರುವ ರಾಜ್ಯಪಾಲ ಭಾರ­ದ್ವಾಜ್‌ ಅವರು ಅನಂತನ್‌ ಅವರನ್ನು ಪುನಃ ಕುಲಪತಿ ಸ್ಥಾನಕ್ಕೆ ನೇಮಕ ಮಾಡಿ ಜುಲೈ 19ರಂದು ಆದೇಶ ಹೊರಡಿಸಿದ್ದಾರೆ. ಇದು ನಿಯಮ­ಬಾಹಿರ’ ಎಂದು ರಾಘ­ವೇಂದ್ರ ಜೋಶಿ ಎಂಬುವರು ಸಲ್ಲಿ­ಸಿ­ರುವ ಅರ್ಜಿಯಲ್ಲಿ ದೂರಲಾಗಿದೆ.ಇದರ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ಎಚ್‌. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ಪೀಠ, ಏಪ್ರಿಲ್‌ 7ಕ್ಕೆ

ಮುಂದೂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.